More

    ಹೌಸಿಂಗ್​ ಸೊಸೈಟಿಯಲ್ಲಿ ಅನಧಿಕೃತ ಲಸಿಕಾ ಕಾರ್ಯಕ್ರಮ : ನಾಲ್ವರ ಬಂಧನ

    ಮುಂಬೈ : ಸರ್ಕಾರ ಜಾರಿಗೊಳಿಸಿರುವ ಪ್ರಕ್ರಿಯೆಯನ್ನು ಪಾಲಿಸದೆ ಹೌಸಿಂಗ್​ ಸೊಸೈಟಿಯೊಂದರಲ್ಲಿ ಅನಧಿಕೃತವಾಗಿ ಕರೊನಾ ಲಸಿಕಾ ಕಾರ್ಯಕ್ರಮ ನಡೆಸಿದ ನಾಲ್ವರನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ. ಈ ಕಾರ್ಯಕ್ರಮದಲ್ಲಿ ಒಟ್ಟು 390 ನಿವಾಸಿಗಳಿಗೆ ಲಸಿಕೆ ನೀಡಲಾಗಿದ್ದು, ಈವರೆಗೂ ಲಸಿಕೆಗಳು ಅಸಲಿಯೋ ನಕಲಿಯೋ ಎಂಬುದು ತಿಳಿದುಬಂದಿಲ್ಲ.

    ಮೇ 30 ರಂದು ಕಾಂದಿವಲಿ(ಪಶ್ಚಿಮ)ಯ ಎಸ್​.ವಿ.ರಸ್ತೆಯಲ್ಲಿರುವ ಹೀರಾನಂದಾನಿ ಹೆರಿಟೇಜ್ ಹೌಸಿಂಗ್ ಸೊಸೈಟಿಯಲ್ಲಿ ಈ ಅಕ್ರಮವಾದ ಲಸಿಕಾ ಕಾರ್ಯಕ್ರಮ ನಡೆದಿದೆ. ಲಸಿಕೆಗಳನ್ನು ಯಾವುದೇ ಅಧಿಕೃತ ಮೂಲದಿಂದ ಸಂಗ್ರಹಿಸಲಾಗಿರಲಿಲ್ಲ. ಅವುಗಳ ಮೇಲೆ ಯಾವುದೇ ಸೀಲ್​ ಕೂಡ ಇರಲಿಲ್ಲ ಎನ್ನಲಾಗಿದ್ದು, ಲಸಿಕೆಗಳು ನಿಜವಾದದ್ದೇ ಎಂದು ಕಂಡುಹಿಡಿಯಲು ತನಿಖೆ ನಡೆಯುತ್ತಿದೆ ಎಂದು ಜೋನ್ 11 ರ ಡಿಸಿಪಿ ವಿಶಾಲ್ ಠಾಕುರ್​ ಹೇಳಿದ್ದಾರೆ.

    ಇದನ್ನೂ ಓದಿ: ಪಬ್​ಜಿ ಲೈವ್​ ಸ್ಟ್ರೀಮಿಂಗ್​ನಲ್ಲಿ ಅಶ್ಲೀಲತೆ: ಚೆನ್ನೈ ಮೂಲದ ಯೂಟ್ಯೂಬರ್​ ದಂಪತಿಯ ಬಂಧನ!

    ವೈದ್ಯರ ಸಂಘದ ಸದಸ್ಯ ಮಹೇಂದ್ರ ಪ್ರತಾಪ್ ಸಿಂಗ್​(39), ಕಾರ್ಯಕ್ರಮ ಆಯೋಜಕ ಸಂಜಯ್​ ಗುಪ್ತ(29), ಖಾಸಗಿ ಆಸ್ಪತ್ರೆ ಉದ್ಯೋಗಿಗಳಾದ ಚಂದನ್ ಸಿಂಗ್ ಅಲಿಯಾಸ್ ಲಲಿತ್(32) ಮತ್ತು ನಿತಿನ್ ಮೋಡೆ (32) ಬಂಧಿತ ಆರೋಪಿಗಳು. ಖಾಸಗಿ ಆಸ್ಪತ್ರೆಯೊಂದರ ಮಾರ್ಕೆಟಿಂಗ್​ ಅಧಿಕಾರಿಯಾಗಿದ್ದ ರಾಜೇಶ್ ಪಾಂಡೆ ಎಂಬುವ ಆರೋಪಿ ತಲೆ ಮರೆಸಿಕೊಂಡಿದ್ದರೆ, ಲಸಿಕೆ ಒದಗಿಸಿದನೆನ್ನಲಾದ ಮತ್ತೊಬ್ಬ ಆರೋಪಿ ಕರೀಂ ಅಲಿ ಖಾನ್ ಎಂಬುವನು ಮಧ್ಯಪ್ರದೇಶದಲ್ಲಿ ತಲೆಮರೆಸಿಕೊಂಡಿರುವ ಸುಳಿವು ಸಿಕ್ಕಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    ಸೊಸೈಟಿ ಸದಸ್ಯರು ಲಸಿಕೆ ಪಡೆದ ಖುಷಿಯಲ್ಲಿದ್ದರೆ, ಲಸಿಕೆ ಸರ್ಟಿಫಿಕೇಟ್​ಗಳು ಸಿಗದಿದ್ದಾಗ ಮತ್ತು ಕೆಲವರಿಗೆ ತಪ್ಪು ವಿವರಗಳಿರುವ ಸರ್ಟಿಫಿಕೇಟ್ ಸಿಕ್ಕಾಗ ಅನುಮಾನಗೊಂಡರು. ಜೂನ್ 12 ರಂದು ನೀಡಿದ ದೂರಿನ ಮೇಲೆ ತನಿಖೆ ನಡೆಸಿದಾಗ ಹಗರಣ ನಡೆದಿರುವುದು ಬೆಳಕಿಗೆ ಬಂತು ಎನ್ನಲಾಗಿದೆ. ಬಂಧಿತ ಆರೋಪಿಗಳನ್ನು ಜೂನ್ 25 ರವರೆಗೆ ಪೋಲೀಸ್​ ಕಸ್ಟಡಿಗೆ ಒಪ್ಪಿಸಲಾಗಿದೆ. ಆರೋಪಿ ಮಹೇಂದ್ರ ಸಿಂಗ್ ಬ್ಯಾಂಕ್​ ಖಾತೆಯಿಂದ 9 ಲಕ್ಷ ರೂಪಾಯಿ ಜಪ್ತಿಪಡಿಸಿಕೊಳ್ಳಲಾಗಿದೆ ಎಂದು ತನಿಖಾಧಿಕಾರಿ ದೀಪ್​ಶಿಖಾ ವಾರೆ ಹೇಳಿದ್ದಾರೆ.

    ಇದನ್ನೂ ಓದಿ: ರಸ್ತೆ ದಾಟುತ್ತಿದ್ದ ಹುಲಿಗೆ ವಾಹನ ಡಿಕ್ಕಿ; ರಾಷ್ಟ್ರೀಯ ಹೆದ್ದಾರಿಯಲ್ಲಿ ದುರಂತ

    ವಿಚಾರಣೆ ವೇಳೆ ಆರೋಪಿಗಳು, ನಗರದಲ್ಲೇ ಇನ್ನೂ 9 ಕಡೆಗಳಲ್ಲಿ ಇದೇ ರೀತಿಯಾಗಿ ಲಸಿಕಾ ಕಾರ್ಯಕ್ರಮ ನಡೆಸಿರುವುದಾಗಿ ಒಪ್ಪಿಕೊಂಡಿದ್ದಾರೆ. ರಾಜೇಶ್ ತೌರಾನಿ ಎಂಬುವರು ತಮ್ಮ 300 ಉದ್ಯೋಗಿಗಳಿಗೆ ನಡೆಸಿದ ಲಸಿಕಾ ಕಾರ್ಯಕ್ರಮದಲ್ಲೂ ಇದೇ ರೀತಿ ವಂಚನೆ ನಡೆದಿರುವ ಬಗ್ಗೆ ವೆರ್ಸೋವ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ ಎನ್ನಲಾಗಿದೆ. (ಏಜೆನ್ಸೀಸ್)

    ನಾಯಕತ್ವ ವಿಚಾರದಲ್ಲಿ ಗೊಂದಲವಿಲ್ಲ… ಅಪಸ್ವರ ಎತ್ತಿದವರ ವಿರುದ್ಧ ಕ್ರಮ : ಸಿಎಂ ಯಡಿಯೂರಪ್ಪ

    ಕೋಮುಸೌಹಾರ್ದ ಕೆಡಿಸುವ ಟ್ವೀಟ್ಸ್​ : ಟ್ವಿಟರ್​ ಇಂಡಿಯ ಎಂಡಿಗೆ ಪೊಲೀಸ್ ನೋಟೀಸ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts