More

    ಆನ್​ಲೈನ್​ನಲ್ಲಿ ಮದ್ಯ ಆರ್ಡರ್​ ಮಾಡಿ ಭರ್ಜರಿ ಹಣ ಕಳೆದುಕೊಂಡ ಮಾಜಿ ಪ್ರಧಾನಿಯ ಮಾಜಿ ಮಾಧ್ಯಮ ಸಲಹೆಗಾರ

    ನವದೆಹಲಿ: ಮಾಜಿ ಪ್ರಧಾನಮಂತ್ರಿ ಮನಮೋಹನ್​ ಸಿಂಗ್​ ಅವರ ಮಾಜಿ ಮಾಧ್ಯಮ ಸಲಹೆಗಾರ ಸಂಜಯ್​ ಬರು ಅವರು ಆನ್​ಲೈನ್​ ಮದ್ಯಮಾರಾಟಗಾರನೋರ್ವನಿಂದ 24,000 ರೂ.ವಂಚನೆಗೆ ಒಳಗಾಗಿದ್ದಾರೆ.

    ಫೇಸ್​​ಬುಕ್​​ನಲ್ಲಿ ಲಿಕರ್​ ಲಾ ಕೇವ್​ ವೈನ್​ ಆ್ಯಂಡ್​ ಸ್ಪಿರಿಟ್​ ಎಂಬ ಹೆಸರಿನಲ್ಲಿ ಅಕೌಂಟ್​ ಹೊಂದಿದ್ದ ಮದ್ಯ ಮಾರಾಟಗಾರನೋರ್ವನ ನಂಬರ್​ ನೋಡಿದ ಸಂಜಯ್​ ಬರು, ಅದಕ್ಕೆ ಕರೆ ಮಾಡಿ, ಆಲ್ಕೋಹಾಲ್​ನ್ನು ಹೋಂ ಡಿಲೆವರಿ ನೀಡುವಂತೆ ಕೇಳಿದ್ದರು.
    ಅದಕ್ಕೆ ಪ್ರತಿಯಾಗಿ ಆತ 24,000 ರೂ.ನ್ನು ಆನ್​ಲೈನ್​ನಲ್ಲಿ ಪಾವತಿ ಮಾಡಿ ಎಂದು ಹೇಳಿದ್ದ. ಅದನ್ನು ನಂಬಿದ ಸಂಜಯ್​ ಬರು ಹಣ ಕಳಿಸಿದರು. ಆದರೆ 24,000 ರೂ.ವನ್ನು ವರ್ಗಾವಣೆ ಮಾಡುತ್ತಿದ್ದಂತೆ ಆ ಮಾರಾಟಗಾರನ ಫೋನ್​ ನಂಬರ್​ ಸ್ವಿಚ್​ ಆಫ್​ ಆಗಿತ್ತು. ತಾನು ಮೋಸಹೋಗಿದ್ದೇನೆಂದು ತಕ್ಷಣ ಅರಿತ ಬರು, ದೆಹಲಿಯ ಹೌಝ್​ ಖಾಸ್​ ಪೊಲೀಸ್​ ಠಾಣೆಯಲ್ಲಿ ಸೈಬರ್​ ಕ್ರೈಂ ದೂರು ನೀಡಿದರು. ಇದನ್ನೂ ಓದಿ:ಹರ್ಭಜನ್‌ ಸಿಂಗ್ ಟ್ರೋಲ್ ಮಾಡಿದ ಯುವಿ..!

    ಪೊಲೀಸರು ತನಿಖೆ ನಡೆಸಿ, ಆರೋಪಿಯನ್ನು ಪತ್ತೆ ಹಚ್ಚಿದ್ದಾರೆ. ಈತ ಮೂಲತಃ ರಾಜಸ್ಥಾನದ ಭರತ್​ಪುರದವನು. ಬ್ಯಾಂಕ್​ನಲ್ಲಿ ಹಲವು ನಕಲಿ ಖಾತೆಗಳನ್ನು ತೆರೆದಿದ್ದಾನೆ. ಪೊಲೀಸರ ಕಣ್ಣು ತಪ್ಪಿಸಲು ಆಸ್ಸಾಂ, ಪಂಜಾಬ್​, ಮಹಾರಾಷ್ಟ್ರ, ರಾಜಸ್ಥಾನಗಳ ಸಿಮ್​ ಕಾರ್ಡ್​ ಮತ್ತು ಬ್ಯಾಂಕ್​ ಖಾತೆಯನ್ನು ಉಪಯೋಗಿಸುತ್ತಿದ್ದ ಎಂಬುದು ತನಿಖೆ ವೇಳೆ ಬೆಳಕಿಗೆ ಬಂದಿದೆ.

    ಅಂತೆಯೇ ಬರು ಅವರು ವರ್ಗಾವಣೆ ಮಾಡಿದ ಹಣ ಆರೋಪಿಯ ಪಂಜಾಬ್​ ನ್ಯಾಷನಲ್​ ಬ್ಯಾಂಕ್​ನಲ್ಲಿದ್ದ ಖಾತೆಗೆ ಹೋಗಿತ್ತು. ಆ ಅಕೌಂಟ್​ ಅಕಿಬ್​ ಜವನ್​ ಎಂಬ ಹೆಸರಿನಲ್ಲಿತ್ತು. ರಾಜಸ್ಥಾನದ ಭರತ್​ಪುರದಲ್ಲಿರುವ ಮನೆಯಲ್ಲೇ ಅಕಿಬ್​ನನ್ನು ಬಂಧಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ‘ನನ್ನನ್ನು ಹುದ್ದೆಯಿಂದ ಕೆಳಗಿಳಿಸಲು ಭಾರತ ಪಿತೂರಿ ನಡೆಸುತ್ತಿದೆ’ ಎಂದು ಆರೋಪಿಸಿದ ನೇಪಾಳ ಪ್ರಧಾನಿ

    ತನಿಖೆಯ ವೇಳೆ ಅಕಿಬ್ ಎಲ್ಲ ಸತ್ಯವನ್ನೂ ಬಿಚ್ಚಿಟ್ಟಿದ್ದಾನೆ. ಹೀಗೆ ಹಲವು ಖಾತೆಗಳನ್ನು ನಕಲಿ ಹೆಸರುಗಳಲ್ಲಿ ತೆರೆದಿದ್ದೆ. ಯಾರಾದರೂ ಫೋನ್​ ಮಾಡಿದಾಗ ಹಣ ಹಾಕಲು ಅದರಲ್ಲಿ ಯಾವುದಾದರೊಂದು ಖಾತೆಯ ವಿವರ ಕೊಡುತ್ತಿದ್ದೆ. ಅಲ್ಲಿಂದ ನನ್ನ ಸ್ವಂತ ಅಕೌಂಟ್​ಗೆ ಟ್ರಾನ್ಸ್​ಫರ್​ ಮಾಡಿಕೊಳ್ಳುತ್ತಿದ್ದೆ ಎಂದು ತಿಳಿಸಿದ್ದಾನೆ. (ಏಜೆನ್ಸೀಸ್)

    ಬೇಳೆ ಸಂಸ್ಕರಣಾ ಯಂತ್ರದಲ್ಲಿ ಬಿದ್ದು ಛಿದ್ರವಾಯ್ತು ಮಹಿಳೆಯ ದೇಹ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts