More

    ತಕ್ಷಣದಿಂದಲೇ ಜಾರಿಗೆ ಬರುವಂತೆ ಆರ್​ಬಿಐನಿಂದ ಮಹತ್ವದ ಸೂಚನೆ: ಸಾಲ ನೀಡದಂತೆ ನಿರ್ದೇಶನ; ಯಾರಿಗೆ, ಯಾಕೆ?

    ನವದೆಹಲಿ: ಹಣಕಾಸು ಸಂಸ್ಥೆಗಳು ಹಾಗೂ ಆರ್ಥಿಕ ವಹಿವಾಟಿಗೆ ಸಂಬಂಧಿಸಿದಂತೆ ಕ್ರಮಕೈಗೊಳ್ಳುವ ಅವಕಾಶ ಇರುವ ಭಾರತೀಯ ರಿಸರ್ವ್ ಬ್ಯಾಂಕ್ ಇಂದು ತಕ್ಷಣದಿಂದಲೇ ಜಾರಿಗೆ ಬರುವಂಥ ಮಹತ್ವದ ನಿರ್ದೇಶನವೊಂದನ್ನು ನೀಡಿದೆ.

    ಪ್ರಮುಖವಾಗಿ ಸಾಲ ಮಂಜೂರು ಮತ್ತು ಸಾಲ ವಿತರಣೆ ಮಾಡುವುದಕ್ಕೆ ಸಂಬಂಧಿಸಿದಂತೆ ಆರ್​ಬಿಐ ಈ ನಿರ್ದೇಶನವನ್ನು ನೀಡಿದೆ. ಆರ್ಥಿಕ ವಹಿವಾಟಿನಲ್ಲಿ ತೊಡಗಿಸಿಕೊಂಡಿರುವ ಬಜಾಜ್​ ಫೈನಾನ್ಸ್​ ಲಿ. ಕಂಪನಿಗೆ ಆರ್​​ಬಿಐ ಈ ನಿರ್ದೇಶನ ನೀಡಿದೆ.

    ಕಂಪನಿಯು ತನ್ನ ಎರಡು ಸಾಲ ಯೋಜನೆಗಳಾದ ಇಕಾಮ್​ ಮತ್ತು ಇನ್​ಸ್ಟಾ ಇಎಂಐ ಕಾರ್ಡ್​ ಅನ್ವಯ ಯಾವುದೇ ಸಾಲ ಮಂಜೂರು ಮತ್ತು ಸಾಲ ವಿತರಣೆ ಮಾಡಬಾರದು. ತಕ್ಷಣದಿಂದಲೇ ಜಾರಿಗೆ ಬರುವಂತೆ ಈ ಸೂಚನೆಯನ್ನು ಪಾಲಿಸಬೇಕು ಎಂದು ಬಜಾಜ್​ ಫೈನಾನ್ಸ್​​ ಲಿಮಿಟೆಡ್​​ಗೆ ಆರ್​​ಬಿಐ ತಿಳಿಸಿದೆ.

    ಡಿಜಿಟಲ್ ಸಾಲ ನೀಡುವುದಕ್ಕೆ ಸಂಬಂಧಿಸಿದಂತೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಮಾರ್ಗಸೂಚಿಗಳ ನಿಬಂಧನೆಗಳನ್ನು ಕಂಪನಿಯು ಅನುಸರಿಸದಿರುವ ಹಿನ್ನೆಲೆಯಲ್ಲಿ ಆರ್​​ಬಿಐ ಈ ಕ್ರಮಕೈಗೊಂಡಿದೆ. ಅದರಲ್ಲೂ ವಿಶೇಷವಾಗಿ ಈ ಎರಡು ಸಾಲ ನೀಡುವ ಉತ್ಪನ್ನಗಳಿಗೆ ಸಂಬಂಧಿಸಿದಂತೆ ಕೆಲವು ಲೋಪಗಳು ಇರುವುದರಿಂದ ಈ ಕ್ರಮ ಅನಿವಾರ್ಯವಾಗಿದೆ ಎಂದು ಆರ್​​ಬಿಐ ತಿಳಿಸಿದೆ.

    ‘ದೇವ್ರು’ ಮೆಚ್ಚೋ ಆಟ ಆಡಿದ ವಿರಾಟ್​: ‘ಆ ದಿನ ನನಗೆ ನಗು ತಡೆಯಲು ಆಗಲಿಲ್ಲ’ ಎಂದ ಸಚಿನ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts