More

    ಎಟಿಎಂನಲ್ಲಿ ವಿದೇಶಿ ಮಹಿಳೆಯ ಚಮತ್ಕಾರ! ಖತರ್ನಾಕ್​ ಲೇಡಿಯ ಕೈ ಚಳಕ ನೋಡಿ ಶಾಕ್​ ಆದ ಬ್ಯಾಂಕ್​ ಸಿಬ್ಬಂದಿ

    ಬೆಂಗಳೂರು: ನಗರದ ಎಟಿಎಂನಿಂದ ಲಕ್ಷ ಲಕ್ಷ ಹಣ ಎಗರಿಸುತ್ತಿದ್ದ ಖತರ್ನಾಕ್ ವಿದೇಶಿ ಲೇಡಿಯನ್ನು ಪೊಲೀಸರು ಬಂಧಿಸಿದ್ದಾರೆ. ಅತಿ ಸಾಮಾನ್ಯಳಂತೆ ಎಟಿಎಂಗೆ ಹೋಗುತ್ತಿದ್ದ ಈಕೆ ಹಣ ಡ್ರಾ ಮಾಡುವ ನೆಪದಲ್ಲಿ ಲಕ್ಷಾಂತರ ರೂಪಾಯಿಯನ್ನು ದೋಚಿದ್ದು, ಮಹಿಳೆಯ ಕೈ ಚಳಕಕ್ಕೆ ಬ್ಯಾಂಕ್​ ಸಿಬ್ಬಂದಿಯೇ ದಂಗಾಗಿದ್ದಾರೆ.

    ಸ್ಪೈನಿಷ್ ದೇಶದ ಮಹಿಳೆ ಬಂಧಿತ ಆರೋಪಿ. ಈಕೆ ಸಂಪಿಗೆಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಶಿವರಾಂ ಕಾರಂತ ನಗರದಲ್ಲಿರೋ ಎಸ್​ಬಿಐ ಬ್ಯಾಂಕ್ ಎಟಿಎಂನಲ್ಲಿ ಹಣ ದೋಚಿದ್ದಾಳೆ. ಶಿವರಾಂ ಕಾರಂತ ನಗರ ಎಸ್​ಬಿಐ ಬ್ಯಾಂಕ್ ಬಳಿ ಎರಡು ಎಟಿಎಂಗಳಿದೆ. ಅದರಲ್ಲಿ ಒಂದು ಎಟಿಎಂ ಒಳಗೆ ಹೋದ ಈ ವಿದೇಶಿ ಮಹಿಳೆ ಅದರ ಬ್ಯಾಂಕ್ ಡಿವೈಸ್ ತೆಗೆದು ಬೇರೆ ಡಿವೈಸ್ ಸೆಟ್ ಮಾಡಿದ್ದಾಳೆ. ಯಾರಿಗೂ ಅನುಮಾನ ಬಾರದ ರೀತಿಯಲ್ಲಿ ತನ್ನ ಕೆಲಸವನ್ನು ಮುಗಿಸದ್ದಾಳೆ. ನಂತರ ಅದರಲ್ಲಿ 18 ಲಕ್ಷ ರೂಪಾಯಿಯನ್ನು ಎಗರಿಸಿಕೊಂಡು ಹೋಗಿದ್ದಾಳೆ.

    ಅದೇ ಎಟಿಎಂಗೆ ವ್ಯಕ್ತಿಯೊಬ್ಬ 1500 ರೂಪಾಯಿ ಡ್ರಾ ಮಾಡಲೆಂದು ಹೋಗಿದ್ದಾನೆ. ಆಗ ಅವನಿಗೆ 1500 ರೂಪಾಯಿಯ ಬದಲು 1 ಲಕ್ಷ ರೂಪಾಯಿ ಬಂದಿದೆ. ಅದನ್ನು ನೋಡಿ ಶಾಕ್​ ಆದ ವ್ಯಕ್ತಿ ಕೂಡಲೇ ಬ್ಯಾಂಕ್​ ಮ್ಯಾನೇಜರ್​ಗೆ ಮಾಹಿತಿ ನೀಡಿದ್ದಾನೆ. ಹೀಗಾಗಲು ಕಾರಣವೇನೆಂದು ಪರಿಶೀಲನೆ ನಡಸಿದಾಗ ಬ್ಯಾಂಕಿನ ಡಿವೈಸ್​ ಬದಲು ಬೇರೆ ಡಿವೈಸ್​ ಇರುವುದು ಗೊತ್ತಾಗಿದೆ. 18 ಲಕ್ಷ ರೂಪಾಯಿ ಮಾಯವಾಗಿರುವುದೂ ತಿಳಿದುಬಂದಿದೆ.

    ಸಿಸಿಟಿವಿ ಕ್ಯಾಮೆರಾ ದೃಶ್ಯಗಳನ್ನು ಪರಿಶೀಲನೆ ನಡೆಸಿದಾಗ ವಿದೇಶಿ ಮಹಿಳೆಯ ಚಲವಲನ ಪತ್ತೆಯಾಗಿದೆ. ಈ ಪ್ರಕರಣದ ಸಂಬಂಧ ಬ್ಯಾಂಕ್ ಮ್ಯಾನೇಜರ್ ಸಂಪಿಗೆಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಇದೀಗ ಮಹಿಳೆಯನ್ನು ಬಂಧಿಸಿ ವಿಚಾರಣೆ ಆರಂಭಿಸಲಾಗಿದೆ. ಮಹಿಳೆಯೊಂದಿಗೆ ಹಲವರು ಈ ಕೃತ್ಯದಲ್ಲಿ ಭಾಗಿಯಾಗಿರುವ ಶಂಕೆ ವ್ಯಕ್ತವಾಗಿದೆ. (ದಿಗ್ವಿಜಯ ನ್ಯೂಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts