More

    ಕನ್ನಡಿಗ ಅನಿಲ್​ ಕುಂಬ್ಳೆ ಆಂಧ್ರ ಸಿಎಂ ಜಗನ್​ರನ್ನು ಭೇಟಿಯಾಗಿದ್ದೇಕೆ? ಇಬ್ಬರ ನಡುವೆ ನಡೆದಿದೆ ಮಹತ್ವದ ಚರ್ಚೆ!

    ವಿಜಯವಾಡ: ಟೀಮ್​ ಇಂಡಿಯಾದ ಮಾಜಿ ಕೋಚ್​ ಹಾಗೂ ಸ್ಪಿನ್​ ದಿಗ್ಗಜ ಅನಿಲ್​ ಕುಂಬ್ಳೆ ಅವರು ಆಂಧ್ರ ಪ್ರದೇಶದ ಮುಖ್ಯಮಂತ್ರಿ ವೈ.ಎಸ್​. ಜಗನ್​ ಮೋಹನ್​ ರೆಡ್ಡಿ ಅವರನ್ನು ಭೇಟಿ ಮಾಡಿರುವುದು ಸಾಕಷ್ಟು ಕುತೂಹಲ ಕೆರಳಿಸಿದೆ.

    ತಡೆಪಲ್ಲಿಯಲ್ಲಿರುವ ಸಿಎಂ ಕ್ಯಾಂಪ್​ ಆಫೀಸ್​ನಲ್ಲಿ ಜಗನ್​ರನ್ನು ಕನ್ನಡಿಗ ಕುಂಬ್ಳೆ ಭೇಟಿಯಾದರು. ಈ ವೇಳೆ ಕ್ರೀಡಾ ಅಭಿವೃದ್ಧಿ ಕುರಿತ ವಿವಿಧ ವಿಚಾರಗಳ ಬಗ್ಗೆ ಚರ್ಚೆ ನಡೆಸಿರುವುದಾಗಿ ತಿಳಿದುಬಂದಿದೆ.

    ಆಂಧ್ರದಲ್ಲಿ ಕ್ರೀಡಾ ವಿಶ್ವವಿದ್ಯಾಲಯ ಮತ್ತು ಕ್ರೀಡಾ ಸಲಕರಣೆಗಳ ಉತ್ಪಾದನಾ ಕಾರ್ಖಾನೆ ತೆರೆಯುವ ಬಗ್ಗೆ ಇಬ್ಬರು ಚರ್ಚಿಸಿದ್ದಾರೆ. ಈ ಎರಡು ಯೋಜನೆಗಳನ್ನು ಸ್ಥಾಪಿಸುವತ್ತ ಗಮನ ಹರಿಸುವುದಾಗಿಯು ಮತ್ತು ಅವುಗಳನ್ನು ಬೆಂಬಲಿಸುವುದಾಗಿ ಕುಂಬ್ಳೆ ಸಿಎಂಗೆ ತಿಳಿಸಿದರು.

    ಕ್ರೀಡಾ ಸಲಕರಣೆಗಳ ಉತ್ಪಾದನಾ ಕಾರ್ಖಾನೆಗಳು ಪ್ರಸ್ತುತ ಜಲಂಧರ್ ಮತ್ತು ಮೀರತ್‌ನಂತಹ ನಗರಗಳಲ್ಲಿ ಮಾತ್ರ ಇವೆ. ಅಲ್ಲಿಂದ ಎಲ್ಲಾ ರೀತಿಯ ಕ್ರೀಡಾ ಉಪಕರಣಗಳನ್ನು ಸರಬರಾಜು ಮಾಡಲಾಗುತ್ತದೆ ಎಂದು ಅನಿಲ್ ಕುಂಬ್ಳೆ ತಿಳಿಸಿದರು.

    ಒಂದು ವೇಳೆ ಕಾರ್ಖಾನೆಯನ್ನು ಆಂಧ್ರದಲ್ಲಿ ತೆರೆದರೆ, ಎಲ್ಲರಿಗೂ ಕ್ರೀಡಾ ಉಪಕರಣಗಳು ದೊರೆಯಲಿದೆ ಎಂದು ಕುಂಬ್ಳೆ ಅವರು ಸಿಎಂ ಜಗನ್​ಗೆ ಮನವರಿಕೆ ಮಾಡಿದ್ದಾರೆ.

    ಅನಿಲ್ ಕುಂಬ್ಳೆ ಅವರು ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಭಾರತಕ್ಕೆ ಅತಿ ಹೆಚ್ಚು ವಿಕೆಟ್ ಪಡೆದ ಆಟಗಾರ ಎಂದು ಪ್ರಸಿದ್ಧರಾಗಿದ್ದಾರೆ. ಅವರು ತಮ್ಮ ಸುದೀರ್ಘ ವೃತ್ತಿಜೀವನದಲ್ಲಿ 132 ಟೆಸ್ಟ್ ಮತ್ತು 271 ಏಕದಿನ ಪಂದ್ಯಗಳನ್ನು ಆಡಿದ್ದಾರೆ. ಒಟ್ಟು 956 ವಿಕೆಟ್ ಪಡೆದಿದ್ದಾರೆ. 2008 ರಲ್ಲಿ ನಿವೃತ್ತಿ ಘೋಷಿಸಿದ ನಂತರ ಅವರು ಭಾರತದ ಮುಖ್ಯ ಕೋಚ್ ಆಗಿ ಕೆಲಸ ಮಾಡಿದರು. 2017ರಲ್ಲಿ ಭಾರತದ ನಾಯಕ ವಿರಾಟ್ ಕೊಹ್ಲಿ ಅವರೊಂದಿಗೆ ಘರ್ಷಣೆಗಳು ಉಂಟಾಗಿ ಮುಖ್ಯ ಕೋಚ್ ಹುದ್ದೆಗೆ ಕುಂಬ್ಳೆ ರಾಜೀನಾಮೆ ನೀಡಿದರು. (ಏಜೆನ್ಸೀಸ್​)

    ಬಿಗ್​ಬಾಸ್​ ಸೀಸನ್​ 8: ಅತಿ ಕಿರಿಕಿರಿಯುಂಟುಮಾಡುವ ಸ್ಪರ್ಧಿ ಯಾರು ಗೊತ್ತಾ? ಇಲ್ಲಿದೆ ಉತ್ತರ!

    ಕಾವೇರಿ ಒತ್ತುವರಿ ತೆರವು ಶುರು: ಪ್ರವಾಹ ಪ್ರಮಾಣ ದುಪ್ಪಟ್ಟಾಗುವ ಅಪಾಯ

    4 ಲಕ್ಷ ಮಕ್ಕಳಲ್ಲಿ ಅಪೌಷ್ಟಿಕತೆ: ಕರೊನಾ 3ನೇ ಅಲೆ ಬಂದರೆ ಅಪಾಯ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts