More

    ವನ್ಯಜೀವಿಗಳಿಗೆ ಹೆದರದ ಅರಣ್ಯಾಧಿಕಾರಿ, ಪತಿಯ ದೌರ್ಜನ್ಯಕ್ಕೆ ಹೆದರಿದರು

    ಹೈದರಾಬಾದ್​: ಅವರು ಅರಣ್ಯಾಧಿಕಾರಿಯಾಗಿ ನಿತ್ಯವೂ ವನ್ಯಜೀವಿಗಳೊಂದಿಗೆ ಒಡನಾಡುತ್ತಿದ್ದವರು. ಹಾಗಾಗಿ ಅವರಿಗೆ ವನ್ಯಜೀವಿಗಳನ್ನು ಕಂಡರೆ ಅಷ್ಟೇನೂ ಹೆದರಿಕೆ ಇರಲಿಲ್ಲ. ಆದರೆ, ಮದುವೆಯಾದ ಬಳಿಕ ಪತಿ ಕೊಡುತ್ತಿದ್ದ ಕಿರುಕುಳಕ್ಕೆ ಹೆದರಿ, ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

    ತೆಲಂಗಾಣದ ಮೆಹಬೂಬ್​ನಗರ ಜಿಲ್ಲೆಯ ಮೊಹಮದಾಬಾದ್​ ನಿವಾಸಿ, ಡೆಪ್ಯುಟಿ ಫಾರೆಸ್ಟ್​ ರೇಂಜ್​ ಆಫೀಸರ್​ ಆಗಿದ್ದ ವಹೀದಾ ಬೇಗಂ (32) ಆತ್ಮಹತ್ಯೆ ಮಾಡಿಕೊಂಡವರು. ತಮ್ಮ ಮನೆಯಲ್ಲೇ ಇವರು ಬುಧವಾರ ಮಧ್ಯಾಹ್ನ ಕೀಟನಾಶಕ ಸೇವಿಸಿ ಮೃತಪಟ್ಟಿದ್ದಾರೆ. ವಿಷಸೇವಿಸಿ ಒದ್ದಾಡುತ್ತಿದ್ದಾಗ ತಕ್ಷಣವೇ ಅವರನ್ನು ಮೊಹಮ್ಮದಾಬಾದ್​ಮನ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ, ಮಾರ್ಗಮಧ್ಯೆಯೇ ಅವರು ಅಸುನೀಗಿದರು ಎಂದು ಪೊಲೀಸರು ಹೇಳಿದ್ದಾರೆ.

    ಇದನ್ನೂ ಓದಿ: ವರ್ಷದ ಹಿಂದಷ್ಟೇ ಮದ್ವೆಯಾಗಿದ್ದ ಟೆಕ್ಕಿ ನೇಣಿಗೆ ಶರಣು: ಗಂಡನ ದಿಢೀರ್​ ಬದಲಾವಣೆಯೇ ಕಾರಣ!

    ಮೃತೆ ಯಾವುದೇ ಮರಣಪತ್ರ ಬರೆದಿಟ್ಟಿರಲಿಲ್ಲ. ಆದರೆ, ಅರಣಾಧಿಕಾರಿಯ ಕುಟುಂಬ ವರ್ಗದವರು, ಅರಣ್ಯ ಇಲಾಖೆಯಲ್ಲಿ ಕ್ಲರ್ಕ್​ ಆಗಿರುವ ಇವರ ಪತಿ ಹಾಗೂ ಆತನ ಮನೆಯವರ ಕಿರುಕುಳ ತಾಳಲಾರದೆ ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ ಎಂದು ತಿಳಿಸಿದ್ಧಾರೆ.

    ಇದೀಗ ಪತಿಯ ವಿರುದ್ಧ ವರದಕ್ಷಿಣೆ ಕಿರುಕುಳ ಸೇರಿ ಭಾರತೀಯ ದಂಡ ಸಂಹಿತೆಯ ವಿವಿಧ ವಿಧಿಗಳನ್ವಯ ಪತಿ ವಿರುದ್ಧ ದೂರು ದಾಖಲಿಸಿಕೊಳ್ಳಲಾಗಿದೆ. ಆದರೆ, ಇದುವರೆಗೂ ಯಾರನ್ನೂ ಬಂಧಿಸಿಲ್ಲ ಎಂದು ಹೇಳಿದ್ದಾರೆ.

    ತಲೆದೋರಲಿದ್ದ ಕಾವೇರಿ ವಿವಾದ ಸದ್ಯಕ್ಕೆ ದೂರ: ಎಷ್ಟು ಟಿಎಂಸಿ ನೀರು ತಮಿಳುನಾಡಿಗೆ ಹರಿದಿದೆ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts