More

    ಸುಪ್ರೀಂ ಕೋರ್ಟ್ ಮೆಟ್ಟಿಲು ಏರಿದ ಪರಮ್​ಬೀರ್​ ಸಿಂಗ್

    ನವದೆಹಲಿ : ಮಹಾರಾಷ್ಟ್ರದ ಗೃಹ ಸಚಿವ ಅನಿಲ್ ದೇಶ್​ಮುಖ್​ ವಿರುದ್ಧ ಸುಲಿಗೆಯ ರಾಕೆಟ್​ ನಡೆಸುತ್ತಿರುವ ಗಂಭೀರ ಆರೋಪ ಮಾಡಿದ್ದ ಮಾಜಿ ಮುಂಬೈ ಪೊಲೀಸ್ ಕಮಿಷನರ್ ಪರಮ್ ಬೀರ್​ ಸಿಂಗ್, ಇದೀಗ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದಾರೆ. ಹೋಮ್​ ಗಾರ್ಡ್ಸ್ ಇಲಾಖೆಗೆ ತಮ್ಮನ್ನು ವರ್ಗಾವಣೆ ಮಾಡಿರುವ ಸರ್ಕಾರಿ ಆದೇಶವನ್ನು ಪ್ರಶ್ನಿಸುವುದರೊಂದಿಗೆ ದೇಶ್​ಮುಖ್​ರ ‘ವಿವಿಧ ಭ್ರಷ್ಟಾಚಾರ’ದ ಬಗ್ಗೆ ಸಿಬಿಐ ತನಿಖೆ ಕೋರಿದ್ದಾರೆ.

    ಕಳೆದ ವಾರ ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆಗೆ ಗೃಹ ಮಂತ್ರಿ ದೇಶ್​ಮುಖ್​ ಬಗ್ಗೆ ಪತ್ರ ಬರೆದಿದ್ದ ಸಿಂಗ್, ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಿದ್ದರು. ಪತ್ರದಲ್ಲಿ, ದೇಶ್​ಮುಖ್​ ಅವರು ಹಲವು ಪೊಲೀಸ್ ಅಧಿಕಾರಿಗಳೊಂದಿಗೆ ಪಬ್​ ಮತ್ತು ರೆಸ್ಟೊರೆಂಟ್​ಗಳಿಂದ ಹಣ ಸುಲಿಗೆ ಮಾಡುವ ದಂಧೆ ನಡೆಸುತ್ತಿದ್ದಾರೆ ಎಂದು ಆರೋಪಿಸಿದ್ದರು.

    ಇದನ್ನೂ ಓದಿ: ಭಾರತೀಯರಿಗೆ ಸ್ಪೆಷಲ್​ ಆಗಿ ಬರ್ತಿದೆ ಸ್ಕೋಡಾ ‘ಕುಶಾಕ್​’; ಇದರ ಸ್ಪೆಷಾಲಿಟಿ ಏನೆಂದು ತಿಳಿದುಕೊಳ್ಳಿ

    ಇದೀಗ ಸುಪ್ರೀಂ ಕೋರ್ಟ್​ನಲ್ಲಿ ತಮ್ಮನ್ನು ಮುಂಬೈ ಕಮಿಷನರ್ ಹುದ್ದೆಯಿಂದ ವರ್ಗಾಯಿಸಿ ಹೋಂ ಗಾರ್ಡ್ಸ್ ಮುಖ್ಯಸ್ಥನನ್ನಾಗಿ ಮಾಡಿರುವ ರಾಜ್ಯ ಸರ್ಕಾರದ ಆದೇಶವನ್ನು ಪರಮ್ ಬೀರ್ ಸಿಂಗ್ ಪ್ರಶ್ನಿಸಿದ್ದಾರೆ. ಜೊತೆಗೇ ದೇಶ್​​ಮುಖ್​ ಅವರ ಮೇಲಿರುವ ಭ್ರಷ್ಟಾಚಾರದ ಆರೋಪಗಳ ನಿಷ್ಕಕ್ಷಪಾತವಾದ ತನಿಖೆಗೆ ಆದೇಶಿಸಬೇಕೆಂದು ಕೋರಿದ್ದಾರೆ. (ಏಜೆನ್ಸೀಸ್)

    VIDEO | ಸೀರಿಸ್ ಗೆದ್ದ ನಂತರ ಯುವಿ​ಗೆ ಸಿಕ್ಕಿತು ವಿಶೇಷ ಸ್ವಾಗತ !

    ಆಟದ ನಡುವೆ ಪೆಟ್ಟಿಗೆ ಒಳಕ್ಕೆ ಜಿಗಿದ ಮುಗ್ಧ ಮಕ್ಕಳು… ಅಲ್ಲಿ ಕಾಯುತ್ತಿದ್ದ ಜವರಾಯ !

    “ಬೇಕಿದ್ದರೆ ನನ್ನ ತಲೆಯ ಮೇಲೆ ಕಾಲಿಟ್ಟು ಒದೆಯಿರಿ, ಆದರೆ…”

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts