More

    ಮೊಲದ ಮಾಂಸ ಬೇಯಿಸುತ್ತಿದ್ದ ಇಬ್ಬರ ಬಂಧನ

    ಚಾಮರಾಜನಗರ: ಗುಂಡ್ಲುಪೇಟೆಯ ಅರಣ್ಯ ಪ್ರದೇಶದಲ್ಲಿ ಉರುಳು ಹಾಕಿ ಕೊಂದ ಮೊಲದ ಮಾಂಸ ಬೇಯಿಸುತ್ತಿದ್ದ ಇಬ್ಬರು ಕಳ್ಳ ಬೇಟೆಗಾರರನ್ನು ಅರಣ್ಯ ಸಿಬ್ಬಂದಿ ಬಂಧಿಸಿ ಜೈಲಿಗಟ್ಟಿದ್ದಾರೆ.


    ಶಿವಪುರ ಗ್ರಾಮದ ಚಿಕ್ಕನಾಗಶೆಟ್ಟಿ ಅವರ ಮಗ ಜವರಶೆಟ್ಟಿ(40), ಚೌಡಹಳ್ಳಿ ಗ್ರಾಮದ ಕುನ್ನಬೆಳ್ಳಯ್ಯ ಅವರ ಮಗ ಪ್ರಸಾದ್(49) ಬಂಧಿತ ಆರೋಪಿಗಳು.


    ಬಂಡೀಪುರ ಹುಲಿ ಯೋಜನೆಯ ಗೋಪಾಲಸ್ವಾಮಿ ಬೆಟ್ಟ ವಲಯಕ್ಕೆ ಸೇರಿದ ಹುಲಿಯಮ್ಮನ ದೇವಾಲಯದಿಂದ ಚೌಡಹಳ್ಳಿ ರಸ್ತೆಯ ಇಬ್ಬರು ವ್ಯಕ್ತಿಗಳು ಗುರುವಾರ ರಾತ್ರಿ ಟಾರ್ಚ್ ಬೆಳಕಿನಲ್ಲಿ ಸಂಚರಿಸುತ್ತಿದ್ದರು.


    ಈ ಬಗ್ಗೆ ಸಂಶಯಗೊಂಡ ಗಸ್ತಿನ ಸಿಬ್ಬಂದಿ ಹತ್ತಿರ ಹೋಗಿ ನೋಡಿದಾಗ ಪಾತ್ರೆಯಲ್ಲಿ ಮಾಂಸ ಬೇಯಿಸುತ್ತಿರುವುದು ಕಂಡು ಬಂದಿದೆ. ಕೂಡಲೇ ಇಬ್ಬರನ್ನು ಮಾಲು ಸಮೇತ ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕಣಿಯನಪುರ ಅರಣ್ಯ ಪ್ರದೇಶದಲ್ಲಿ ಉರುಳು ಹಾಕಿ ಮೊಲವನ್ನು ಹಿಡಿದಿದ್ದಾಗಿ ಒಪ್ಪಿಕೊಂಡಿದ್ದಾರೆ.

    ಆರೋಪಿಗಳಿಂದ ವನ್ಯಜೀವಿಗಳ ಬೇಟೆಗೆ ಬಳಕೆಮಾಡುತ್ತಿದ್ದ ನಾಡಬಂದೂಕು, ನವಿಲು ಗರಿಗಳು ಹಾಗೂ ಮಾಂಸ ಬೇಯಿಸಲು ಬಳಕೆ ಮಾಡಿದ್ದ ಪಾತ್ರೆಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.


    ಅರಣ್ಯ ಇಲಾಖೆ ಪಶುವೈದ್ಯ ಡಾ.ವಾಸಿಂ ಮಿರ್ಜಾ ಮಾಂಸದ ಮಾದರಿಯನ್ನು ಪ್ರಯೋಗಾಲಯಕ್ಕೆ ಕಳುಹಿಸಿದರು. ಈ ಬಗ್ಗೆ ಗೋಪಾಲಸ್ವಾಮಿ ಬೆಟ್ಟ ವಲಯದ ಆರ್ ಎಫ್‌ಒ ಮಂಜುನಾಥ್ ಪ್ರಕರಣ ದಾಖಲಿಸಿ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts