More

    ಸುದೀಪ್​ ಚಿತ್ರಕ್ಕೆ ರಾಜಮಂಡ್ರಿಯಿಂದ 22 ಲಾರಿಗಳಲ್ಲಿ ಬಂದಿದ್ದೇನು?

    ಸುದೀಪ್​ ಅಭಿನಯದ ‘ಫ್ಯಾಂಟಮ್​’ ಚಿತ್ರದ ಚಿತ್ರೀಕರಣ ಜುಲೈ ಒಂದರಿಂದ ಪ್ರಾರಂಭವಾಗಲಿದೆ ಎಂದು ಇದಕ್ಕೂ ಮುನ್ನ ಹೇಳಲಾಗಿತ್ತು. ಆದರೆ, ಇದೀಗ ಚಿತ್ರದ ಶೂಟಿಂಗ್​ನಲ್ಲಿ ಒಂದು ಸಣ್ಣ ಬದಲಾವಣೆಯಾಗಿದ್ದು, ಚಿತ್ರೀಕರಣವು ಮುಂದಿನ ಸೋಮವಾರದಿಂದ (ಜುಲೈ 6) ಪ್ರಾರಂಭವಾಗಲಿದೆ.

    ಇದನ್ನೂ ಓದಿ: ಕೆಲಸ ಇಲ್ಲದೆ ತರಕಾರಿ ಮಾರುತ್ತಿರುವ ಬಾಲಿವುಡ್​ ನಟ!

    'ಫ್ಯಾಂಟಮ್​' ಚಿತ್ರಕ್ಕೆ ಕಾಡಿನ ಸೆಟ್​ ನಿರ್ಮಾಣ

    'ಕಿಚ್ಚ' ಸುದೀಪ್​ ಅಭಿನಯದ 'ಫ್ಯಾಂಟಮ್​' ಚಿತ್ರದ ಚಿತ್ರೀಕರಣ ಜುಲೈ ಆರರಿಂದ ಪ್ರಾರಂಭವಾಗಲಿದ್ದು, ಅದಕ್ಕಾಗಿ ಹೈದರಾಬಾದ್​ನ ಅನ್ನಪೂರ್ಣ ಸ್ಟುಡಿಯೋದ 18 ಸಾವಿರ ಚದುರಡಿ ಫ್ಲೋರ್​ನಲ್ಲಿ ಕಾಡಿನ ಸೆಟ್​ ನಿರ್ಮಾಣ ಮಾಡಲಾಗುತ್ತಿದೆ.

    Posted by Vijayavani on Monday, June 29, 2020

    ವಿಶೇಷವೆಂದರೆ, ಚಿತ್ರಕ್ಕಾಗಿ ಹೈದರಾಬಾದ್​ನ ಅನ್ನಪೂರ್ಣ ಸ್ಟುಡಿಯೋದ ಮೂರು ಫ್ಲೋರ್​ಗಳನ್ನು ಬುಕ್ ಮಾಡಲಾಗಿದೆ. ಈ ಫ್ಲೋರ್​ಗಳಲ್ಲಿ ಕಾಡಿನ ಸೆಟ್​ ನಿರ್ಮಿಸಲಾಗುತ್ತಿದೆ. ಬರೀ ಕಾಡಷ್ಟೇ ಅಲ್ಲ, ಜಲಪಾತ, ಸೇತುವೆ, ಗುಡಿಸಲುಗಳು ಇವೆಲ್ಲಾ ಈ ಸೆಟ್​ಗಳಲ್ಲಿ ನಿರ್ಮಾಣವಾಗಲಿದೆ.

    ಈ ಪೈಕಿ ಒಂದು ಫ್ಲೋರ್​ 18 ಸಾವಿರ ಚದುರಡಿಗಳಷ್ಟು ಇದ್ದು, ಇಲ್ಲಿ ಬಹಳಷ್ಟು ಚಿತ್ರೀಕರಣ ನಡೆಯಲಿದೆ ಎಂದು ಹೇಳಲಾಗುತ್ತಿದೆ. ಕಾಡಿನ ಸೆಟ್​ ಆದ್ದರಿಂದ, ರಾಜಮಂಡ್ರಿಯಿಂದ 50 ಲಕ್ಷ ಮೌಲ್ಯದ ಗಿಡಗಳನ್ನು ತರಿಸಲಾಗಿದೆ. ಈ ಗಿಡಗಳನ್ನು ಬಳಸಿಕೊಂಡು, ಕಾಡಿನ ಸೆಟ್​ ನಿರ್ಮಿಸಲಾಗುತ್ತಿದೆ.

    ‘ಈಗಾಗಲೇ 40 ಜನ ಕೆಲಸಗಾರರು ಸೆಟ್​ ಕೆಲಸದಲ್ಲಿ ನಿರತರಾಗಿದ್ದಾರೆ. ಹೈದರಾಬಾದ್​ನಲ್ಲಿ ಕೋವಿಡ್​ ಪ್ರಕರಣಗಳು ಹೆಚ್ಚಾಗುತ್ತಿರುವ ಕಾರಣ, ವಿಶೇಷ ಎಚ್ಚರಿಕೆಗಳನ್ನು ತೆಗೆದುಕೊಂಡು ಕೆಲಸ ಮಾಡಿಸಲಾಗುತ್ತಿದೆ. ಸೆಟ್​ಗೆ ಪೂರಕವಾದ ಕೆಲಸಗಳಲ್ಲಿ ಈ ಕೆಲಸಗಾರರು ನಿರತರಾಗಿದ್ದು, ಮುಂದಿನ ಕೆಲವು ದಿನಗಳಲ್ಲಿ ಸೆಟ್​ ಕೆಲಸಗಳು ಮುಗಿಯಲಿದೆ. ಆ ನಂತರ ಚಿತ್ರತಂಡದವರು ಹೈದರಾಬಾದ್​ಗೆ ಹೋಗಿ ಅಲ್ಲಿ ಚಿತ್ರೀಕರಣ ನಡೆಸಲಾಗುತ್ತದೆ ಎಂದು ನಿರ್ಮಾಪಕ ಜಾಕ್​ ಮಂಜು ತಿಳಿಸಿದ್ದಾರೆ.

    ಇದನ್ನೂ ಓದಿ: PHOTOS| ‘ಕೋಬ್ರಾ’ ಜತೆ ಶ್ರೀನಿಧಿ ಶೆಟ್ಟಿ ನಿಶ್ಚಿತಾರ್ಥ; ಫೋಟೋಗಳು ಇಲ್ಲಿವೆ…

    ಸುದೀಪ್​ ಅಭಿನಯದ 'ಫ್ಯಾಂಟಮ್​' ಚಿತ್ರಕ್ಕೆ ಸೆಟ್​ಗಳ ನಿರ್ಮಾಣ

    'ಕಿಚ್ಚ' ಸುದೀಪ್​ ಅಭಿನಯದ 'ಫ್ಯಾಂಟಮ್​' ಚಿತ್ರಕ್ಕೆ ಹೈದರಾಬಾದ್​ನ ಅನ್ನಪೂರ್ಣ ಸ್ಟುಡಿಯೋದಲ್ಲಿ ಚಿತ್ರೀಕರಣ ಮಾಡುವುದಕ್ಕೆ ವಿಶೇಷ ಸೆಟ್​ಗಳನ್ನು ನಿರ್ಮಿಸಲಾಗುತ್ತಿದೆ. ಈಗಾಗಲೇ ಸುಮಾರು 40 ಜನ ಸೆಟ್​ಗಳ ನಿರ್ಮಾಣದಲ್ಲಿ ತೊಡಗಿಸಿಕೊಂಡಿದ್ದು, ಅಲ್ಲಿನ ದೊಡ್ಡ ಫ್ಲೋರ್​ನಲ್ಲಿ ಕಾಡಿನ ಸೆಟ್​ ಹಾಕುವುದರಲ್ಲಿ ನಿರತರಾಗಿದ್ದಾರೆ.

    Posted by Vijayavani on Monday, June 29, 2020

    ‘ಫ್ಯಾಂಟಮ್​’ ಚಿತ್ರವನ್ನು ಶಾಲಿನಿ ಆರ್ಟ್ಸ್​ನಡಿ ನಿರ್ಮಾಣ ಮಾಡಲಾಗುತ್ತಿದ್ದು, ಚಿತ್ರಕ್ಕೆ ಕಥೆ-ಚಿತ್ರಕಥೆ-ಸಂಭಾಷಣೆ ಬರೆಯುವುದರ ಜತೆಗೆ ನಿರ್ದೇಶನ ಮಾಡುತ್ತಿದ್ದಾರೆ ‘ರಂಗಿತರಂಗ’ ಖ್ಯಾತಿಯ ಅನೂಪ್​ ಭಂಡಾರಿ. ಚಿತ್ರದಲ್ಲಿ ಸುದೀಪ್​ ಅವರು ವಿಕ್ರಾಂತ್​ ರೋಣ ಎಂಬ ಪಾತ್ರ ಮಾಡುತ್ತಿದ್ದು, ಜತೆಗೆ ನಿರೂಪ್​ ಭಂಡಾರಿ ಸಹ ಒಂದು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

    ಅಕ್ಷಯ್​ಗೆ ಮೋದಿ ಸರ್ಕಾರ ಅಂದ್ರೆ ಭಯಾನಾ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts