More

    ಬಂಡೀಪುರದಲ್ಲಿ 4,520 ಎಕರೆ ಅರಣ್ಯ ಒತ್ತುವರಿ ಮಾಹಿತಿ ಹಕ್ಕು ಕಾಯ್ದೆಯಲ್ಲಿ ಬಹಿರಂಗ  

    ಗುಂಡ್ಲುಪೇಟೆ: ಬಂಡೀಪುರ ಹುಲಿಯೋಜನೆಯಲ್ಲಿ 4,520 ಎಕರೆಯಷ್ಟು ಅರಣ್ಯ ಭೂಮಿ ಒತ್ತುವರಿಯಾಗಿರುವುದು ಮಾಹಿತಿ ಹಕ್ಕು ಕಾಯ್ದೆಯಲ್ಲಿ ಬಹಿರಂಗವಾಗಿದೆ.

    ಹುಲಿ ಯೋಜನೆಯ ವಲಯಗಳಲ್ಲಿ ಈವರೆಗೆ 1121 ಒತ್ತುವರಿ ಪ್ರಕರಣಗಳು ದಾಖಲಾಗಿವೆ. ಕೇರಳ ರಸ್ತೆಯಲ್ಲಿರುವ ಮದ್ದೂರು ವಲಯದಲ್ಲಿ 113 ಪ್ರಕರಣದಲ್ಲಿ 321 ಎಕರೆ, ಓಂಕಾರ್ ವಲಯದಲ್ಲಿ 765 ಪ್ರಕರಣಗಳಲ್ಲಿ 2605 ಎಕರೆ, ಗುಂಡ್ಲುಪೇಟೆ ಬಫರ್ ವಲಯದಲ್ಲಿ 23 ಪ್ರಕರಣಗಳಲ್ಲಿ 45 ಎಕರೆ, ಮೊಳೆಯೂರಿನಲ್ಲಿ 223 ಪ್ರಕರಣಗಳಲ್ಲಿ 746 ಎಕರೆ, ಹೆಡಿಯಾಲದಲ್ಲಿ 100 ಪ್ರಕರಣಗಳಲ್ಲಿ 803 ಎಕರೆ ಅರಣ್ಯ ಭೂಮಿ ಒತ್ತುವರಿಯಾಗಿದೆ.

    ನೂರಾರು ವರ್ಷಗಳಿಂದಲೂ ಉದ್ಯಮಿಗಳು, ರಾಜಕಾರಣಿಗಳು ಹಾಗೂ ನೆರೆರಾಜ್ಯದ ಜನರು ಅರಣ್ಯವನ್ನು ಅತಿಕ್ರಮಿಸಿ ಸುತ್ತಲೂ ಬೇಲಿ ಹಾಕಿಕೊಳ್ಳುವ ಜತೆಗೆ ಫಾಮ್ರ್ ಹೌಸ್ ನಿರ್ವಿುಸಿಕೊಂಡು ವ್ಯವಹಾರ ನಡೆಸುತ್ತಿದ್ದಾರೆ. ಮದ್ದೂರು ವಲಯದಲ್ಲಿ 7 ಪ್ರಕರಣಗಳಲ್ಲಿ 46 ಎಕರೆ ಒತ್ತುವರಿ ತೆರವುಗೊಳಿಸಿ 178 ಮೊಕದ್ದಮೆ ದಾಖಲಿಸಿದ ಅರಣ್ಯಾಧಿಕಾರಿಗಳು ಇತರ 943 ಪ್ರಕರಣಗಳಲ್ಲಿ ಯಾವುದೇ ಕ್ರಮಕ್ಕೆ ಮುಂದಾಗಿಲ್ಲದಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

    ಮದ್ದೂರು ವಲಯದ ಕಚೇರಿ ಸಮೀಪವೇ ನೂರಾರು ಎಕರೆ ಭೂಮಿ ಅತಿಕ್ರಮಿಸಿ ಅಕ್ರಮ ಫಾಮರ್್​ಹೌಸ್ ನಿರ್ವಿುಸಿ ಅನುಮತಿ ಇಲ್ಲದೆಯೆ ಹೋಂಸ್ಟೇ ನಿರ್ವಿುಸಿ ವ್ಯವಹಾರ ನಡೆಸಲಾಗುತ್ತಿದೆ. ಭಾರಿ ಶಬ್ದ ಮಾಡುವ ಧ್ವನಿವರ್ಧಕ ಬಳಸುವುದು, ಜಮೀನಿನ ಸುತ್ತಲೂ ಫೆನ್ಸಿಂಗ್ ಹಾಕಿ ಸ್ಥಳೀಯರನ್ನು ನಿರ್ಬಂಧಿಸಲಾಗಿದೆ. ಅಲ್ಲದೆ ಸುತ್ತಲೂ ಪ್ರಖರ ಎಲ್​ಇಡಿ ದೀಪಗಳನ್ನು ಅಳವಡಿಸಲಾಗಿರುವುದರಿಂದ ಬಹುದೂರದವರೆಗೆ ಹೊರಸೂಸುವ ಬೆಳಕಿನಿಂದ ವನ್ಯಜೀವಿಗಳ ಸಹಜ ಜೀವನಕ್ಕೆ ಅಡ್ಡಿಯುಂಟಾಗುತ್ತಿದೆ. ಆದರೂ ಇದನ್ನು ತಡೆಗಟ್ಟಲು ಅರಣ್ಯಾಧಿಕಾರಿಗಳು ಮುಂದಾಗಿಲ್ಲ.

    ಬಡ ರೈತರ ಸಣ್ಣಪುಟ್ಟ ಒತ್ತುವರಿಯನ್ನು ಮುಲಾಜಿಲ್ಲದೆ ತೆರವು ಮಾಡುವ ಅರಣ್ಯ ಇಲಾಖೆ ಪ್ರಕರಣ ದಾಖಲಿಸುತ್ತದೆ. ಆದರೆ, ನೆರೆರಾಜ್ಯಗಳ ಉದ್ಯಮಿಗಳು ಮತ್ತು ಪ್ರಭಾವಿ ರಾಜಕಾರಣಿಗಳು 4 ಸಾವಿರ ಎಕರೆ ಅರಣ್ಯ ಪ್ರದೇಶವನ್ನು ಒತ್ತುವರಿ ಮಾಡಿಕೊಂಡು ಫಾಮರ್್​ಹೌಸ್ ನಿರ್ವಿುಸಿಕೊಂಡಿದ್ದರೂ ತೆರವಿಗೆ ಕ್ರಮ ಕೈಗೊಂಡಿಲ್ಲ.
    | ಕಡಬೂರು ಮಂಜುನಾಥ್ ರೈತ ಮುಖಂಡ

    ಅರಣ್ಯ ಒತ್ತುವರಿ ಪ್ರಕರಣಗಳನ್ನು ದಾಖಲಿಸಲಾಗಿದ್ದು, ಒತ್ತುವರಿ ತೆರವಿಗೆ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.
    | ಟಿ. ಬಾಲಚಂದ್ರ ಬಂಡೀಪುರ ಹುಲಿ ಯೋಜನೆ ನಿರ್ದೇಶಕ 

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts