More

    ಕಾಂಗ್ರೆಸ್​ಗೆ​ ರಾಜೀನಾಮೆ ನೀಡಿದ ಮಹಾರಾಷ್ಟ್ರದ ಮಾಜಿ ಸಿಎಂ ಅಶೋಕ್‌ ಚೌಹಾಣ್‌ ಬಿಜೆಪಿ ಸೇರ್ತಾರಾ?

    ಮಹಾರಾಷ್ಟ್ರ: ಲೋಕಸಭೆ ಚುನಾವಣೆಗೂ ಮುನ್ನ ಮಹಾರಾಷ್ಟ್ರದಲ್ಲಿ ಕಾಂಗ್ರೆಸ್ ಭಾರೀ ಹಿನ್ನಡೆ ಅನುಭವಿಸಿದೆ. ಮಾಜಿ ಮುಖ್ಯಮಂತ್ರಿ ಅಶೋಕ್‌ ಚೌಹಾಣ್‌ ಅವರು ಪಕ್ಷಕ್ಕೆ ಮಾತ್ರವಲ್ಲದೆ, ಶಾಸಕ ಸ್ಥಾನಕ್ಕೂ ರಾಜೀನಾಮೆ ನೀಡಿದ್ದು, ಅವರು ಬಿಜೆಪಿ ಸೇರಬಹುದು ಎಂಬ ವರದಿಗಳಿವೆ.

    ಸದ್ಯ ಅಶೋಕ್‌ ಚೌಹಾಣ್‌ ಜತೆಗೆ 2ರಿಂದ 4 ಕಾಂಗ್ರೆಸ್ ಶಾಸಕರಿದ್ದಾರೆ. ಈ ಶಾಸಕರೂ ಬಿಜೆಪಿ ಸೇರುವ ಸಾಧ್ಯತೆ ಇದೆ. ಕಾಂಗ್ರೆಸ್ ಕಾರ್ಪೊರೇಟರ್‌ಗಳೂ ಬಿಜೆಪಿ ಸೇರಲಿದ್ದಾರೆ. ಬಿಜೆಪಿಯು ಅಶೋಕ್‌ ಚೌಹಾಣ್‌ ಅವರನ್ನು ಮಹಾರಾಷ್ಟ್ರದಿಂದ ರಾಜ್ಯಸಭೆಗೆ ಕಳುಹಿಸಬಹುದು ಎನ್ನಲಾಗಿದೆ.

    ಅಶೋಕ್‌ ಚೌಹಾಣ್‌ ರಾಜೀನಾಮೆಗೂ ಮುನ್ನ ಮಿಲಿಂದ್ ದಿಯೋರಾ ಮತ್ತು ಬಾಬಾ ಸಿದ್ದಿಕಿ ಕಾಂಗ್ರೆಸ್‌ಗೆ ರಾಜೀನಾಮೆ ನೀಡಿದ್ದರು. ಸಿದ್ದಿಕಿ ಅವರು ಅಜಿತ್ ಪವಾರ್ ಬಣದ ಎನ್‌ಸಿಪಿ ಸೇರಿದ್ದಾರೆ. ದೇವರಾ ಶಿಂಧೆ ಶಿವಸೇನೆಗೆ ಸೇರ್ಪಡೆಯಾಗಿದ್ದಾರೆ.

    ಮೂಲಗಳ ಪ್ರಕಾರ, ಅಶೋಕ್‌ ಚೌಹಾಣ್‌ ಅವರು ಮಹಾರಾಷ್ಟ್ರ ಕಾಂಗ್ರೆಸ್ ಅಧ್ಯಕ್ಷ ನಾನಾ ಪಟೋಲೆ ವಿರುದ್ಧ ಸಿಟ್ಟಾಗಿದ್ದರು. ಅವರನ್ನು ಲೋಕಸಭೆ ಚುನಾವಣೆಗೆ ಸ್ಪರ್ಧಿಸುವಂತೆ ಪಕ್ಷ ಕೇಳಿಕೊಂಡಿದೆ ಎಂದು ಮೂಲಗಳು ತಿಳಿಸಿವೆ. ಆದರೂ ಅವರು ಇದನ್ನು ನಿರಾಕರಿಸಿದರು. ಸದ್ಯ ಬಿಜೆಪಿಯ ಅಲೆ ಎದ್ದಿದೆ ಎಂದರು.

    ಅಶೋಕ್‌ ಚೌಹಾಣ್‌ 2008 ರಿಂದ 2010 ರವರೆಗೆ ಮಹಾರಾಷ್ಟ್ರದ ಮುಖ್ಯಮಂತ್ರಿಯಾಗಿದ್ದರು. ಅವರ ತಂದೆ ಶಂಕರರಾವ್ ಚೌಹಾಣ್‌ ಕೂಡ ಮಹಾರಾಷ್ಟ್ರದ ಸಿಎಂ ಆಗಿದ್ದರು. ಚೌಹಾಣ್‌ ಅವರು 2015 ರಿಂದ 2019 ರವರೆಗೆ ಮಹಾರಾಷ್ಟ್ರ ಕಾಂಗ್ರೆಸ್ ಅಧ್ಯಕ್ಷರಾಗಿದ್ದರು. 1987ರಲ್ಲಿ ಮೊದಲ ಬಾರಿಗೆ ಲೋಕಸಭೆಯ ಸಂಸದರಾಗಿ ಆಯ್ಕೆಯಾದರು. ಇದಾದ ಬಳಿಕ 1999ರಿಂದ 2014ರವರೆಗೆ ಮೂರು ಬಾರಿ ಶಾಸಕರಾಗಿದ್ದರು. 2014ರಲ್ಲಿ ಎರಡನೇ ಬಾರಿಗೆ ಸಂಸದರಾಗಿ ಆಯ್ಕೆಯಾದರು. 

    ರಾಜ್ಯ ಬಜೆಟ್ ಅಧಿವೇಶನ: ಕೇಸರಿ ಶಾಲು ಧರಿಸಿ ಸದನದಲ್ಲಿ ಮಿರಮಿರ ಮಿಂಚಿದ ಬಿಜೆಪಿ ಶಾಸಕರು

    ಕತಾರ್‌ನಿಂದ ಬಿಡುಗಡೆಯಾದ ಭಾರತೀಯರು; ಭಾರತದ ರಾಜತಾಂತ್ರಿಕ ವಿಜಯದಲ್ಲಿ ಇವರ ಪಾತ್ರ ಪ್ರಮುಖ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts