More

    ಚೆನ್ನೈ ಸೂಪರ್ ಕಿಂಗ್ಸ್ ತಂಡದ ಮಾಜಿ ವೇಗಿ ಯೋ ಮಹೇಶ್ ನಿವೃತ್ತಿ ಘೋಷಣೆ…

    ಚೆನ್ನೈ: ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ತಮಿಳುನಾಡು ತಂಡದ ಮಾಜಿ ವೇಗದ ಬೌಲರ್ ವಿಜಯ್‌ಕುಮಾರ್ ಯೊ ಮಹೇಶ್ ಎಲ್ಲ ಮಾದರಿಯ ಕ್ರಿಕೆಟ್‌ಗೆ ಭಾನುವಾರ ನಿವೃತ್ತಿ ಘೋಷಿಸಿದರು. ತಮ್ಮ 33ನೇ ವರ್ಷದ ಹುಟ್ಟುಹಬ್ಬಕ್ಕೆ ಒಂದು ದಿನ ಮೊದಲು ಯೋ ಮಹೇಶ್ ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ. 50 ಪ್ರಥಮ ದರ್ಜೆ ಪಂದ್ಯಗಳಿಂದ 108 ವಿಕೆಟ್ ಹಾಗೂ 61 ಲಿಸ್ಟ್ ಎ ಪಂದ್ಯಗಳಿಂದ 93 ವಿಕೆಟ್ ಕಬಳಿಸಿದ್ದಾರೆ. 2019ರ ಆಗಸ್ಟ್ ತಿಂಗಳಲ್ಲಿ ತಮಿಳುನಾಡು ಪ್ರೀಮಿಯರ್ ಲೀಗ್‌ನಲ್ಲಿ (ಟಿಎನ್‌ಪಿಎಲ್) ಕಡೇ ಬಾರಿಗೆ ಸ್ಪರ್ಧಾತ್ಮಕ ಕ್ರಿಕೆಟ್ ಆಡಿದ್ದರು. 2018ರಲ್ಲಿ ತಮಿಳುನಾಡು ಪರ ಕಡೇ ಬಾರಿಗೆ ಲಿಸ್ಟ್ ಎನಲ್ಲಿ ಆಡಿದ್ದರು. 46 ಐಪಿಎಲ್ ಪಂದ್ಯಗಳಿಂದ 52 ವಿಕೆಟ್ ಕಬಳಿಸಿದ್ದರು.

    ಇದನ್ನೂ ಓದಿ: ದೆಹಲಿ ರಣಜಿ ತಂಡದ ತರಬೇತುದಾರರಾಗಿ ವಿರಾಟ್ ಕೊಹ್ಲಿ ಬಾಲ್ಯ ಕೋಚ್​ ಆಯ್ಕೆ 

    ಐಪಿಎಲ್‌ನಲ್ಲಿ ಯಶಸ್ಸು ಕಂಡು ಮೊದಲ ದೇಶೀಯ ಆಟಗಾರ ಯೋ ಮಹೇಶ್, 2008ರ ಚೊಚ್ಚಲ ಐಪಿಎಲ್ ಆವೃತ್ತಿಯಲ್ಲಿ ಯೋ ಮಹೇಶ್ ಡೆಲ್ಲಿ ಕ್ಯಾಪಿಟಲ್ಸ್ ಪರ ಅಧಿಕ ವಿಕೆಟ್ ಕಬಳಿಸಿದ್ದರು. ಸರಾಸರಿ 8.77 ರಂತೆ 16 ವಿಕೆಟ್ ಪಡೆದಿದ್ದರು. 2008 ರಿಂದ 2010ರವರೆಗೆ ಡೆಲ್ಲಿ ತಂಡದ ಆಡಿದ ಮಹೇಶ್, 2011 ಹಾಗೂ 2012ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ಪ್ರತಿನಿಧಿಸಿದ್ದರು. ಸಿಎಸ್‌ಕೆ ಪರ 5 ಪಂದ್ಯಗಳಲ್ಲಿ 3 ವಿಕೆಟ್ ಗಳಿಸಿದ್ದರು. ಬಳಿಕ ಸತತವಾಗಿ ಗಾಯದ ಸಮಸ್ಯೆ ಎದುರಿಸಿದ ಮಹೇಶ್‌ಗೆ ಬಳಿಕ ನಿರೀಕ್ಷಿತ ಮಟ್ಟದಲ್ಲಿ ಯಶಸ್ಸು ದಕ್ಕಲಿಲ್ಲ. 5 ವರ್ಷಗಳ ಬಳಿಕ ಪ್ರಥಮ ದರ್ಜೆ ಕ್ರಿಕೆಟ್‌ಗೆ ಮಹೇಶ್ ವಾಪಸಾದರು. 2017ರಲ್ಲಿ ತಮಿಳುನಾಡು ಪರ ಕಣಕ್ಕಿಳಿದರು. ರಣಜಿ ಪಂದ್ಯವೊಂದರಲ್ಲಿ ಮುಂಬೈ ಎದುರು ಅಜೇಯ 103 ರನ್ ಸಿಡಿಸಿದ್ದು ಮಹೇಶ್ ಅವರ ವೈಯಕ್ತಿಕ ಅಧಿಕ ಮೊತ್ತವಾಗಿದೆ.

    ಇದನ್ನೂ ಓದಿ: ವಾಪಸ್ ಬಂದ್ರು ರಂಗೀಲಾ ಬೆಡಗಿ ಊರ್ಮಿಳಾ ಮಾತೊಂಡ್ಕರ್

    2006ರಲ್ಲಿ ಶ್ರೀಲಂಕಾದಲ್ಲಿ ನಡೆದ 19 ವಯೋಮಿತಿ ವಿಶ್ವಕಪ್ ಟೂರ್ನಿಯಲ್ಲಿ ರೋಹಿತ್ ಶರ್ಮ, ಚೇತೇಶ್ವರ್ ಪೂಜಾರ ಒಳಗೊಂಡ ಭಾರತ ತಂಡ ಪ್ರತಿನಿಧಿಸಿದ್ದರು. ಇದುವರೆಗೂ ಪ್ರೋತ್ಸಾಹಿಸಿದ ಟಿಎನ್‌ಸಿಎ ಹಾಗೂ ಬಿಸಿಸಿಐಗೆ ಧನ್ಯವಾದಗಳು ಎಂದು ಮಹೇಶ್ ಟ್ವಿಟರ್‌ನಲ್ಲಿ ಬರೆದುಕೊಂಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts