More

    ಚನ್ನಪಟ್ಟಣದ ಜತೆಗೆ ಮಂಡ್ಯದಿಂದಲೂ ಎಚ್​ಡಿಕೆ ಸ್ಪರ್ಧೆ ಸಾಧ್ಯತೆ: ಕುತೂಹಲ ಮೂಡಿಸಿದ ಮಾಜಿ ಸಿಎಂ ನಡೆ

    ಮಂಡ್ಯ: ಮಾಜಿ ಮುಖ್ಯಮಂತ್ರಿ ಎಚ್​.ಡಿ. ಕುಮಾರಸ್ವಾಮಿ ಅವರು ಎರಡು ಕ್ಷೇತ್ರಗಳಿಂದ ಕಣಕ್ಕಿಳಿಯುವ ಸಾಧ್ಯತೆ ದಟ್ಟವಾಗಿದೆ. ಚನ್ನಪಟ್ಟಣದ ಜತೆಗೆ ಮಂಡ್ಯ ಕ್ಷೇತ್ರದಿಂದಲೂ ಎಚ್‌ಡಿಕೆ ಸ್ಪರ್ಧಿಸಲಿದ್ದಾರೆ ಎಂದು ಹೇಳಲಾಗುತ್ತಿದೆ.

    ಬಿ ಫಾರಂ ನೀಡಿಲ್ಲ
    ಮಂಡ್ಯದಿಂದ ಎಚ್​ಡಿಕೆ ನಾಮಪತ್ರ ಸಲ್ಲಿಕೆಗೆ ಸದ್ದಿಲ್ಲದೆ ತಯಾರಿ ನಡೆಯುತ್ತಿದೆಯಂತೆ. ನಾಮಪತ್ರ ಸಲ್ಲಿಕೆಗೆ ಕಡೆಯ ದಿನಾಂಕ ಹತ್ತಿರವಾಗುತ್ತಿದ್ದರೂ ಮಂಡ್ಯ ಜೆಡಿಎಸ್​ ಟಿಕೆಟ್​ ಸಮಸ್ಯೆ ಇನ್ನು ಬಗೆಹರಿದಿಲ್ಲ. ಹಾಲಿ ಶಾಸಕ ಎಂ.ಶ್ರೀನಿವಾಸ್ ಹೆಸರು ಘೋಷಣೆಯಾಗಿದ್ದರೂ ಜೆಡಿಎಸ್​ ವರಿಷ್ಠರು ಇನ್ನೂ ಬಿ ಫಾರಂ ನೀಡಿಲ್ಲ.

    ಇದನ್ನೂ ಓದಿ: ಆರೋಪಗಳ ಸುಳಿಯಲ್ಲಿ ಖಾಕಿ! ಲಂಚ, ಲೈಂಗಿಕ ಕಿರುಕುಳ, ಬೆಳೆಯುತ್ತಿದೆ ಅಮಾನತುಗೊಳ್ಳವವರ ಪಟ್ಟಿ

    ಕ್ಷೇತ್ರ ತ್ಯಾಗ
    ಮಾಜಿ ಸಿಎಂ ಎಚ್​ಡಿಕೆ ಸ್ಪರ್ಧಿಸಿದ್ರೆ ಕ್ಷೇತ್ರ ತ್ಯಾಗಕ್ಕೆ ಎಂ.ಶ್ರೀನಿವಾಸ್ ಸಿದ್ಧರಾಗಿದ್ದಾರೆ. ವಯಸ್ಸು ಮತ್ತು ಅನಾರೋಗ್ಯ ಕಾರಣ ಎಂ.ಶ್ರೀನಿವಾಸ್‌ಗೆ ಕೋಕ್ ನೀಡಲಾಗಿದೆ. ಇದರ ನಡುವೆ ಜಯಾನಂದ ಹಾಗೂ ಮನ್‌ಮುಲ್ ರಾಮಚಂದ್ರು ಟಿಕೆಟ್ ರೇಸ್‌ನಲ್ಲಿದ್ದಾರೆ. ಎಂ.ಶ್ರೀನಿವಾಸ್ ಅಳಿಯ ಎಚ್.ಎನ್.ಯೋಗೇಶ್ ಕೂಡ ಟಿಕೆಟ್​ಗಾಗಿ ಫೈಟ್ ಮಾಡುತ್ತಿದ್ದಾರೆ. ಯಾರಿಗೆ ಟಿಕೆಟ್ ನೀಡಿದ್ರು ಬಂಡಾಯ ಸಾಧ್ಯತೆ ಹಿನ್ನೆಲೆಯಲ್ಲಿ ಸ್ವತಃ ಕುಮಾರಸ್ವಾಮಿಯೇ ಕಣಕ್ಕಿಯಲು ಚಿಂತನೆ ನಡೆಸಿದ್ದಾರೆ ಎನ್ನಲಾಗಿದೆ.

    7 ಕ್ಷೇತ್ರಗಳಲ್ಲೂ ಗೆಲುವಿನ ಅಭಿಪ್ರಾಯ
    ಮಂಡ್ಯದಿಂದ ಎಚ್​ಡಿಕೆ ಸ್ಪರ್ಧಿಸಿದ್ರೆ ಜಿಲ್ಲೆಯ ಇತರೆ ಕ್ಷೇತ್ರಗಳಲ್ಲೂ ಪ್ರಭಾವ ಬೀರುವ ಲೆಕ್ಕಾಚಾರ ಇದೆ. 7ಕ್ಕೆ 7 ಕ್ಷೇತ್ರಗಳಲ್ಲೂ ಗೆಲುವು ಸಾಧಿಸಬಹುದೆಂಬ ಅಭಿಪ್ರಾಯವನ್ನು ಕಾರ್ಯಕರ್ತರು ವ್ಯಕ್ತಪಡಿಸಿದ್ದಾರೆ. ಇಂದು ಮಂಡ್ಯಕ್ಕೆ ಎಚ್​ಡಿಕೆ ಭೇಟಿ ನೀಡಲಿದ್ದಾರೆ. ಶ್ರೀರಂಗಪಟ್ಟಣ ಹಾಗೂ ಪಾಂಡವಪುರದಲ್ಲಿ ಎಚ್​ಡಿಕೆ ಪ್ರವಾಸ ಮಾಡಲಿದ್ದಾರೆ.

    ಎಚ್​ಡಿಕೆ ಸಾಥ್
    ನಾಮಪತ್ರ ಸಲ್ಲಿಕೆ ವೇಳೆ ಶಾಸಕ ರವೀಂದ್ರ ಶ್ರೀಕಂಠಯ್ಯಗೆ ಎಚ್​ಡಿಕೆ ಸಾಥ್ ನೀಡಲಿದ್ದಾರೆ. ನಂತರ ಶ್ರೀರಂಗಪಟ್ಟಣದಲ್ಲಿ ಬೃಹತ್​ ರ್ಯಾಲಿ ನಡೆಯಲಿದೆ. ಬಳಿಕ ಪಾಂಡವಪುರದಲ್ಲಿ ನಡೆಯುವ ಬೃಹತ್ ಬಹಿರಂಗ ಸಭೆಯಲ್ಲಿ ಎಚ್​ಡಿಕೆ ಭಾಗಿಯಾಗಲಿದ್ದಾರೆ. ಶಾಸಕ ಸಿ.ಎಸ್. ಪುಟ್ಟರಾಜು ನಾಮಪತ್ರ ಸಲ್ಲಿಕೆ ವೇಳೆಯು ಎಚ್​ಡಿಕೆ ಭಾಗಿಯಾಗಲಿದ್ದಾರೆ.

    ಇದನ್ನೂ ಓದಿ: 500 ವರ್ಷಗಳ ಹಿಂದೆ ನಿರ್ಮಾಣವಾದ ಮ್ಯಾಜಿಕಲ್​ ಬಾವಿಯ ಬಗ್ಗೆ ತಿಳಿದ್ರೆ ನಿಮ್ಮ ಹುಬ್ಬೇರುವುದು ಗ್ಯಾರೆಂಟಿ!

    ಮಂಡ್ಯ ಕ್ಷೇತ್ರದಿಂದ ಸ್ಪರ್ಧೆ ಬಗ್ಗೆ ಚರ್ಚೆ ಬೆನ್ನಲ್ಲೇ ಎಚ್​ಡಿಕೆ ಜಿಲ್ಲೆಗೆ ಬರುತ್ತಿದ್ದು, ಕಾರ್ಯಕರ್ತರಲ್ಲಿ ಎಚ್​ಡಿಕೆ ನಡೆ ಕುತೂಹಲ ಮೂಡಿಸಿದೆ. (ದಿಗ್ವಿಜಯ ನ್ಯೂಸ್​)

    ಆರೋಪಗಳ ಸುಳಿಯಲ್ಲಿ ಖಾಕಿ! ಲಂಚ, ಲೈಂಗಿಕ ಕಿರುಕುಳ, ಬೆಳೆಯುತ್ತಿದೆ ಅಮಾನತುಗೊಳ್ಳವವರ ಪಟ್ಟಿ

    500 ವರ್ಷಗಳ ಹಿಂದೆ ನಿರ್ಮಾಣವಾದ ಮ್ಯಾಜಿಕಲ್​ ಬಾವಿಯ ಬಗ್ಗೆ ತಿಳಿದ್ರೆ ನಿಮ್ಮ ಹುಬ್ಬೇರುವುದು ಗ್ಯಾರೆಂಟಿ!

    ರಾಮದಾಸ್ ಕೂಡ ಬಿಜೆಪಿಗೆ ರಾಜೀನಾಮೆ?; ಮನೆಗೆ ಬಂದ ಸಂಸದ-ಅಭ್ಯರ್ಥಿಯನ್ನು ಭೇಟಿಯಾಗದೆ ವಾಪಸ್ ಕಳಿಸಿದ್ರು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts