More

    ಇದು ಕೋವಿಡ್​ 19 ಗೆದ್ದವರ ಕತೆ, ಕರೊನಾ ಸೋಂಕಿನ ಲಕ್ಷಣ ಇಲ್ಲವಾದರೂ ಲಾಕ್​ಡೌನ್​ ವೇಳೆ ಮನೆಯಲ್ಲೇ ಇರಿ

    ನವದೆಹಲಿ: ದೇಶದೆಲ್ಲೆಡೆ ಕರೋನಾ ಸೋಂಕಿತರ ಸಂಖ್ಯೆ 7 ಸಾವಿರ ದಾಟಿದೆ. 200ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ. ಆದರೆ ಇದರ ನಡುವೆ 515ಕ್ಕೂ ಹೆಚ್ಚು ಜನರು ಸೋಂಕಿಗೆ ಚಿಕಿತ್ಸೆ ಪಡೆದು ಗುಣಹೊಂದಿ ಮನೆಗೆ ಹಿಂದಿರುಗಿದ್ದಾರೆ. ಕ್ವಾರಂಟೈನ್​ನಲ್ಲಿ ಚಿಕಿತ್ಸೆ ಪಡೆಯುವಾಗಿ ಇವರೆಲ್ಲರ ಅನುಭವ ಹೇಗಿತ್ತು, ಹೇಗೆ ಸಕಾರಾತ್ಮಕ ಮನೋಭಾವ ಹೊಂದಿದ್ದರು ಎಂಬ ಬಗ್ಗೆ ಅವರಲ್ಲಿ ಕೆಲವರು ಮಾಹಿತಿ ನೀಡಿದ್ದಾರೆ. ಜತೆಗೆ, ಸೋಂಕು ತಗುಲದೇ ಆರೋಗ್ಯವಾಗಿರುವವರು ಏನೆಲ್ಲ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು ಎಂಬ ಬಗ್ಗೆಯೂ ತಿಳಿಸಿದ್ದಾರೆ.

    ಮೊನಾಮಿ ಬಿಸ್ವಾಸ್​, ಕೋಲ್ಕತಾದಲ್ಲಿ ಸೋಂಕಿಗೆ ತುತ್ತಾಗಿ ಚಿಕಿತ್ಸೆ ಪಡೆದುಕೊಂಡು ಗುಣಮುಖರಾಗಿದ್ದಾರೆ. ಇವರು ಸ್ಕಾಟ್ಲೆಂಡ್​ನ ಎಡಿನ್​ಬರೊ ವಿಶ್ವವಿದ್ಯಾಲಯದಲ್ಲಿ ನಿರ್ವಹಣಾಶಾಸ್ತ್ರದ ಸ್ನಾತಕೋತ್ತರ ಪದವಿ ವ್ಯಾಸಂಗ ಮಾಡುತ್ತಿದ್ದಾರೆ.
    ಮಾರ್ಚ್​ನಲ್ಲಿ ಇವರು ಭಾರತಕ್ಕೆ ಹಿಂದಿರುಗಿದ್ದರು. ಇವರಲ್ಲಿ ಕರೊನಾ ಸೋಂಕಿನ ಲಕ್ಷಣಗಳು ಕಾಣಿಸಿದ್ದರಿಂದ, ಕ್ವಾರಂಟೈನ್​ನಲ್ಲಿರಿಸಿ, ಚಿಕಿತ್ಸೆ ನೀಡಲಾಗುತ್ತಿತ್ತು. ಇವರಿಗೆ ಸೋಂಕು ತಗುಲಿರುವುದು ಖಚಿತಪಟ್ಟ ಮೇಲೆ ಚಿಕಿತ್ಸೆ ಆರಂಭಿಸಲಾಗಿತ್ತು. ಇದೀಗ ಅವರು ಚೇತರಿಸಿಕೊಂಡು, ಕೋಲ್ಕತಾದ ತಮ್ಮ ಮನೆಗೆ ಹಿಂದಿರುಗಿದ್ದಾರೆ.

    ಕ್ವಾರಂಟೈನ್​ನಲ್ಲಿದ್ದಾಗ ನಾನು ನೆಟ್​ಫ್ಲಿಕ್ಸ್​ನಲ್ಲಿ ಚಲನಚಿತ್ರಗಳನ್ನು ನೋಡುತ್ತಾ ಸಮಯ ಕಳೆಯುತ್ತಿದ್ದೆ. ವೈದ್ಯರು ಮತ್ತು ನರ್ಸ್​ಗಳು ಆಗಾಗ ಬಂದು ಔಷಧ ಕೊಟ್ಟು ಉಪಚರಿಸುತ್ತಿದ್ದರು. ಏಕಾಂಗಿತನದಿಂದ ಮೂಡುತ್ತಿದ್ದ ಖಿನ್ನತೆ ನಿವಾರಿಸಲು ಸಹಕರಿಸುತ್ತಿದ್ದರು ಎಂದು ಹೇಳಿದ್ದಾರೆ.
    ಅಲ್ಲದೆ, ಸೋಂಕು ತಗುಲಿದೆ ಎಂದ ಮಾತ್ರಕ್ಕೆ ಹೆದರುವ ಅವಶ್ಯಕತೆ ಇಲ್ಲ. ಸೂಕ್ತ ಚಿಕಿತ್ಸೆ ಪಡೆದು, ಗುಣಮುಖರಾಗಬಹುದು. ಆದರೆ ಸೋಂಕು ತಗುಲದಂತೆ ಎಲ್ಲ ಮುನ್ನೆಚ್ಚರಿಕೆ ಕ್ರಮ ಕೈಗೊಂಡು ಆರೋಗ್ಯವಾಗಿ ಉಳಿಯುವುದು ಒಳಿತು ಎಂದು ಸಲಹೆ ನೀಡಿದ್ದಾರೆ.

    ಸ್ಕಾಟ್ಲೆಂಡ್​ನಲ್ಲಿ ಕಂಪ್ಯೂಟರ್​ ಸೈನ್ಸ್​ನಲ್ಲಿ ಸ್ನಾತಕೋತ್ತರ ಪದವಿ ವ್ಯಾಸಂಗ ಮಾಡುತ್ತಿದ್ದ ಪಟನಾದ ರಾಹುಲ್​ ಕುಮಾರ್​ ಕೂಡ ಸ್ವದೇಶಕ್ಕೆ ಹಿಂದಿರುಗುತ್ತಲೇ ಕರೊನಾ ಸೋಂಕಿಗೆ ತುತ್ತಾಗಿರುವುದು ದೃಢಪಟ್ಟಿತ್ತು. ತಕ್ಷಣವೇ ಅವರಿಗೆ ಚಿಕಿತ್ಸೆ ಆರಂಭಿಸಲಾಗಿತ್ತು. ಇದೀಗ ಗುಣಮುಖರಾಗಿರುವ ಅವರು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ತುಂಬಾ ಅವಶ್ಯ. ಇದರಿಂದ ಸೋಂಕು ತಗುಲದಂತೆ, ಹರಡದಂತೆ ನೋಡಿಕೊಳ್ಳಬಹುದು ಎಂದು ಸಲಹೆ ನೀಡಿದ್ದಾರೆ.

    ಕರೊನಾ ಗೆದ್ದ ಮತ್ತೊಬ್ಬ ಸೋಂಕಿತ ರೋಹಿತ್​ ದತ್ತಾ, ನಿಮ್ಮಲ್ಲಿ ಸೋಂಕಿನ ಲಕ್ಷಣಗಳು ಇಲ್ಲವೆಂದಾದರೂ, ಆರೋಗ್ಯವಾಗಿದ್ದರೂ ಈ ವಾತಾವರಣದಲ್ಲಿ ಮನೆಯಿಂದ ಹೊರಬರದೆ ಒಳಗುಳಿಯುವುದು ಸುರಕ್ಷಿತ ಎಂದು ಸಲಹೆ ನೀಡಿದ್ದಾರೆ.

    ಸೂರತ್​ನ ರೀಟಾ ಬಚ್ಕಾನಿವಾಲಾ ಅವರಿಗೆ ಆರಂಭದಲ್ಲಿ ಒಣಕೆಮ್ಮು ಮತ್ತು ಜ್ವರ ಇತ್ತು. ಇದು ಫ್ಲೂನ ಲಕ್ಷಣ ಎನಿಸಿದರೂ ಅವರು ತಕ್ಷಣವೇ ಸರ್ಕಾರಿ ಆಸ್ಪತ್ರೆಗೆ ಹೋಗಿ, ಕರೊನಾ ಪರೀಕ್ಷೆಗೆ ಒಳಪಟ್ಟರು. ಸೋಂಕು ತಗುಲಿರುವುದು ಖಚಿತವಾಗುತ್ತಲೇ ಚಿಕಿತ್ಸೆ ಪಡೆದುಕೊಂಡು ಗುಣಮುಖರಾಗಿದ್ದಾರೆ. ಕರೋನಾದಂಥ ಲಕ್ಷಣಗಳು ಕಾಣಿಸಿದರೆ ತಕ್ಷಣವೇ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದುಕೊಳ್ಳಬೇಕು. ಇದರಿಂದ ಮನೆಯ ಇತರರಿಗೆ ಸೋಂಕು ಹರಡುವುದನ್ನು ತಡೆಗಟ್ಟಬಹುದು ಎಂದು ಹೇಳಿದ್ದಾರೆ.

    ಇಬ್ಬರ ಹೆಂಡಿರ ಮುದ್ದಿನ ಗಂಡನಿಗೆ ಲಾಕ್​ಡೌನ್​ ಪೇಚು, ಪತಿಯನ್ನು ಕರೆತರುವಂತೆ ಪೊಲೀಸರಿಗೆ ಫೋನಾಯಿಸಿದ ಹಿರಿಯ ಪತ್ನಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts