More

    ಅತ್ಯಾಚಾರ ಪ್ರಕರಣದಲ್ಲಿ ಮಾಜಿ ಸಚಿವನಿಗೆ ಜೀವಾವಧಿ ಶಿಕ್ಷೆ

    ಲಖನೌ: ಉತ್ತರಪ್ರದೇಶದ ಮಾಜಿ ಸಾರಿಗೆ ಮತ್ತು ಗಣಿ ಸಚಿವ ಗಾಯತ್ರಿ ಪ್ರಸಾದ್​ ಪ್ರಜಾಪತಿಗೆ ಅತ್ಯಾಚಾರದ ಪ್ರಕರಣದಲ್ಲಿ ಲಖನೌನ ವಿಶೇಷ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ. ಅಖಿಲೇಶ್​​ ಯಾದವ್​​ ಸರ್ಕಾರದಲ್ಲಿ ಪ್ರಮುಖ ಸ್ಥಾನ ಹೊಂದಿದ್ದ ಈ ಸಮಾಜವಾದಿ ಪಕ್ಷದ ನಾಯಕನ ವಿರುದ್ಧ ಮಹಿಳೆಯೊಬ್ಬಳ ಗ್ಯಾಂಗ್​ ರೇಪ್​ ಮೊಕದ್ದಮೆ ಇತ್ಯರ್ಥವಾಗಿದೆ.

    ಪ್ರಜಾಪತಿಯೊಂದಿಗೆ ಇತರ ಇಬ್ಬರು, ಚಿತ್ರಕೂಟ ನಿವಾಸಿಯಾದ ಮಹಿಳೆಯನ್ನು ಅತ್ಯಾಚಾರ ಮಾಡಿ, ಅವಳ ಅಪ್ತಾಪ್ತ ವಯಸ್ಕ ಮಗಳ ಮೇಲೆ ಅತ್ಯಾಚಾರದ ಯತ್ನ ಮಾಡಿದ ಆರೋಪಗಳಡಿ ಅಪರಾಧಿಗಳೆಂದು ವಿಶೇಷ ನ್ಯಾಯಾಧೀಶರಾದ ಪಿ.ಕೆ.ರೈ ಆದೇಶ ಹೊರಡಿಸಿದ್ದಾರೆ. ಮಾಜಿ ಕಂದಾಯ ಗುಮಾಸ್ತನಾದ ಆಶಿಶ್ ಶುಕ್ಲ ಮತ್ತು ಗುತ್ತಿಗೆದಾರನಾಗಿದ್ದ ಅಶೋಕ್​ ತಿವಾರಿ ಇನ್ನಿಬ್ಬರು ಅಪರಾಧಿಗಳಾಗಿದ್ದು, ಮೂವರಿಗೂ ಜೀವಾವಧಿ ಶಿಕ್ಷೆ ನೀಡಲಾಗಿದೆ. ಪ್ರಕರಣದಲ್ಲಿ ಆರೋಪಿಗಳಾಗಿದ್ದ ಇತರ ನಾಲ್ವರನ್ನು ಸಾಕ್ಷ್ಯಗಳ ಅಭಾವವಿರುವ ಕಾರಣ ಖುಲಾಸೆ ಮಾಡಲಾಗಿದೆ.

    ಇದನ್ನೂ ಓದಿ: ಮದುವೆ ಮನೆಯಲ್ಲಿ ಊಟ ಮಾಡಿದ 150ಕ್ಕೂ ಹೆಚ್ಚು ಮಂದಿ ಅಸ್ವಸ್ಥ

    ಪ್ರಕರಣದ ವಿವರ: ಮಾಜಿ ಸಚಿವ ಪ್ರಜಾಪತಿ ಮತ್ತು ಸಹಚರರು ತನ್ನ ಮೇಲೆ ಅಕ್ಟೋಬರ್​ 2014 ರಿಂದ ಅತ್ಯಾಚಾರ ಎಸಗುತ್ತಿದ್ದಾರೆ. ಜುಲೈ 2016 ರಲ್ಲಿ ತನ್ನ ಮಗಳಿಗೆ ಲೈಂಗಿಕ ಕಿರುಕುಳ ನೀಡಿ ಅತ್ಯಾಚಾರದ ಯತ್ನ ಮಾಡಿದ ನಂತರ ಅವರ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾಗಿ ದೂರುದಾರ ಮಹಿಳೆ ಹೇಳಿದ್ದಳು. ಪೊಲೀಸರ ನಿಷ್ಕ್ರಿಯತೆಯ ವಿರುದ್ಧ ಸಂತ್ರಸ್ತೆ ಸುಪ್ರೀಂ ಕೋರ್ಟ್​ ಮೊರೆ ಹೋದ ನಂತರ ಕೋರ್ಟ್​ ನಿರ್ದೇಶನದ ಮೇರೆಗೆ ಗೌತಮ್​ಪಲ್ಲಿ ಪೊಲೀಸರು 2017 ರ ಫೆಬ್ರವರಿ 18 ರಂದು ಎಫ್​ಐಆರ್​ ದಾಖಲಿಸಿದ್ದರು. ಪ್ರಜಾಪತಿಯನ್ನು  2017ರ ಮಾರ್ಚ್​ ತಿಂಗಳಲ್ಲಿ ಬಂಧಿಸಲಾಗಿತ್ತು. ಈ ಪ್ರಕರಣದಲ್ಲಿ 17 ಸಾಕ್ಷಿದಾರರನ್ನು ನ್ಯಾಯಾಲಯದಲ್ಲಿ ವಿಚಾರಣೆ ಮಾಡಲಾಗಿತ್ತು. (ಏಜೆನ್ಸೀಸ್)

    ವಿರಾಟ್​​ ಕೊಹ್ಲಿ ಪುತ್ರಿಗೆ ರೇಪ್​ ಬೆದರಿಕೆ ಹಾಕಿದ್ದವ ಪೊಲೀಸ್​ ವಶಕ್ಕೆ

    ಡಿಸೆಂಬರ್​​ನ ಈ ದಿನಗಳಲ್ಲಿ ಕತ್ರೀನಾ ಕೈಫ್​ – ವಿಕಿ ಕೌಶಲ್​ ವಿವಾಹ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts