More

    ನೂತನ ಕೆಪಿಸಿಸಿ‌ ಕಾರ್ಯಾಧ್ಯಕ್ಷರಾಗಿ ಬಿ.ಎನ್. ಚಂದ್ರಪ್ಪ ನೇಮಕ

    ಬೆಂಗಳೂರು: ದಿವಂಗತ ಆರ್​. ಧ್ರುವನಾರಾಯಣ್ ನಿಧನದಿಂದ ತೆರವಾಗಿದ್ದ ಕೆಪಿಸಿಸಿ ಕಾರ್ಯಾಧ್ಯಕ್ಷ ಸ್ಥಾನಕ್ಕೆ ಮಾಜಿ ಸಂಸದರಾದ ಬಿ.ಎನ್​. ಚಂದ್ರಪ್ಪ ಅವರನ್ನು ಎಐಸಿಸಿ​ ನೇಮಿಸಿದೆ.

    ಕಾಂಗ್ರೆಸ್​ನಿಂದ ಬಿ.ಎನ್​. ಚಂದ್ರಪ್ಪ ಅವರಿಗೆ ನೂತನ ಜವಬ್ದಾರಿಯನ್ನು ನೀಡಲಾಗಿದೆ. ಕೆಪಿಸಿಸಿ ಕಾರ್ಯಾಧ್ಯಕ್ಷ ಸ್ಥಾನಕ್ಕೆ ದಲಿತ (ಎಡಗೈ) ನಾಯಕ ಬಿ.ಎನ್ ಚಂದ್ರಪ್ಪ ಅವರನ್ನು ನೇಮಕ ಮಾಡಲಾಗಿದೆ.

    ಎಸ್ಸಿ ಲೆಫ್ಟ್​ಗೆ ಕೆಪಿಸಿಸಿ ವರ್ಕಿಂಗ್ ಪ್ರೆಸಿಡೆಂಟ್ ಸ್ಥಾನ ನೀಡಬೇಕು ಎಂದು ಈ ಹಿಂದೆ ಎಡಗೈ ನಾಯಕರು ಒತ್ತಾಯ ಮಾಡಿದ್ದರು. ಇದೀಗ ಎಡಗೈ ನಾಯಕರ ಬೇಡಿಕೆಯನ್ನು ಕಾಂಗ್ರೆಸ್​ ಹೈಕಮಾಂಡ್​ ಈಡೇರಿಸಿದೆ. ಈ ಮೂಲಕ ದಲಿತ ಎಡಗೈ ಸಮುದಾಯವನ್ನು ಚುನಾವಣಾ ಸಂದರ್ಭದಲ್ಲಿ ಮನವೊಲಿಸಿದಂತಿದೆ.

    ಇದನ್ನೂ ಓದಿ: ನೀವು ಕೂಡ ಒಂದು ಹೆಣ್ಣಿಗೆ ಹುಟ್ಟಿದವರಲ್ಲವೇ? ಅಭಿಮಾನಿ ಕಾಮೆಂಟ್​ಗೆ ಪವನ್ ಕಲ್ಯಾಣ್​ ಮಾಜಿ ಪತ್ನಿ ಕಣ್ಣೀರು

    KPCC Working President

    ಕಾಂಗ್ರೆಸ್​ ಕಟ್ಟಾಳು ಹಾಗೂ ಕೆಪಿಸಿಸಿ ಕಾರ್ಯಾಧ್ಯಕ್ಷರಾಗಿದ್ದ ಆರ್​. ಧ್ರುವನಾರಾಯಣ (61) ಅವರು ತೀವ್ರ ಹೃದಯಾಘಾತದಿಂದ ಮೈಸೂರಿನ ಡಿಆರ್​ಎಂ ಆಸ್ಪತ್ರೆಯಲ್ಲಿ ಮಾ.11ರಂದು ವಿಧಿವಶರಾದರು. ಅವರು ಕಾಂಗ್ರೆಸ್​ ಪಕ್ಷದ ನಿಷ್ಠಾವಂತ ನಾಯಕರಾಗಿದ್ದರು. ಚಾಮರಾಜನಗರ ಲೋಕಸಭಾ ಕ್ಷೇತ್ರದಲ್ಲಿ ಎರಡು ಬಾರಿ ಸಂಸದರಾಗಿ ಆಯ್ಕೆಯಾಗಿದ್ದರು. 2004ರಲ್ಲಿ ಸಂತೇಮರಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಕೇವಲ ಒಂದು ಮತದ ಅಂತರದಲ್ಲಿ ಗೆಲುವು ಸಾಧಿಸಿದ್ದರು.

    ಇದನ್ನೂ ಓದಿ: ಬಂಡೀಪುರ ಹುಲಿ ಯೋಜನೆಗೆ 50 ವರ್ಷ: ವ್ಯಾಘ್ರಗಳ ಸುರಕ್ಷಿತ ನೆಲೆಯ ಬಗ್ಗೆ ತಿಳಿಯಬೇಕಾದ ಮಾಹಿತಿ ಇಲ್ಲಿದೆ…

    ಧ್ರುವನಾರಾಯಣ ನಿಧನ ಬೆನ್ನಲ್ಲೇ ಅವರ ಪತ್ನಿ ವೀಣಾ ಧ್ರುವನಾರಾಯಣ ಕೂಡ ಏಪ್ರಿಲ್​ 7ರಂದು ವಿಧಿವಶರಾಗಿದ್ದಾರೆ.

    ತಂದೆ ಧ್ರುವನಾರಾಯಣ ಮೃತಪಟ್ಟ ಹಿನ್ನೆಲೆಯಲ್ಲಿ ದರ್ಶನ್​ ಅವರಿಗೆ ನಂಜನಗೂಡು ಕ್ಷೇತ್ರದಿಂದ ಕಾಂಗ್ರೆಸ್​ ಟಿಕೆಟ್​ ನೀಡಲಾಗಿದೆ. ತಂದೆಯ ಸಾವಿನ ನೋವಲ್ಲೂ ಚುನಾವಣಾ ಚಟುವಟಿಕೆಯಲ್ಲಿ ಬಿಜಿಯಾಗಿದ್ದ ದರ್ಶನ್​ಗೆ ಇದೀಗ ತಾಯಿಯೂ ಮೃತಪಟ್ಟ ಸುದ್ದಿ ತೀವ್ರ ಆಘಾತ ನೀಡಿದೆ.

    ಧ್ರುವನಾರಾಯಣ ಪತ್ನಿ ವೀಣಾ ವಿಧಿವಶ: ತಂದೆ ಬೆನ್ನಲ್ಲೇ ತಾಯಿಯನ್ನೂ ಕಳೆದುಕೊಂಡ ದರ್ಶನ್​

    ನೀವು ಕೂಡ ಒಂದು ಹೆಣ್ಣಿಗೆ ಹುಟ್ಟಿದವರಲ್ಲವೇ? ಅಭಿಮಾನಿ ಕಾಮೆಂಟ್​ಗೆ ಪವನ್ ಕಲ್ಯಾಣ್​ ಮಾಜಿ ಪತ್ನಿ ಕಣ್ಣೀರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts