More

    ಈ ಫಾದರ್​ ಚರ್ಚ್​ಗೆ ಬರೋರನ್ನ ಶೂಟ್​ ಮಾಡ್ತಾರೆ…!

    ಡೆಟ್ರಾಯಿಟ್​: ಕೋವಿಡ್​-19 ಕಾಲಘಟ್ಟದಲ್ಲಿ ವ್ಯಕ್ತಿಗತ ಅಂತರ ಕಾಯ್ದುಕೊಳ್ಳುವುದೊಂದೇ ಕರೊನಾ ವೈರಸ್​ನಿಂದ ಬಚಾವಾಗಲು ಇರುವ ಬಹುಮುಖ್ಯ ಅಸ್ತ್ರ. ಹೀಗಾಗಿ ಜನರು ಗುಂಪು ಸೇರುವುದನ್ನು ನಿಷೇಧಿಸಲಾಗಿದೆ. ಹೀಗಾಗಿ ಧಾರ್ಮಿಕ ತಾಣಗಳು, ಸಾರ್ವಜನಿಕ ಪ್ರದೇಶಗಳು ಸದ್ಯ ಬಿಕೋ ಎನ್ನುತ್ತಿವೆ.

    ವ್ಯಕ್ತಿಗತ ಅಂತರ ಕಾಯ್ದುಕೊಂಡೇ ಹಲವು ಕಾರ್ಯಗಳನ್ನು ನೆರವೇರಿಸಬಹುದು ಎನ್ನುವುದಕ್ಕೆ ನಿದರ್ಶನಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ ಅಂಥದ್ದೇ ವಿದ್ಯಮಾನ ಇಲ್ಲಿದೆ.

    ಅಮೆರಿಕದ ಮಿಚಿಗನ್​ ಡೆಟ್ರಾಯಿಟ್​ನಲ್ಲಿರುವ ಸೇಂಟ್​ ಆ್ಯಂಬ್ರೋಸ್​ ಚರ್ಚ್​ನಲ್ಲಿ ಫಾದರ್​ ಟಿಮ್​ ಫೆಲ್ಸ್​ ವ್ಯಕ್ತಿಗತ ಅಂತರ ಕಾಯ್ದುಕೊಂಡು ಧಾರ್ಮಿಕ ಚಟುವಟಿಕೆಗಳನ್ನು ನಡೆಸಬಹುದು ಎನ್ನುವುದನ್ನು ನಿರೂಪಿಸಿದ್ದಾರೆ.

    ಇದನ್ನೂ ಓದಿ; ಇನ್ನಷ್ಟು ಹತ್ತಿರವಾಯ್ತು ಮೌಂಟ್​ ಎವರೆಸ್ಟ್​…!

    ಚರ್ಚ್​ಗೆ ಬರುವ ಭಕ್ತರನ್ನು ಪವಿತ್ರ ನೀರಿನಿಂದ ಆಶೀರ್ವದಿಸಲು ಫಾದರ್​ ಟಿಮ್​’ಗನ್​’ ಬಳಸಿ ‘ಶೂಟ್​’ ಮಾಡುತ್ತಿದ್ದಾರೆ. ಮುಖಕ್ಕೆ ಮಾಸ್ಕ್​ ಹಾಗೂ ಫೇಸ್​ ಶೀಲ್ಡ್​ ಧರಿಸಿ ದೂರದಲ್ಲೇ ನಿಂತು ಕಾರಿನಲ್ಲಿ ಕುಳಿತವರ ಮೇಲೆ ನೀರನ್ನು ಸಿಂಪಡಿಸುತ್ತಿದ್ದಾರೆ. ಚರ್ಚ್​ಗೆ ಸಲ್ಲಿಕೆಯಾಗುತ್ತಿರುವ ಕಾಣಿಕೆ ಹಾಗೂ ಬ್ರೆಡ್​ ಮೇಲೂ ಪವಿತ್ರ ನೀರು ಈ ಗನ್​ ಮೂಲಕವೇ ಪ್ರೋಕ್ಷಣೆಯಾಗುತ್ತಿದೆ.

    ಚರ್ಚ್​ ತನ್ನ ಫೇಸ್​ಬುಕ್ ಪೇಜ್​ನಲ್ಲಿ ಈ ಫೋಟೋ​ ಹಂಚಿಕೊಂಡಿದೆ. ಇದಕ್ಕೆ ಭಾರಿ ಮೆಚ್ಚುಗೆಯೂ ವ್ಯಕ್ತವಾಗಿದೆ.

    ಕೋವಿಡ್​ ಕಾಲದಲ್ಲಿ ರೈಲಿನಲ್ಲಿ ಸಂಚರಿಸುವುದೆಂದರೆ ವಿದೇಶ ಪ್ರಯಾಣಕ್ಕಿಂತೇನೂ ಕಡಿಮೆಯಿಲ್ಲ…!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts