More

    ಕರೊನಾ ಸೋಂಕು ಇರುವುದನ್ನು ಮುಚ್ಚಿಟ್ಟ ಮಹಿಳೆಗೆ ಚೀನಾ ಸರ್ಕಾರ ಎಂಥಾ ಶಿಕ್ಷೆ ವಿಧಿಸಿದೆ ಗೊತ್ತಾ?

    ಬೀಜಿಂಗ್​: ಕರೊನಾ ವೈರಸ್​ ಮಾರಣಾಂತಿಕವಾಗಿದ್ದರಿಂದ ಯಾರೇ ಆಗಲಿ ಸ್ವಲ್ಪವೇ ಅದರ ಲಕ್ಷಣಗಳು ಕಂಡುಬಂದರೂ ವೈದ್ಯಕೀಯ ನೆರವು ಪಡೆಯಲು ಸೂಚನೆ ಇದೆ. ಹಾಗೇ ಒಂದು ದೇಶದಿಂದ ಮತ್ತೊಂದು ದೇಶಕ್ಕೆ ಹೋಗುವವರು ಕಡ್ಡಾಯವಾಗಿ ತಪಾಸಣೆ ಮಾಡಿಸಿಕೊಳ್ಳಬೇಕು. 14ದಿನ ಪ್ರತ್ಯೇಕವಾಗಿ ಇರಬೇಕು ಎಂಬ ಆದೇಶವು ಕರೊನಾ ಪೀಡಿತ ರಾಷ್ಟ್ರಗಳಲ್ಲದೆ, ಉಳಿದ ದೇಶಗಳೂ ಮುನ್ನೆಚ್ಚರಿಕಾ ಕ್ರಮವಾಗಿ ಹೊರಡಿಸಿವೆ.

    ಹೀಗಿರುವಾಗ ಕೆಲವರು ತಮ್ಮ ಪ್ರಯಾಣದ ಬಗ್ಗೆ, ತಮಗೆ ಕರೊನಾ ಸೋಂಕು ಇರುವುದನ್ನು ಮುಚ್ಚಿಡುತ್ತಿದ್ದಾರೆ. ವಿದೇಶದಿಂದ ಬಂದಿದ್ದನ್ನು ಮುಚ್ಚಿಟ್ಟು ತಮ್ಮ ಪಾಡಿಗೆ ಪಾರ್ಟಿ, ಶಾಪಿಂಗ್​ ಮಾಲ್​ ಎಂದು ಸುತ್ತಾಡಿಕೊಂಡಿದ್ದಾರೆ. ಇಂತಹ ಪ್ರಕರಣಗಳು ಬೆಳಕಿಗೆ ಬಂದ ಕೂಡಲೇ ಪೊಲೀಸರು ಅವರ ವಿರುದ್ಧ ಕ್ರಮ ಕೈಗೊಳ್ಳುತ್ತಿದ್ದಾರೆ.

    ಇದೀಗ ಯುಎಸ್​ ಬಯೋಟೆಕ್ನಾಲಜಿ ಕಂಪನಿಯೊಂದರ ಮಾಜಿ ಅಸೋಸಿಯೇಟ್​ ನಿರ್ದೇಶಕಿಯೋರ್ವರು ತಮಗೆ ಕರೊನಾ ವೈರಸ್​ ತಗುಲಿದ್ದನ್ನು ಮುಚ್ಚಿಟ್ಟ ಕಾರಣಕ್ಕೆ 7 ವರ್ಷ ಜೈಲು ಶಿಕ್ಷೆಗೆ ಒಳಗಾಗಿದ್ದಾರೆ.

    ಚೀನಾ ಮೂಲದ 37 ವರ್ಷದ ಕರೊನಾ ವೈರಸ್​ ಸೋಂಕಿತ ಮಹಿಳೆ ಲಾಸ್​ ಏಂಜಲೀಸ್​ನಿಂದ ಬೀಜಿಂಗ್​ಗೆ ಚಿಕಿತ್ಸೆ ಪಡೆಯಲೆಂದೇ ಪ್ರಯಾಣ ಬೆಳೆಸಿದ್ದರು. ಅದಾಗಲೇ ಜ್ವರದಿಂದ ಬಳಲುತ್ತಿದ್ದ ಅವರು, ಲಾಸ್​ ಏಂಜಲೀಸ್​ನಲ್ಲಿ ತಮ್ಮ ದೇಹದ ಉಷ್ಣತೆಯನ್ನು ಮರೆಮಾಚಲು ಹಲವು ಮಾತ್ರೆಗಳನ್ನು ಸೇವಿಸಿದ್ದರು. ಸುಮಾರು 13 ತಾಸು ವಿಮಾನದಲ್ಲಿ ಪ್ರಯಾಣ ಮಾಡಿ ಶುಕ್ರವಾರ ಬೀಜಿಂಗ್​ಗೆ ಬಂದು ತಲುಪಿದ್ದರು. ಇವರೊಂದಿಗೆ ಮಗು ಮತ್ತು ಪತಿಯೂ ಇದ್ದರು.

    ಈಕೆಯ ಹೆಸರು ಜೀ ಲಿ. ಒಂದು ಮಗುವಿನ ತಾಯಿ. ಅಮೆರಿಕದ ಮ್ಯಾಸಚೂಸೆಟ್ಸ್​ನಲ್ಲಿರುವ ಬಯೋಜೆನ್​ ಮಲ್ಟಿನ್ಯಾಶನಲ್​ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಈ ಮ್ಯಾಸಚೂಸೆಟ್ಸ್​ನಲ್ಲಿಯೇ ಕರೊನಾ ವೈರಸ್​ ಕೂಡ ಅತಿ ಹೆಚ್ಚು ಪ್ರಮಾಣದಲ್ಲಿ ಬಾಧಿಸುತ್ತಿದೆ. ಫೆಬ್ರವರಿಯಲ್ಲಿ ಬಯೋಜೆನ್​ ಕಂಪನಿಯಿಂದ ಒಂದು ಕಾನ್ಫರೆನ್ಸ್​ ಆಯೋಜಿಸಲಾಗಿತ್ತು. ಅದರಲ್ಲಿ ಭಾಗವಹಿಸಿದ್ದ ಶೇ.30ರಷ್ಟು ಜನರು ಕರೊನಾ ಸೋಂಕಿತರಾಗಿದ್ದಾರೆ ಎಂದು ವರದಿಯಾಗಿದೆ. ಇದೇ ಕಂಪನಿಯಲ್ಲಿ ಕೆಲಸ ಮಾಡುತ್ತಿ ಜೀ ಲೀ ಕೂಡ ಕರೊನಾದಿಂದ ಬಳಲುತ್ತಿದ್ದರು.

    ಆದರೆ ಬೀಜಿಂಗ್​ಗೆ ಬಂದಾಗ ಅವರು ಅದನ್ನೆಲ್ಲ ಮುಚ್ಚಿಟ್ಟರು. ಏರ್​ಪೋರ್ಟ್​ನಲ್ಲಿ ತಮಗೆ ಸ್ವಲ್ಪ ಆರೋಗ್ಯ ಸರಿಯಿಲ್ಲ ಎಂದು ಹೇಳಿಕೊಂಡರು. ಆದರೆ ಲಾಸ್​ಏಂಜಲೀಸ್​ನಲ್ಲಿ ಮಾತ್ರೆ ತೆಗೆದುಕೊಂಡ ಬಗ್ಗೆ ಮಾಹಿತಿ ನೀಡಲಿಲ್ಲ. ಅಲ್ಲದೆ, ಅಮೆರಿಕ ವೈದ್ಯರು ಕರೊನಾ ವೈರಸ್​ ತಪಾಸಣೆಗೆ ಮೂರು ಬಾರಿ ನಿರಾಕರಿಸಿದ್ದಾರೆ ಎಂದು ಲಿ ಹೇಳಿಕೊಂಡಿದ್ದರು.
    ಚೀನಾಕ್ಕೆ ಬಂದ ಮೇಲೆ ಅವರಲ್ಲಿ ಕರೊನಾ ವೈರಸ್​ ಇರುವುದು ದೃಢಪಟ್ಟಿತು. ಹಾಗೇ ತಮಗಿರುವ ಕರೊನಾ ವೈರಸ್​ ಲಕ್ಷಣಗಳನ್ನು ಮುಚ್ಚಿಟ್ಟಿದ್ದಾರೆ. ಇದೊಂದು ಕ್ರಿಮಿನಲ್​ ಅಪರಾಧ ಎಂದು ಪರಿಗಣಿಸಿ ಜೈಲು ಶಿಕ್ಷೆ ವಿಧಿಸಲಾಗಿದೆ.

    ಈ ಬಗ್ಗೆ ಕಸ್ಟಮ್ಸ್​ ಪಾಲಿಸಿ ಮತ್ತು ರೆಗ್ಯುಲೇಶನ್​ ನಿರ್ದೇಶಕ ವಾಂಗ್​ ಜುನ್​ ಮಾಹಿತಿ ನೀಡಿದ್ದು, ಈ ಮಹಿಳೆ ಸಾಂಕ್ರಾಮಿಕ ರೋಗ ನಿಯಂತ್ರಣಕ್ಕೆ ಅಡ್ಡಿಪಡಿಸಿದ್ದಾರೆ. ಇದೊಂದು ಕ್ರಿಮಿನಲ್​ ಪ್ರಕರಣ. ಯಾರು ತಮ್ಮ ಅದೃಷ್ಟದ ಪರೀಕ್ಷೆಗೆ ಇಳಿದು, ನೀತಿ, ನಿಯಮಗಳನ್ನು ಮೀರುತ್ತಾರೋ, ಅಂತಹವು ಸಮಾಜದ ನಿಂದನೆಯನ್ನು ಸಹಿಸಿಕೊಳ್ಳಬೇಕು. ಹಾಗೇ ಕಡ್ಡಾಯವಾಗಿ ಜೈಲು ಶಿಕ್ಷೆಗೆ ಒಳಪಡಬೇಕು ಎಂದು ಹೇಳಿದ್ದಾರೆ.
    ಈ ಘಟನೆ ಕಳೆದ ಶುಕ್ರವಾರವೇ ನಡೆದಿದೆ. ಮಹಿಳೆಯ ಪತಿಗೂ ಕರೊನಾ ಸೋಂಕು ಇರುವುದು ದೃಢಪಟ್ಟಿದೆ (ಏಜೆನ್ಸೀಸ್​)

    ಕರೊನಾ ಸೋಂಕು ಸಿಂಪಲ್ಲಾಗಿ ಹೇಗೆ ಹರಡುತ್ತೆ ಮತ್ತು ಅಷ್ಟೇ ಸಿಂಪಲ್ಲಾಗಿ ತಡೆಯೋದು ಹೇಗೆ?- ಇಲ್ಲಿ ನೋಡಿ..

    ರಾಜ್ಯದಲ್ಲಿ 16ಕ್ಕೇರಿದ ಕರೊನಾ ಸೋಂಕಿತರ ಸಂಖ್ಯೆ: ಮೆಕ್ಕಾದಿಂದ ವಾಪಾಸ್ಸಾಗಿದ್ದ ವ್ಯಕ್ತಿಯಲ್ಲಿ ಸೋಂಕು ಧೃಡ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts