More

    ಬಂಧನದ ಭೀತಿ: ಎಫ್​ಐಆರ್ ರದ್ದುಗೊಳಿಸುವಂತೆ ಹೈಕೋರ್ಟ್​ ಮೊರೆ ಹೋದ ಆಂಧ್ರದ ಮಾಜಿ ಸಿಎಂ

    ಅಮರಾವತಿ: ಅಮರಾವತಿ ಭೂ ಹಗರಣಕ್ಕೆ ಸಂಬಂಧಿಸಿದಂತೆ ಆಂಧ್ರ ಪ್ರದೇಶ ಮಾಜಿ ಮುಖ್ಯಮಂತ್ರಿ ಹಾಗೂ ತೆಲಗು ದೇಶಂ ಪಕ್ಷದ ಅಧ್ಯಕ್ಷ ಎನ್​ ಚಂದ್ರಬಾಬು ನಾಯ್ಡು ಅವರಿಗೆ ಸಿಐಡಿ ಮಂಗಳವಾರ ನೋಟಿಸ್ ಜಾರಿಗೊಳಿಸಿತ್ತು. ಆದರೆ, ಇಂದು ಚಂದ್ರಬಾಬು ನಾಯ್ಡು ಅವರು, ಸಿಐಡಿ ದಾಖಲಿಸಿರುವ ಎಫ್​ಐಆರ್​ ರದ್ದುಗೊಳಿಸುವಂತೆ ಹೈಕೋರ್ಟ್​​ಗೆ ಅರ್ಜಿ ಸಲ್ಲಿಸಿದ್ದಾರೆ.

    ಆಂಧ್ರಪ್ರದೇಶದ ಹೊಸ ರಾಜಧಾನಿಯಾಗುತ್ತಿರುವ ಅಮರಾವತಿಯಲ್ಲಿ ಚಂದ್ರಬಾಬು ನಾಯ್ಡು ಮುಖ್ಯಮಂತ್ರಿ ಆಗಿದ್ದ ವೇಳೆ ಅಪಾರ ಪ್ರಮಾಣದ ಭೂ ಹಗರಣ ಮಾಡಿದ್ದಾರೆ ಎಂದು ಮುಖ್ಯಮಂತ್ರಿ ಜಗನಮೋಹನ್ ರೆಡ್ಡಿ ಅವರು ಪ್ರಕರಣದ ತನಿಖೆಯನ್ನು ಇತ್ತೀಚೆಗೆ ಸಿಐಡಿ ಗೆ ವಹಿಸಿದ್ದರು.

    ಇದನ್ನು ಓದಿ: ಅಂಡಾಶಯದಲ್ಲಿನ ನೀರುಗುಳ್ಳೆಗೂ, ಮಕ್ಕಳಾಗದೇ ಇರುವುದಕ್ಕೂ ಸಂಬಂಧವಿದೆಯೆ?

    ಸಿಐಡಿ ನೋಟಿಸ್ ಪ್ರಕಾರ ನಾಯ್ಡು ಅವರು ಖುದ್ದು ವಿಚಾರಣೆಗೆ ಹಾಜರಾಗಬೇಕಿದೆ. ಅಲ್ಲದೇ ಅವರ ಮೇಲೆ ಎಫ್​ಐಆರ್​ ದಾಖಲಿಸಲಾಗಿದೆ. ನಾಯ್ಡು ಮೇಲೆ ಸಿಐಡಿ 120b, 166,167, and 217 ಅಡಿ ಪ್ರಕರಣ ದಾಖಲಿಸಿದೆ. ಅಲ್ಲದೇ ಅವರಿಗೆ ಬಂಧನದ ಭೀತಿಯೂ ಕಾಡುತ್ತಿದೆ.

    ಸಿಐಡಿ ನೋಟಿಸ್ ಜಾರಿಗೊಳಿಸಿರುವ ಸಂಗತಿ ಆಂಧ್ರಪ್ರದೇಶದಲ್ಲಿ ರಾಜಕೀಯ ಕೆಸರೆರಚಾಟಕ್ಕೆ ಸಾಕ್ಷಿಯಾಗಿದೆ. ಸಿಎಂ ಜಗನಮೋಹನ್ ರೆಡ್ಡಿ ಹಗೆತನ ಸಾಧಿಸುತ್ತಿದ್ದಾರೆ ಎಂದು ಟಿಡಿಪಿ ಆರೋಪಿಸಿದೆ. ನಾಯ್ಡು ಅವರಿಗೆ ಸಿಐಡಿ ನೋಟಿಸ್ ನೀಡಿರುವ ಸಂಗತಿ ಟ್ವಿಟ್ಟರ್​ನಲ್ಲಿ ಟ್ರಂಡಿಂಗ್ ಆಗಿದ್ದು, ಟಿಡಿಪಿ ಹಾಗೂ ವೈಎಸ್​ಆರ್​ ಕಾಂಗ್ರೆಸ್ ಕಾರ್ಯಕರ್ತರು ಪರ ವಿರೋಧದ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.

    ನಾನು ರಾಜಕೀಯವನ್ನೇ ಬಿಟ್ಟುಬಿಡುತ್ತೇನೆ ಆದರೆ… ಸಿಎಂ ಜಗನ್​ಗೆ ಸವಾಲೆಸೆದ ಚಂದ್ರಬಾಬು ನಾಯ್ಡು

    ನಾನೇನು ಮರ್ಡರ್​ ಮಾಡಲು ಹೋಗುತ್ತಿದ್ದೇನಾ? ಪೊಲೀಸರ ವಶದಲ್ಲಿ ಮಾಜಿ ಸಿಎಂ ಚಂದ್ರಬಾಬು ನಾಯ್ಡು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts