More

    ಬಿಸಿಸಿಐ ಅಧ್ಯಕ್ಷ ಸೌರವ್​ ಗಂಗೂಲಿ ಬುದ್ಧಿವಂತರು, ಅವರೆಂದೂ ನಾಲ್ಕು ದಿನಗಳ ಟೆಸ್ಟ್​ಗೆ ಒಪ್ಪುವುದಿಲ್ಲ: ಪಾಕ್​ ಮಾಜಿ ಕ್ರಿಕೆಟರ್​ ಶೋಯೆಬ್​ ಅಕ್ತರ್​

    ನವದೆಹಲಿ: ಐದು ದಿನದ ಟೆಸ್ಟ್​ ಕ್ರಿಕೆಟ್ ಪಂದ್ಯಾವಳಿಯನ್ನು ನಾಲ್ಕು ದಿನಕ್ಕೆ ಇಳಿಸುವ ಐಸಿಸಿ ಯೋಜನೆ ಬಗ್ಗೆ ಪಾಕಿಸ್ತಾನ ಮಾಜಿ ಬೌಲರ್​ ಶೋಯೆಬ್​ ಅಕ್ತರ್​ ಭಿನ್ನಮತ ವ್ಯಕ್ತಪಡಿಸಿದ್ದಾರೆ.

    ವಿಶ್ವ ಟೆಸ್ಟ್ ಚಾಂಪಿಯನ್​ಷಿಪ್​ನಲ್ಲಿ 2023ರಿಂದ ಚತುರ್ದಿನ ಟೆಸ್ಟ್ ಪಂದ್ಯವನ್ನು ಕಡ್ಡಾಯ ಮಾಡಲು ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ ನಿರ್ಧರಿಸಿದೆ. ಐದು ದಿನಗಳ ಕಾಲ ನಡೆಯುವ ಟೆಸ್ಟ್​ ಪಂದ್ಯಾವಳಿಯನ್ನು ನಾಲ್ಕು ದಿನಕ್ಕೆ ಇಳಿಸುವ ಯೋಜನೆಯನ್ನು ರೂಪಿಸುತ್ತಿದೆ. ಈಗಾಗಲೇ ಹಲವು ಕ್ರಿಕೆಟ್​ ಆಟಗಾರರು ಐಸಿಸಿಯ ಈ ಪರಿಕಲ್ಪನೆಯನ್ನು ತಿರಸ್ಕರಿಸಿದ್ದಾರೆ.

    ಶೋಯೆಬ್​ ಅಕ್ತರ್​ ತಮ್ಮ ಯೂಟ್ಯೂಬ್ ಚಾನಲ್​ನಲ್ಲಿ ನಾಲ್ಕು ದಿನಗಳ ಟೆಸ್ಟ್ ಪಂದ್ಯಾವಳಿಯ ಬಗ್ಗೆ ಮಾತನಾಡಿದ್ದು, ಇದು ಒಪ್ಪಲು ಯೋಗ್ಯವಾದದ್ದಲ್ಲ ಎಂದಿದ್ದಾರೆ.

    ಚತುರ್ದಿನ ಟೆಸ್ಟ್ ಪಂದ್ಯಾವಳಿಗೆ ಭಾರತೀಯ ಕ್ರಿಕೆಟ್​ ನಿಯಂತ್ರಣಾ ಮಂಡಳಿ ಅನುಮೋದನೆ ನೀಡದಿದ್ದರೆ ಅದನ್ನು ಜಾರಿಗೊಳಿಸಲು ಐಸಿಸಿಗೆ ಸಾಧ್ಯವಾಗುವುದಿಲ್ಲ. ಸದ್ಯ ಬಿಸಿಸಿಐ ಅಧ್ಯಕ್ಷರಾಗಿರುವ ಸೌರವ್​ ಗಂಗೂಲಿ ಖಂಡಿತ ನಾಲ್ಕು ದಿನಗಳ ಟೆಸ್ಟ್​ಗೆ ಒಪ್ಪಿಗೆ ನೀಡುವುದಿಲ್ಲ ಎಂದು ಶೋಯೆಬ್​ ಅಕ್ತರ್​ ಹೇಳಿದ್ದಾರೆ.

    ನಾಲ್ಕು ದಿನಗಳ ಟೆಸ್ಟ್​ ಒಂದು ಅವಿವೇಕದ ಪರಿಕಲ್ಪನೆ. ಯಾರಿಗೂ ಇದರಲ್ಲಿ ಆಸಕ್ತಿ ಇಲ್ಲ. ಬಿಸಿಸಿಐ ಅಧ್ಯಕ್ಷ ಸೌರವ್​ ಗಂಗೂಲಿ ಅವರು ಬುದ್ಧಿವಂತರು. ಅವರೆಂದಿಗೂ ಚತುರ್ದಿನ ಟೆಸ್ಟ್​ ನಡೆಸಲು ಸಮ್ಮತಿಸುವುದಿಲ್ಲ. ಟೆಸ್ಟ್​ ಕ್ರಿಕೆಟ್​ ನಾಶವಾಗಲು ಬಿಡುವುದಿಲ್ಲ ಎಂದು ಭರವಸೆ ವ್ಯಕ್ತಪಡಿಸಿದ್ದಾರೆ.

    ಪಾಕಿಸ್ತಾನ, ಶ್ರೀಲಂಕಾ ಮತ್ತು ಭಾರತದ ಹೆಚ್ಚೆಚ್ಚು ಆಟಗಾರರು ಮುನ್ನೆಲೆಗೆ ಬಂದು ನಾಲ್ಕು ದಿನಗಳ ಟೆಸ್ಟ್​ ವಿರುದ್ಧ ಧ್ವನಿ ಎತ್ತಬೇಕು. ಅದರಲ್ಲೂ ನಮ್ಮ ದೇಶದ ಹಳೆಯ ಆಟಗಾರರು ಮಾತನಾಡಬೇಕು ಎಂದು ಶೋಯೆಬ್​ ತಿಳಿಸಿದ್ದಾರೆ.

    ಹಿರಿಯ ಕ್ರಿಕೆಟ್​ ಆಟಗಾರರಾದ ಸಚಿನ್ ತೆಂಡೂಲ್ಕರ್​, ಗೌತಮ್​ ಗಂಭೀರ್​, ಗ್ಲೆನ್ ಮೆಕ್‌ಗ್ರಾತ್, ರಿಕ್ಕಿ ಪಾಂಟಿಂಗ್​ ಕೂಡ ಚತುರ್ದಿನ ಟೆಸ್ಟ್​ಗೆ ವಿರೋಧ ವ್ಯಕ್ತಪಡಿಸಿದ್ದಾರೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts