More

    ಅರಣ್ಯ ಒತ್ತುವರಿ: ಒತ್ತುವರಿ ಭೂಮಿ ಗುತ್ತಿಗೆ ಸಲ್ಲದು

    ಚಿಕ್ಕಮಗಳೂರು: ಅರಣ್ಯವನ್ನು ಒತ್ತುವರಿ ಮಾಡಿ ಕಾಫಿ ತೋಟ ನಿರ್ಮಾಣ ಮಾಡಿಕೊಂಡಿರುವ ಶ್ರೀಮಂತ ಭೂ ಹಿಡುವಳಿದಾರರಿಗೆ ಮತ್ತೆ 10 ಎಕರೆವರೆಗೆ ಒತ್ತುವರಿ ಭೂಮಿಯನ್ನು ಲೀಸ್‌ಗೆ ನೀಡಲು ನಿರ್ಧಾರ ಮಾಡಿರುವ ಕಾಂಗ್ರೆಸ್ ಸರ್ಕಾರದ ಕ್ರಮವನ್ನು ಖಂಡಿಸಿ ಶ್ರೀಮಂತರಿಗೆ ಭೂಮಿ ಲೀಸ್, ಬಡವರಿಗೆ ಮಂಕುಬೂದಿ ಎಂಬ ಘೋಷಣೆಯೊಂದಿಗೆ ಭೂ ಹಕ್ಕು ಹೋರಾಟ ಸಮಿತಿ ಕಾರ್ಯಕರ್ತರು ನಗರದ ಆಜಾದ್ ಪಾರ್ಕ್ ವೃತ್ತದಲ್ಲಿ ಗುರುವಾರ ಪ್ರತಿಭಟನೆ ನಡೆಸಿದರು. ಈ ಮೂಲಕ ಜನಜಾಗೃತಿ ಜಾಥಾಗೆ ಚಾಲನೆ ನೀಡಿದರು.

    ಜಿಲ್ಲೆ ಸೇರಿದಂತೆ ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಭೂಮಾಲೀಕರಿಗೆ 10 ಎಕರೆವರೆಗೂ ಭೂಮಿ ಲೀಸ್(ಗುತ್ತಿಗೆ) ಕೊಡಲು ಹೊರಟಿರುವ ರಾಜ್ಯ ಸರ್ಕಾರದ ಶ್ರಮವನ್ನು ಸಮಿತಿಯು ಖಂಡಿಸುತ್ತದೆ. ಕೂಡಲೇ ಈ ಪ್ರಸ್ತಾವನೆಯನ್ನು ರಾಜ್ಯ ಸರ್ಕಾರ ಕೂಡಲೇ ಹಿಂಪಡೆಯಬೇಕು ಎಂದು ಪ್ರತಿಭಟನಾನಿರತರು ಆಗ್ರಹಿಸಿದರು.
    ಮಲೆನಾಡಿನ ಜಿಲ್ಲೆಗಳಲ್ಲಿ ಭೂ ಒತ್ತುವರಿ ಸಮಸ್ಯೆ ಗಂಭೀರವಾಗಿದೆ. ಬಡವರು, ಸಣ್ಣ, ಮಧ್ಯಮ ರೈತರು ಹೆಚ್ಚೆಂದರೆ 3-4 ಎಕರೆ ಒತ್ತುವರಿ ಮಾಡಿಕೊಂಡು ಜೀವನ ನಡೆಸುತ್ತಿದ್ದಾರೆ. ಆದರೆ 10-20 ಎಕರೆ ತೋಟವಿದ್ದ ಪ್ಲಾಂಟರುಗಳು ತಮ್ಮ ಜಮೀನಿನ ಸುತ್ತ ಅದಕ್ಕೆ ಹೊಂದಿಕೊಂಡಿರುವ 10, 50, 100 ಎಕರೆಗೂ ಹೆಚ್ಚು ಗುಡ್ಡಗಳನ್ನು ಒತ್ತುವರಿ ಮಾಡಿದ್ದಾರೆ ಎಂದು ದೂರಿದರು.
    ಇಂತಹ ಭೂಮಾಲೀಕರ ಅಕ್ರಮ ಸಾಗುವಳಿಗೆ 10 ಎಕರೆವರೆಗೂ ಲೀಸ್ ಕೊಡಲು ಸರ್ಕಾರ ಹೊರಟಿದೆ. ಇದೇ ವೇಳೆಯಲ್ಲಿ ಬಡವರು, ಸಣ್ಣ, ಅತೀ ಸಣ್ಣ ರೈತರು ಸಾಗುವಳಿ ಮಾಡಿಕೊಂಡ ಜಮೀನು ಬಗ್ಗೆ ಸರ್ಕಾರ ಯಾವ ನಿರ್ಣಯವನ್ನು ತೆಗೆದುಕೊಂಡಿಲ್ಲ ಎಂದು ಆರೋಪಿಸಿದರು.
    ಪ್ರಗತಿಪರ ಸಂಘಟನೆಗಳ ಮುಖಂಡರಾದ ಮರ್ಲೆ ಅಣ್ಣಯ್ಯ, ಶ್ರೀನಿವಾಸ್ ದಂಟರಮಕ್ಕಿ, ಕೃಷ್ಣಮೂರ್ತಿ, ಐ.ಎಂ.ಪೂರ್ಣೇಶ್, ಹರೀಶ್ ನಲಿಕೆ, ಸುರೇಶ್ ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts