More

    ಬಂಡೀಪುರದಲ್ಲಿ ನಮೋ ಸಫಾರಿ: ಗಮನ ಸೆಳೆದ ಬಂಡೀಪುರ ಲೋಗೋ ಇರುವ ದಿರಿಸು..

    ಗುಂಡ್ಲುಪೇಟೆ: ದೇಶದ ಪ್ರಸಿದ್ಧ ಹುಲಿ ಸಂರಕ್ಷಿತಾರಣ್ಯ ಪ್ರದೇಶಗಳಲ್ಲಿ ಒಂದಾದ ಬಂಡೀಪುರಕ್ಕೆ ಆಗಮಿಸಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿ ಕಾಡಿನೊಳಗೆ ಸಫಾರಿಗೆ ತೆರಳಿದ್ದಾರೆ.

    ಜೀವ ವೈವಿಧ್ಯತೆಗೆ ಹೆಸರಾಗಿರುವ ಬಂಡೀಪುರದಲ್ಲಿ ಯಾವ ವನ್ಯಜೀವಿ ಪ್ರಧಾನ ಮಂತ್ರಿಗಳ ಕಣ್ಣಿಗೆ ಕಾಣಿಸಿಕೊಳ್ಳಲಿದೆ ಎನ್ನುವ ಕುತೂಹಲ ಮನೆ ಮಾಡಿದೆ. ಕಾಡಿನೊಳಗೆ ಪ್ರಾಣಿಗಳ ದರ್ಶನವೂ ಅದೃಷ್ಣ ಇದ್ದಂತೆ. ಪ್ರಧಾನಿ ಮೋದಿ ಅವರಿಗೆ ವ್ಯಾಘ್ರ ನೋಡುವ ಅದೃಷ್ಣ ಇದೆಯೋ ಅಥವಾ ಇಲ್ಲವೋ ಗೊತ್ತಾಗಲಿದೆ.

    ಇದನ್ನೂ ಓದಿ: ಬಂಡೀಪುರದಲ್ಲಿ ನಮೋ: ಸಾಮಾನ್ಯ ಬೊಲೆರೋ ವಾಹನದಲ್ಲಿ ಪ್ರಧಾನಿ ಮೋದಿ ಸಫಾರಿ

    PM modi in Bandipur

    ಪ್ರಧಾನಿ ಮೋದಿ ಸುಮಾರು 12ಕ್ಕೂ ಹೆಚ್ಚು ಕಿ.ಮೀ ದೂರು ಸಫಾರಿ ನಡೆಸಲಿದ್ದಾರೆ. ಬಂಡೀಪುರದ ಕ್ಯಾಂಪಸ್​ನಿಂದ ಸಫಾರಿ ಆರಂಭ‌ ಮಾಡಿದ್ದಾರೆ. ಸಫಾರಿ ಡ್ರೆಸ್ ಕೊಡ್​ನಲ್ಲಿ ನಮೋ ಮಿಂಚುತ್ತಿದ್ದಾರೆ.

    ಗಮನ ಸೆಳೆದ ಬಂಡೀಪುರ ಲೋಗೋ ಇರುವ ದಿರಿಸು
    ಪ್ರಧಾನ ಮಂತ್ರಿ ನರೇಂದ್ರಮೋದಿ ಧರಿಸುವ ಬಂಡೀಪುರ ಲೋಗೋ ದಿರಿಸು ಗಮನ ಸೆಳೆಯುತ್ತಿದೆ. ಗುಂಡ್ಲುಪೇಟೆ ತಾಲೂಕಿನ ಬಂಡೀಪುರಕ್ಕೆ ವಿಶೇಷ ಹೆಲಿಕಾಪ್ಟರ್​ನಲ್ಲಿ ಪ್ರಧಾನಿ ನರೇಂದ್ರ ಮೋದಿ ಬಂದಿಳಿದರು.

    ಇದನ್ನೂ ಓದಿ: ಬಂಡೀಪುರದಲ್ಲಿ ಮೋದಿ ಸಫಾರಿ: ಹುಲಿ ರಕ್ಷಿತಾರಣ್ಯದಲ್ಲಿ ಪ್ರಧಾನಿ ಪ್ರವಾಸ; ತೆಪ್ಪಕಾಡು ಆನೆ ಶಿಬಿರಕ್ಕೆ ಭೇಟಿ

    PM modi in Bandipur

    ಮೇಲುಕಾಮನಹಳ್ಳಿ ಹೆಲಿಪ್ಯಾಡ್​ನಿಂದ ಸಫಾರಿ ಕೇಂದ್ರಕ್ಕೆ ತೆರಳಿದರು. ನಮೋ ಬಂಡೀಪುರ ಟೈಗರ್ ರಿಸರ್ವ್ ಲೋಗೋ ಇರುವ ಜಾಕೆಟ್, ಅರಣ್ಯ ಇಲಾಖೆ ಯೂನಿಫಾರ್ಮ್ ಹೋಲುವ ಟೀ ಶರ್ಟ್​ನಲ್ಲಿ ಮಿಂಚಿದ್ದಾರೆ.

    ಬಂಡೀಪುರ ಹುಲಿ ಯೋಜನೆಗೆ 50 ವರ್ಷ: ವ್ಯಾಘ್ರಗಳ ಸುರಕ್ಷಿತ ನೆಲೆಯ ಬಗ್ಗೆ ತಿಳಿಯಬೇಕಾದ ಮಾಹಿತಿ ಇಲ್ಲಿದೆ…

    ಮೋಜಿನ ಈಜು ಜೀವಕ್ಕೆ ಕುತ್ತು ತಂದೀತು.. ಎಚ್ಚರ!: ಪ್ರತಿ ಬೇಸಿಗೆಯಲ್ಲಿ ನೂರಾರು ಜನ ನೀರುಪಾಲು, ಮಕ್ಕಳ ಮೇಲೆ ಪಾಲಕರಿಗಿರಲಿ ಹದ್ದಿನ ಕಣ್ಣು

    ಸ್ಲಂ-ಮುಕ್ತ ಮುಂಬೈ ಸಾಧ್ಯವೇ?: ಧಾರಾವಿ ಪುನರಾಭಿವೃದ್ಧಿ ಯೋಜನೆ ಟೆಂಡರ್ ಅದಾನಿಗೆ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts