More

    ಟೀಮ್ ಇಂಡಿಯಾ ಮಾಜಿ ವೇಗಿ ಸುದೀಪ್ ತ್ಯಾಗಿ ವಿದಾಯ

    ನವದೆಹಲಿ: ಟೀಮ್ ಇಂಡಿಯಾದ ಮಾಜಿ ವೇಗಿ ಸುದೀಪ್ ತ್ಯಾಗಿ ಮಂಗಳವಾರ ಎಲ್ಲ ಮಾದರಿಯ ಕ್ರಿಕೆಟ್ ಪ್ರಕಾರಕ್ಕೆ ವಿದಾಯ ಹೇಳಿದ್ದಾರೆ. 33 ವರ್ಷದ ಅವರು ಭಾರತ ತಂಡದ ಪರ 3 ಏಕದಿನ ಮತ್ತು ಏಕೈಕ ಟಿ20 ಪಂದ್ಯ ಆಡಿದ್ದಾರೆ.

    ಏಕದಿನ ಕ್ರಿಕೆಟ್‌ನಲ್ಲಿ 3 ವಿಕೆಟ್ ಕಬಳಿಸಿರುವ ಉತ್ತರ ಪ್ರದೇಶದ ಆಟಗಾರ ಸುದೀಪ್ ತ್ಯಾಗಿ 2010ರಲ್ಲಿ ಕೊನೆಯದಾಗಿ ಭಾರತ ತಂಡವನ್ನು ಪ್ರತಿನಿಧಿಸಿದ್ದರು. ಐಪಿಎಲ್‌ನಲ್ಲಿ ಅವರು ಚೆನ್ನೈ ಸೂಪರ್‌ಕಿಂಗ್ಸ್ ಮತ್ತು ಸನ್‌ರೈಸರ್ಸ್‌ ಹೈದರಾಬಾದ್ ತಂಡಗಳ ಪರ ಆಡಿದ್ದಾರೆ.

    ‘ಇದು ನನ್ನ ಜೀವನದ ಅತ್ಯಂತ ಕಠಿಣ ನಿರ್ಧಾರ. ನನ್ನ ಕನಸಿಗೆ ನಾನು ಗುಡ್‌ಬೈ ಹೇಳುತ್ತಿದ್ದೇನೆ’ ಎಂದು ಸುದೀಪ್ ತ್ಯಾಗಿ ಟ್ವೀಟಿಸಿದ್ದಾರೆ. 2009 ಮತ್ತು 2010ರ ಐಪಿಎಲ್‌ನಲ್ಲಿ ಅವರು ಆಡಿದ್ದರು.

    ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ 41 ಪಂದ್ಯ ಆಡಿರುವ ಅವರು, 109 ವಿಕೆಟ್ ಕಬಳಿಸಿದ್ದಾರೆ. 23 ಲಿಸ್ಟ್ ಎ ಪಂದ್ಯಗಳಲ್ಲಿ 31 ವಿಕೆಟ್ ಕಬಳಿಸಿದ್ದಾರೆ. ದೇಶೀಯ ಕ್ರಿಕೆಟ್‌ನಲ್ಲಿ ಉತ್ತರ ಪ್ರದೇಶ ಮಾತ್ರವಲ್ಲದೆ, ಸೌರಾಷ್ಟ್ರ ಮತ್ತು ಹೈದರಾಬಾದ್ ತಂಡದ ಪರವಾಗಿಯೂ ಆಡಿದ್ದಾರೆ.

    ‘ಎಲ್ಲ ಕ್ರಿಕೆಟಿಗರು ಕಾಣುವ ಕನಸನ್ನು ನಾನು ನನಸಾಗಿಸಿಕೊಂಡಿದ್ದೇನೆ. ದೇಶದ ಪರ ಆಡಿದ್ದೇನೆ. ಭಾರತ ತಂಡದ ಜೆರ್ಸಿ ತೊಡುವ ನನ್ನ ಕನಸು ನನಸಾಗಿಸಿಕೊಂಡಿದ್ದೇನೆ. ಎಂಎಸ್ ಧೋನಿ ಅವರಿಗೆ ನಾನು ಧನ್ಯವಾದ ಹೇಳಲು ಬಯಸುತ್ತೇನೆ. ಅವರ ನಾಯಕತ್ವದಲ್ಲಿ ನಾನು ಮೊದಲ ಏಕದಿನ ಪಂದ್ಯ ಆಡಿದ್ದೆ. ನನ್ನ ಆದರ್ಶ ಆಟಗಾರರಾದ ಮೊಹಮದ್ ಕೈಫ್​, ಆರ್‌ಪಿ ಸಿಂಗ್ ಮತ್ತು ಸುರೇಶ್ ರೈನಾಗೆ ಧನ್ಯವಾದ ಹೇಳುತ್ತೇನೆ. ಇದು ಅತ್ಯಂತ ಕಠಿಣವಾದರೂ, ಮುಂದಕ್ಕೆ ನಡೆಯಬೇಕಾದುದು ಅಗತ್ಯವಾಗಿದೆ’ ಎಂದು ಸುದೀಪ್ ತ್ಯಾಗಿ ಹೇಳಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts