More

    ಬೀದಿ ನಾಟಕ ಪ್ರದರ್ಶನ

    ಚಿಕ್ಕೋಡಿ: ತಾಲೂಕಿನ ಯರನಾಳ ಹಾಗೂ ಗೋಂದಿಕೊಪ್ಪಿ ಗ್ರಾಮದಲ್ಲಿ ಸಾರ್ವಜನಿಕರಿಗೆ ಬೆಂಕಿಯಿಂದ ಅರಣ್ಯ ಸಂರಕ್ಷಣೆ ಹಾಗೂ ಗಿಡ-ಮರಗಳ ಬೆಳೆಸಿ ಪೋಷಿಸುವ ಕುರಿತು ಅರಣ್ಯ ಇಲಾಖೆ ಸಹಯೋಗದಲ್ಲಿ ಇತ್ತೀಚೆಗೆ ಬೀದಿ ನಾಟಕ ಪ್ರದರ್ಶನ ಮತ್ತು ಜಾಗೃತಿ ಗೀತೆಗಳ ಕಾರ್ಯಕ್ರಮ ಜರುಗಿತು.

    ಗೀಗಿ ಪದ, ಜಾನಪದ ಗೀತೆ, ಕಲಾತ್ಮಕ ಅಭಿನಯದಿಂದ ಬೇಸಿಗೆ ಕಾಲದಲ್ಲಿ ಅರಣ್ಯಕ್ಕೆ ಬೆಂಕಿ ಬೀಳುವ ಮುನ್ನ ಜಾಗ್ರತೆ ಇರಬೇಕು. ಜತೆಗೆ ಪ್ರಾಣಿ-ಪಕ್ಷಿಗಳ ಸಂಕುಲ ಉಳಿಸುವ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಗಿಡಗಳನ್ನು ನೆಡಬೇಕು.

    ರೈತರಿಗೆ ಅರಣ್ಯ ಇಲಾಖೆಯಿಂದ ಸಿಗುವ ಸೌಲಭ್ಯಗಳ ಕುರಿತು ಅರಿವು ಮೂಡಿಸಲಾಯಿತು. ಭರತ ಕಲಾಚಂದ್ರ, ಮಾರುತಿ ಕಾಮಗೌಡ, ಅಪ್ಪಾಸಾಬ ಚಿಮನೆ, ಸಾವಿತ್ರಿ ಹಳಕಲ, ಸತ್ಯವ್ವ ಹಾರೂಗೇರಿ, ಪ್ರಕಾಶ ಜನಮಟ್ಟಿ, ಸುಜಾತಾ ಮಗದುಮ್ಮ, ವಿಷ್ಣು ಹಲಗೇಕರ, ಸಂತ್ರಾಮ ಮಯೂರ ಹಾಗೂ ಗ್ರಾಮಸ್ಥರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts