More

    ಪ್ರಣಬ್​ ಮುಖರ್ಜಿ ಆರೋಗ್ಯ ಸ್ಥಿತಿ ಗಂಭೀರ

    ದೆಹಲಿ: ಮಾಜಿ ರಾಷ್ಟ್ರಪತಿ ಪ್ರಣಬ್​ ಮುಖರ್ಜಿ ಅವರ ಆರೋಗ್ಯದಲ್ಲಿ ಯಾವುದೇ ಸುಧಾರಣೆ ಕಂಡು ಬಂದಿಲ್ಲ ಎಂದು ದೆಹಲಿಯ ಆರ್ಮಿ ರಿಸರ್ಚ್​ ಆ್ಯಂಡ್​ ರೆಫೆರಲ್​ ಆಸ್ಪತ್ರೆ ಭಾನುವಾರ ಬೆಳಗ್ಗೆ ಬಿಡುಗಡೆ ಮಾಡಿದ ಹೆಲ್ತ್​​ ಬುಲೆಟಿನ್​ನಲ್ಲಿ ವಿವರಿಸಿದೆ.

    84 ವರ್ಷ ವಯದ್ದಿನ ಪ್ರಣಬ್​ ಮುಖರ್ಜಿ ಡೀಪ್​ ಕೋಮಾಗೆ ಜಾರಿದ್ದು, ಇದುವರೆಗೂ ಅವರ ಸ್ಥಿತಿಯಲ್ಲಿ ಯಾವುದೇ ಬದಲಾವಣೆಗಳಿಲ್ಲ. ಅವರು ಆಳವಾದ ಕೋಮಾದಲ್ಲಿದ್ದು ವೆಂಟಿಲೇಟರ್ ಸಹಾಯದಲ್ಲಿದ್ದಾರೆ. ಅವರ ಪ್ರಮುಖ ನಿಯತಾಂಕಗಳು ಸ್ಥಿರವಾಗಿವೆ ಎಂದು ಆಸ್ವತ್ರೆ ತಿಳಿಸಿದೆ.

    ಇದನ್ನೂ ಓದಿರಿ ಬಿದಿರು ಬೊಂಬಿನಲ್ಲಿ ಕೆಜಿಗಟ್ಟಲೇ ಗಾಂಜಾ ಪತ್ತೆ!

    ಅನಾರೋಗ್ಯಕ್ಕೀಡಾಗಿದ್ದ ಪ್ರಣಬ್ ಮುಖರ್ಜಿ ಅವರನ್ನು ಆ.10ರಂದು ದೆಹಲಿಯ ಕಂಟೋನ್ಮೆಂಟ್‌ನ ಆರ್ಮಿ ರಿಸರ್ಚ್​ ಆ್ಯಂಡ್​ ರೆಫೆರಲ್​ ಆಸ್ಪತ್ರೆ ದಾಖಲಿಸಲಾಗಿತ್ತು. ಅವರಿಗೆ ಮಿದುಳಿನಲ್ಲಿ ರಕ್ತ ಹೆಪ್ಪುಗಟ್ಟಿದ್ದ ಕಾರಣ ಸರ್ಜರಿ ಮಾಡಲಾಗಿದ್ದು, ಬಳಿಕ ವೆಂಟಿಲೇಟರ್​ನಲ್ಲಿಟ್ಟು ಚಿಕಿತ್ಸೆ ಮುಂದುವರಿಸಲಾಗಿದೆ. ಇದಲ್ಲದೆ ಅವರಿಗೆ ಕರೊನಾ ಪಾಸಿಟಿವ್​, ಶ್ವಾಸಕೋಸದಲ್ಲಿ ಸೋಂಕು ಕಾಣಿಸಿಕೊಂಡಿದ್ದರಿಂದ ಚಿಕಿತ್ಸೆ ನೀಡಲಾಗುತ್ತಿದೆ. ಸದ್ಯ ಡೀಪ್​ ಕೋಮಾಕ್ಕೆ ಜಾರಿರುವ ಅವರ ಸ್ಥಿತಿಯಲ್ಲಿ ಸ್ವಲ್ಪವೂ ಬದಲಾವಣೆ ಕಂಡು ಬಂದಿಲ್ಲ. ವೆಂಟಿಲೇಟರ್​ ಸಹಾಯದಲ್ಲಿ ಊಸಿರಾಡುತ್ತಿದ್ದಾರೆ.

    ಪ್ರಣಬ್ ಮುಖರ್ಜಿ ಅವರು 2012ರಿಂದ 2017ರವರೆಗೆ ಭಾರತದ 13ನೇ ರಾಷ್ಟ್ರಪತಿಯಾಗಿ ಸೇವೆ ಸಲ್ಲಿಸಿದ್ದರು.

    ‘ಡೊನಾಲ್ಡ್ ಟ್ರಂಪ್​ ಒಬ್ಬ ಕ್ರೂರಿ, ಮಹಾನ್​ ಸುಳ್ಳುಗಾರ…’

    ಡಿಜೆ ಹಳ್ಳಿ ಗಲಭೆ; ಸಿಸಿಬಿ ಬಂಧಿತ ಸಯ್ಯದ್ ಸಮಿಯುದ್ದೀನ್ ಮಿಸ್ಸಿಂಗ್​… ಹುಡುಕಿಕೊಡಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts