More

    ಕಲ್ಲುಗಣಿಗಾರಿಕೆಗೆ ಅರಣ್ಯ ಭೂಮಿ ಪರಭಾರೆ ಆರೋಪ

    ಬೆಂಗಳೂರು: ರಾಜ್ಯದಲ್ಲಿ ಅರಣ್ಯ ಭೂಮಿ ಕ್ಷೀಣವಾಗುತ್ತಿದೆ ಎಂಬ ಕಟುಸತ್ಯದ ನಡುವೆಯೇ ಕಲ್ಲುಗಣಿಗಾರಿಕೆ ಅವಕಾಶ ಕಲ್ಪಿಸುವ ಉದ್ದೇಶದಿಂದ ಅರಣ್ಯ ಭೂಮಿ ಹಾಗೂ ಗೋಮಾಳ ಜಮೀನನ್ನು ಪ್ರಭಾವಿಗಳಿಗೆ ಪರಭಾರೆ ಮಾಡಲು ಸದ್ದಿಲ್ಲದೆ ಪ್ರಕ್ರಿಯೆ ಆರಂಭವಾಗಿರುವ ಆರೋಪ ಕೇಳಿಬಂದಿದೆ. ಇದರ ಬೆನ್ನಲ್ಲೇ ದಿಢೀರನೆ ಜಂಟಿ ಸರ್ವೆ ನಡೆಸಿ ವರದಿ ಸಲ್ಲಿಸುವಂತೆ ಸರ್ಕಾರದ ಆದೇಶವಾಗಿರುವುದು ಭೂಮಿ ಪರಭಾರೆ ಹುನ್ನಾರ ನಡೆದಿರುವ ಅನುಮಾನವನ್ನು ಮತ್ತಷ್ಟು ಹೆಚ್ಚಿಸಿದೆ.

    ಇದನ್ನೂ ಓದಿ: ಯೋಗೀಶ್ ಗೌಡ ಕೊಲೆ ಪ್ರಕರಣ: ಹಾವೇರಿ ಎಎಸ್ಪಿ ಮಲ್ಲಿಕಾರ್ಜುನ್ ವಿಚಾರಣೆ

    ಅರಣ್ಯ ಭೂಮಿ ಮತ್ತು ಸರ್ಕಾರಿ ಗೋಮಾಳ ಜಾಗವನ್ನು ಕಂದಾಯ, ಅರಣ್ಯ ಹಾಗೂ ಭೂ ಕಲ್ಲುಗಣಿಗಾರಿಕೆಗೆ ಅರಣ್ಯ ಭೂಮಿ ಪರಭಾರೆ ಆರೋಪದಾಖಲೆ ಇಲಾಖೆ ಜಂಟಿ ಸರ್ವೆ ನಡೆಸಿ ವರದಿ ನೀಡುವಂತೆ ಸೂಚಿಸಿದ್ದೇನೆ. ಪಹಣಿಯಲ್ಲಿ ಅರಣ್ಯ ಇಲಾಖೆ ಎಂದು ಬರೆದಿದೆ. ವರದಿ ಮಂಡಿಸಿದ ಬಳಿಕ ಪರಿಶೀಲಿಸಿ ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ.

    | ಡಾ. ಎಂ.ವಿ. ವೆಂಕಟೇಶ್ ಮಂಡ್ಯ ಡಿಸಿ

    ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಅರಕೆರೆ ಹೋಬಳಿಯ ಮುಂಡುಗದೊರೆ ಗ್ರಾಮದ ಸರ್ವೆ ಸಂಖ್ಯೆ 351ರಲ್ಲಿರುವ 464 ಎಕರೆ 14 ಗುಂಟೆ ಗೋಮಾಳ ಜಾಗ ಹಾಗೂ ಹಂಗರಹಳ್ಳಿ ಗ್ರಾಮದ 185 ಸರ್ವೆ ನಂಬರ್​ನಲ್ಲಿನ 318 ಎಕರೆ 25 ಗುಂಟೆ ಅರಣ್ಯ ಭೂಮಿ ಇದೆ. ಅಂದಾಜು 200 ಎಕರೆ ಜಾಗದಲ್ಲಿ ಈಗಾಗಲೇ ಕಲ್ಲುಕ್ವಾರಿ ಇದೆ. ಆ ಜಾಗವನ್ನು ಕಬಳಿಸಲು ಜಿಲ್ಲೆಯ 10 ರಿಂದ 12 ಪ್ರಭಾವಿ ವ್ಯಕ್ತಿಗಳು ದೊಡ್ಡಮಟ್ಟದಲ್ಲಿ ಲಾಬಿ ನಡೆಸುತ್ತಿದ್ದಾರೆ ಎಂದು ಗೊತ್ತಾಗಿದೆ.

    ಇದನ್ನೂ ಓದಿ: ತಳವಾರ, ಪರಿವಾರಕ್ಕೆ ಪರಿಶಿಷ್ಟ ಪಂಗಡ ಪ್ರಮಾಣಪತ್ರ ನೀಡಿ

    ರಾಷ್ಟ್ರೀಯ ಹಾಗೂ ರಾಜ್ಯ ಹೆದ್ದಾರಿ ರಸ್ತೆಗಳ ನಿರ್ಮಾಣ ಮಾಡುವುದಕ್ಕೆ ಅಥವಾ ಇನ್ನಾವುದೇ ಸರ್ಕಾರಿ ಯೋಜನೆಗಳಿಗೆ ಅರಣ್ಯ ಇಲಾಖೆಯ ಅಥವಾ ಸರ್ಕಾರಿ ಗೋಮಾಳ ಜಾಗ ಬಳಕೆ ಮಾಡಲು ಅವಕಾಶ ಇದೆ. ಆದರೆ, ಸರ್ಕಾರದ ನಿಯಮ ಉಲ್ಲಂಘಿಸಿ ಈ ಜಾಗವನ್ನು ಖುದ್ದು ಸರ್ಕಾರಿ ಅಧಿಕಾರಿಗಳೇ ಖಾಸಗಿ ವ್ಯಕ್ತಿಗಳಿಗೆ ಪರಭಾರೆ ಮಾಡಲು ಹೊರಟಿರುವ ಆರೋಪ ವ್ಯಕ್ತವಾಗಿದ್ದು, ಇದಕ್ಕೆ ಪೂರಕವಾಗಿ ಕೆಲ ಪ್ರಕ್ರಿಯೆಗಳು ಈಗಾಗಲೇ ಶುರುವಾಗಿವೆ.

    ಇದನ್ನೂ ಓದಿ: ಸರ್ಕಾರದ ವಿರುದ್ಧ ಡಿಕೆಶಿ ಆಕ್ರೋಶ ಹೋರಾಟ ನಡೆಸುವ ಎಚ್ಚರಿಕೆ

    ಎಕರೆಗೆ 10 ಲಕ್ಷ ಲಂಚದ ಆಮಿಷ: ಮೇ 31ಕ್ಕೆ ನಿವೃತ್ತಿಯಾಗುತ್ತಿರುವ ಅರಣ್ಯಾಧಿಕಾರಿಯೊಬ್ಬರು ಈ ಅರಣ್ಯ ಜಾಗವನ್ನು ಅಕ್ರಮವಾಗಿ ಪ್ರಭಾವಿಗಳಿಗೆ ಪರಭಾರೆ ಮಾಡಲು ಅಗತ್ಯ ಕೆಲಸಗಳನ್ನು ಮಾಡುತ್ತಿದ್ದಾರೆ. ಪ್ರತಿ ಎಕರೆಗೆ 5ರಿಂದ 10 ಲಕ್ಷ ರೂ.ನಂತೆ ಲಂಚ ಪಡೆದು 180 ಎಕರೆ ಜಾಗವನ್ನು ಜಿಲ್ಲೆಯ 10ರಿಂದ 12 ವ್ಯಕ್ತಿಗಳಿಗೆ ತಲಾ 20ರಿಂದ 25 ಎಕರೆ ಜಾಗ ನೀಡಲು ಹುನ್ನಾರ ನಡೆಸುತ್ತಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.

    ಇದನ್ನೂ ಓದಿ: ನಟಿಯರ ಹಸಿರು ಪ್ರೀತಿ: ಹಿತ್ತಲು, ತಾರಸಿಯಲ್ಲಿ ಫಲ-ಪುಷ್ಪಗಳ ಘಮ

    ಮೇಲಧಿಕಾರಿಗಳ ಸೂಚನೆಯಂತೆ ಆ ಜಾಗಕ್ಕೆ ಭೂ ದಾಖಲೆ ಇಲಾಖೆಯ ಸಹ ನಿರ್ದೇಶಕರು ತೆರಳಿ ಪರಿಶೀಲಿಸಿದ್ದಾರೆ. ಸರ್ವೆ ನಡೆಸುವಂತೆ ಜಿಲ್ಲಾ ಅರಣ್ಯಾಧಿಕಾರಿಯ ಪತ್ರದ ಮೇರೆಗೆ ಈ ಹಿಂದೆಯೂ ಜಂಟಿ ಸರ್ವೆ ಆಗಿತ್ತು. ಈ ಬಗ್ಗೆ ಪರಿಶೀಲಿಸಲಾಗುವುದು.

    | ಅಜ್ಜಪ್ಪ ಭೂಮಾಪನ ಇಲಾಖೆ ಉಪ ನಿರ್ದೇಶಕ

    ಡಿಎಫ್​ಒ ಹೇಳೋದೇನು?: ಜಿಲ್ಲಾಧಿಕಾರಿ ಆದೇಶದಂತೆ ಅರಣ್ಯ ಹಾಗೂ ಗೋಮಾಳ ಜಾಗವನ್ನು ಸರ್ವೆ ಮಾಡಲಾಗುತ್ತಿದೆ. ಪ್ರಕರಣ ಸಂಬಂಧ ಈವರೆಗೆ ಯಾವುದೇ ತೀರ್ಮಾನ ತೆಗೆದುಕೊಂಡಿಲ್ಲ. ಆರ್​ಎಫ್​ಒ ಮತ್ತು ತಹಸೀಲ್ದಾರ್ ಜಿಲ್ಲಾಮಟ್ಟಕ್ಕೆ ವರದಿ ಕೊಡುತ್ತಾರೆ. ಜಿಲ್ಲಾಧಿಕಾರಿ ಅಂತಿಮ ತೀರ್ಮಾನ ಮಾಡುತ್ತಾರೆ. ಅದಕ್ಕೂ ನಮಗೂ ಸಂಬಂಧವಿಲ್ಲ. ಸರ್ವೆ ಮಾಡಲು ನಮಗೆ ಅಧಿಕಾರ ಇಲ್ಲ. ರಾಷ್ಟ್ರೀಯ ಹೆದ್ದಾರಿಗೆ ಜಾಗ ನೀಡಲು ತೊಂದರೆಯಾಗದಂತೆ ಎನ್​ಒಸಿ ಕೊಡಲು ಸರ್ವೆ ಮಾಡಲಾಗುತ್ತಿದೆ. ಯಾವ ಪ್ರಭಾವಿ ವ್ಯಕ್ತಿಗಳು ನಮಗೆ ಗೊತ್ತಿಲ್ಲ. ನಿಮಗೆ ಎಲ್ಲ ಮಾಹಿತಿ ಇರುವುದರಿಂದ ಬೇಗ ಕೆಲಸ ಮುಗಿಸಿ ಎಂದು ಜಿಲ್ಲಾಧಿಕಾರಿ ಹೇಳಿದ್ದಾರೆ. ಅದರಂತೆ ಕೆಲಸ ಮಾಡುತ್ತಿದ್ದೇನೆ. ಸರ್ವೆ ಮಾಡಲು ಮುಂದಾಗಿರುವುದರಿಂದ ಕೆಲವರಿಗೆ ಅರಣ್ಯ ಭೂಮಿ ನೀಡಲು ಪ್ರಯತ್ನಿಸುತ್ತಿದ್ದಾರೆಂದು ತಪು್ಪ ತಿಳಿವಳಿಕೆ ಉಂಟಾಗಿರಬಹುದು ಎಂದು ಮಂಡ್ಯ ಜಿಲ್ಲೆ ಡಿಎಫ್​ಒ ಶಿವರಾಜು ಪ್ರತಿಕ್ರಿಯಿಸಿದ್ದಾರೆ.

    ಸತ್ತವ ಎದ್ದು ಬಂದ; ಮತ್ತೆ ಸತ್ತ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts