More

    ರಿಷಿಕೇಶದಲ್ಲಿ ಲಾಕ್​ಡೌನ್​ ಹೊರತಾಗಿಯೂ ವಿದೇಶಿಯರ ಸ್ವಚ್ಛಂದ ವಿಹಾರ, ಪೊಲೀಸರಿಂದ ಶಿಕ್ಷೆ

    ದೆಹ್ರಾಡೂನ್​: ಭಾರತದ ಪ್ರವಾಸಕ್ಕೆ ಬಂದಿರುವ ವಿದೇಶಿಗರಿಗೆ ಲಾಕ್​ಡೌನ್​ ಬಿಸಿ ತಟ್ಟಿದೆ. ಲಾಕ್​ಡೌನ್​ನಿಂದಾಗಿ ವಿಮಾನಗಳು ರದ್ದಾಗಿರುವುದರಿಂದ, ಇಲ್ಲಿ ಇರಲೂ ಆಗದೆ, ಸ್ವದೇಶಕ್ಕೆ ಹಿಂದಿರುಗಲೂ ಆಗದೆ ಪರದಾಡುತ್ತಿದ್ದಾರೆ. ಉತ್ತರಾಖಂಡದ ಪ್ರವಾಸದಲ್ಲಿರುವ 10 ವಿದೇಶಿಗರ ಪರಿಸ್ಥಿತಿಯೂ ಇದೇ ಆಗಿದೆ.

    ಹಾಗಾಗಿ ಇವರೆಲ್ಲರೂ ಲಾಕ್​ಡೌನ್​ ನಿಯಮ ಉಲ್ಲಂಘಿಸಿ, ರಿಷಿಕೇಶದಲ್ಲಿ ತಿರುಗಾಡಲು ಮುಂದಾಗಿದ್ದರು. ಗಂಗಾ ತಟದಲ್ಲಿ ವಿಹರಿಸುತ್ತಿದ್ದ ಇವರನ್ನು ಪೊಲೀಸರು ತಡೆದು ವಿಚಾರಣೆ ನಡೆಸಿದರು. ಬಳಿಕ ಇವರೆಲ್ಲರಿಗೂ ಐ ಡಿಡ್​ ನಾಟ್​ ಫಾಲೋ ಲಾಕ್​ಡೌನ್​, ಐ ಯಾಮ್​ ಸಾರಿ ಎಂದು 500 ಬಾರಿ ಬರೆಯುವ ಶಿಕ್ಷೆ ವಿಧಿಸಿದರು.

    ಲಾಕ್​ಡೌನ್​ ನಿಯಮ ಜಾರಿಯಲ್ಲಿದ್ದರೂ ಉತ್ತರಾಖಂಡದಲ್ಲಿ ಬೆಳಗ್ಗೆ 7ರಿಂದ ಮಧ್ಯಾಹ್ನ 1 ಗಂಟೆಯವರೆಗೆ ಅಗತ್ಯವಸ್ತುಗಳನ್ನು ಖರೀದಿಸಲು ಜನರಿಗೆ ಓಡಾಡಲು ಅವಕಾಶ ಮಾಡಿಕೊಡಲಾಗಿದೆ. ಹಾಗೆಂದು ಈ ಸಂದರ್ಭದಲ್ಲಿ ವಿನಾಕಾರಣ ಓಡಾಡುವುದನ್ನು ನಿರ್ಬಂಧಿಸಲಾಗಿದೆ.
    ಹೀಗಿದ್ದೂ ಅಮೆರಿಕ, ಆಸ್ಟ್ರೇಲಿಯಾ, ಮೆಕ್ಸಿಕೋ ಮತ್ತು ಇಸ್ರೇಲ್​ನಿಂದ ಭಾರತದ ಪ್ರವಾಸಕ್ಕೆ ಬಂದಿರುವ 10 ಜನರ ಗುಂಪು ರಿಷಿಕೇಶದ ಗಂಗಾ ತಟದಲ್ಲಿ ವಿಹಾರಕ್ಕೆ ತೆರಳಿತ್ತು. ಇದು ತಪ್ಪು ಎಂದು ರಿಷಿಕೇಶದ ತಪೋವನ ಪೊಲೀಸ್​ ಠಾಣೆಯ ಮೇಲ್ವಿಚಾರಕ ವಿನೋದ್​ ಶರ್ಮ ಹೇಳಿದರು.

    ಈ ಹಿನ್ನೆಲೆಯಲ್ಲಿ ಅವರೆಲ್ಲರಿಗೂ ಐ ಡಿಡ್​ ನಾಟ್​ ಫಾಲೋ ಲಾಕ್​ಡೌನ್​, ಐ ಯಾಮ್​ ಸಾರಿ ಎಂದು 500 ಸಾರಿ ಬರೆಯುವ ಶಿಕ್ಷೆ ನೀಡಿದ್ದಾಗಿ ತಿಳಿಸಿದರು.

    ಇದು ಕೋವಿಡ್​ 19 ಗೆದ್ದವರ ಕತೆ, ಕರೊನಾ ಸೋಂಕಿನ ಲಕ್ಷಣ ಇಲ್ಲವಾದರೂ ಲಾಕ್​ಡೌನ್​ ವೇಳೆ ಮನೆಯಲ್ಲೇ ಇರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts