More

    ವೈದ್ಯನಿಗೆ ಕರೊನಾ, ಜನರಲ್ಲಿ ಆತಂಕ

    ಐನಾಪುರ: ಮಹಾರಾಷ್ಟ್ರದ ಮಿರಜ್ ನಗರದ ಖಾಸಗಿ ವೈದ್ಯರೊಬ್ಬರಿಗೆ ಕರೊನಾ ಸೋಂಕು ದೃಢಪಟ್ಟಿದ್ದು, ರಾಜ್ಯದ ಗಡಿಭಾಗದಲ್ಲಿರುವ ವಿವಿಧ ಗ್ರಾಮಸ್ಥರಲ್ಲಿ ಆತಂಕ ಮೂಡಿದೆ. ವೈದ್ಯನಿಗೆ ಬುಧವಾರ ಜ್ವರ, ನೆಗಡಿ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಪರೀಕ್ಷೆಗೆ ಒಳಪಡಿಸಿದಾಗ ಕರೊನಾ ತಗುಲಿರುವುದು ಖಾತ್ರಿಯಾಗಿದೆ.

    ಕರೊನಾ ಸೋಂಕಿತ ವೈದ್ಯನ ಪತ್ನಿ, ಮಕ್ಕಳು, ಆಸ್ಪತ್ರೆಯ 30ಕ್ಕೂ ಹೆಚ್ಚು ಸಿಬ್ಬಂದಿ ಹಾಗೂ 20ಕ್ಕೂ ಹೆಚ್ಚು ರೋಗಿಗಳನ್ನು ಕ್ವಾರಂಟೈನ್‌ನಲ್ಲಿ ಇಡಲಾಗಿದೆ. ಆಸ್ಪತ್ರೆ ಸುತ್ತಲಿನ ಪ್ರದೇಶವನ್ನು ಸೀಲ್‌ಡೌನ್ ಮಾಡಲಾಗಿದೆ. ಗಡಿಭಾಗದಲ್ಲಿರುವ ರಾಜ್ಯದ ವಿವಿಧ ನಗರ, ಪಟ್ಟಣ, ಗ್ರಾಮಗಳ ಜನರು ಈ ವೈದ್ಯನ ಬಳಿ ಚಿಕಿತ್ಸೆ ಪಡೆಯುತ್ತಾರೆ. ಮಿರಜ್ ನಗರ ಆಸ್ಪತ್ರೆಗಳ ತಾಣವಾಗಿದ್ದು, ಕರ್ನಾಟಕದ ವಿವಿಧೆಡೆಯಿಂದ ಅಲ್ಲಿಗೆ ರೋಗಿಗಳು ಚಿಕಿತ್ಸೆಗಾಗಿ ಹೋಗುತ್ತಾರೆ.

    ಈಗ ಮಿರಜ್ ನಗರದ ಪ್ರಖ್ಯಾತ ವೈದ್ಯರಿಗೆ ಕರೊನಾ ಸೋಂಕು ತಗುಲಿರುವುದರಿಂದ ಕರ್ನಾಟಕ ಗಡಿಭಾಗದ ಜನರಿಗೂ ಆತಂಕ ಎದುರಾಗಿದೆ. ವೈದ್ಯನಿಗೆ ಕರೊನಾ ಸೋಂಕು ದೃಢಪಟ್ಟಿದ್ದು, ಸಂಪರ್ಕದ ಮೂಲ ಪತ್ತೆ ಹಚ್ಚಲು ಕ್ರಮ ಕೈಗೊಂಡಿದ್ದೇವೆ. ಸೋಂಕಿತರ ಸಂಪರ್ಕಕ್ಕೆ ಬಂದ ಎಲ್ಲರನ್ನೂ ಕ್ವಾರಂಟೈನ್ ಮಾಡಲಾಗುವುದು ಎಂದು ಸಾಂಗಲಿ ಜಿಲ್ಲಾಧಿಕಾರಿ ಅಭಿಜಿತ ಚೌಧರಿ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts