More

    ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ ಮಾಜಿ ಐಪಿಎಸ್​ ಅಧಿಕಾರಿ ಅಣ್ಣಾಮಲೈ ಸ್ಪರ್ಧೆ ಮಾಡ್ತಾರಾ?

    ಚೆನ್ನೈ: ಮಾಜಿ ಐಪಿಎಸ್​ ಅಧಿಕಾರಿ ಅಣ್ಣಾಮಲೈ ಅವರು ಮುಂಬರುವ ತಮಿಳುನಾಡು ವಿಧಾನಸಭಾ ಕ್ಷೇತ್ರದ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ತಿಳಿಸಿದ್ದಾರೆ.

    ಭಾನುವಾರ ಸಂಜೆ ಅವರು ಫೇಸ್​ಬುಕ್​ ಲೈವ್​ನಲ್ಲಿ ಚುನಾವಣೆಗೆ ನಿಲ್ಲುವುದಾಗಿ ಘೋಷಿಸಿದ್ದಾರೆ.
    ತಮಿಳುನಾಡಿನಲ್ಲಿ ಏಪ್ರಿಲ್​ 2021 ಚುನಾವಣೆ ನಡೆಯಲಿದೆ. ಇದಕ್ಕಾಗಿ ಸಿದ್ಧತೆ ಮಾಡಿಕೊಳ್ಳುತ್ತಿದ್ದೇನೆ ಎಂದು ಅವರು ಹೇಳಿದ್ದಾರೆ. ಅಣ್ಣಾ ಮಲೈ ಅವರು ಬಿಜೆಪಿಯಿಂದ ಸ್ಪರ್ಧಿಸುವ ಸುಳಿವು ನೀಡಿದ್ದಾರೆ.

    ಅಣ್ಣಾಮಲೈ ಅವರು ಕರ್ನಾಟಕದ ಅತ್ಯಂತ ಸೂಕ್ಷ್ಮವಾದ ಚಿಕ್ಕಮಗಳೂರು ಹಾಗೂ ಉಡುಪಿಯಲ್ಲಿ ಜಿಲ್ಲಾ ಪೊಲೀಸ್​ ವರಿಷ್ಟಾಧಿಕಾರಿಯಾಗಿ ಹಾಗೂ ಬೆಂಗಳೂರು ದಕ್ಷಿಣ ವಲಯದ ಡಿಸಿಪಿಯಾಗಿ ಉತ್ತಮ ಸೇವೆ ಸಲ್ಲಿಸಿದ್ದರು.
    ಕಳೆದ ವರ್ಷ ವಯಕ್ತಿಕ ಕಾರಣಗಳಿಂದ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದರು. ಈಗ ಚುನಾವಣೆಗೆ ನಿಲ್ಲುವುದಾಗಿ ಘೋಷಿಸಿದ್ದಾರೆ.

    ಇದನ್ನೂ ಓದಿ   ಈ ಫಾದರ್​ ಚರ್ಚ್​ಗೆ ಬರೋರನ್ನ ಶೂಟ್​ ಮಾಡ್ತಾರೆ…!

    ಫೇಸ್​ ಬುಕ್​ನಲ್ಲಿ ‘ಮಿಸ್​​ ಯೂ ಕರ್ನಾಟಕ’ ಎಂದು ಕನ್ನಡಿಗರ ಬಗ್ಗೆ ಅಭಿಮಾನ ವ್ಯಕ್ತಪಡಿಸಿದ್ದಾರೆ. ಪೊಲೀಸ್​​​ ಸೇವೆಯಲ್ಲಿದ್ದಾಗ ಕನ್ನಡಿಗರು ಬೆಟ್ಟದಷ್ಟು ಪ್ರೀತಿ ಕೊಟ್ಟರು. ನಿಮ್ಮ ಪ್ರೀತಿಗೆ ನಾನು ಋಣಿ. ನನಗೆ ಜನರೊಂದಿಗೆ ಇದ್ದು ರಾಜಕೀಯ ಸುಧಾರಣೆ ಮಾಡುವ ಆಲೋಚನೆ ಇದೆ. ಐಪಿಎಸ್​ ಹುದ್ದೆಗೆ ರಾಜೀನಾಮೆ ನೀಡಿ ನನ್ನೂರಿಗೆ ಬಂದಿದ್ದೇನೆ. ಜನರ ಸೇವೆ ಮಾಡಲಿದ್ದೇನೆ ಎಂದರು.

    ನನ್ನ ಮುಂದಿನ ಆಲೋಚನೆ ಕುಟುಂಬದ ಜತೆ ಸಮಯ ಕಳೆಯುವುದು, ತಮಿಳುನಾಡು ರಾಜಕೀಯಕ್ಕೆ ಪ್ರವೇಶ ಮಾಡಬೇಕು. ಜನರ ಸೇವೆ ಮಾಡಬೇಕು. ರಾಜಕೀಯ ವ್ಯವಸ್ಥೆ ಬದಲಾಯಿಸಬೇಕು. ಪೊಲೀಸ್​​ ಅಧಿಕಾರಿಗಳಿ ಉತ್ತಮ ವಾತಾವರಣ ಕಲ್ಪಿಸಬೇಕು ಎಂದು ಹೇಳಿಕೊಂಡರು.

    ನಾಳೆ ರಾಜ್ಯಾದ್ಯಂತ ಬಸ್ ಸಂಚಾರ ಆರಂಭ ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts