More

    ಶಾಲೆಗಳಿಗೆ ಮೂಲ ಸೌಲಭ್ಯಕ್ಕೆ ಪ್ರಯತ್ನ

    ಐಗಳಿ: ರೈತರ ಮಕ್ಕಳಿಗೆ ಒಳ್ಳೆಯ ಶಿಕ್ಷಣ ದೊರೆಯಬೇಕು. ಆ ನಿಟ್ಟಿನಲ್ಲಿ ಸರ್ಕಾರ ಗ್ರಾಮೀಣ ಭಾಗದಲ್ಲಿನ ತೋಟದ ವಸತಿ ಪ್ರದೇಶಗಳಲ್ಲಿಯೂ ಸರ್ಕಾರದ ವತಿಯಿಂದ ಶಾಲೆ ತೆರೆದು ಅಗತ್ಯ ಇರುವ ಮೂಲ ಸೌಲಭ್ಯ ನೀಡುತ್ತಿದೆ ಎಂದು ಶಾಸಕ ಮಹೇಶ ಕುಮಠಳ್ಳಿ ಹೇಳಿದ್ದಾರೆ.

    ಸ್ಥಳೀಯ ತೆಲಸಂಗದವರ ತೋಟದ ಶಾಲಾ ಕಟ್ಟಡ ನಿರ್ಮಾಣ ಕಾಮಗಾರಿಗೆ ಭಾನುವಾರ ಭೂಮಿ ಪೂಜೆ ನೆರವೇರಿಸಿ, ಕರೊನಾ ಸೇನಾನಿಗಳನ್ನು ಸತ್ಕರಿಸಿ ಮಾತನಾಡಿದ ಅವರು, ಶಾಲೆಗೆ ನಬಾರ್ಡ್ ಯೋಜನೆಯಡಿ ಎರಡು ಕೊಠಡಿಗಳು ಮಂಜೂರಾಗಿದ್ದು, ಕಟ್ಟಡ ಕಾಮಗಾರಿ ಉತ್ತಮವಾಗಿರಲಿ ಎಂದು ಗುತ್ತಿಗೆದಾರರಿಗೆ ಸೂಚಿಸಿದರು. ಶೈಕ್ಷಣಿಕ ವರ್ಷದಲ್ಲಿ ಕರೊನಾದಿಂದಾಗಿ ಹಿನ್ನೆಡೆ ಆಗುತ್ತಿದೆಯಾದರೂ ಸೋಂಕು ತಡೆಗಾಗಿ ದುಡಿಯುತ್ತಿರುವವರನ್ನು ಪ್ರೋತ್ಸಾಹಿಸೋಣ ಎಂದರು.

    ಜಗದೀಶ ಕೊರಬು, ತಹಸೀಲ್ದಾರ್ ದುಂಡಪ್ಪ ಕೊಮಾರ, ತಾಪಂ ಇಒ ರವೀಂದ್ರ ಬಂಗಾರೆಪ್ಪನವರ, ಪಿಎಸ್‌ಐ ಶಿವರಾಜ ನಾಯಕವಾಡಿ, ಪಿಡಿಒ ರಾಜೇಂದ್ರ ಪಾಠಕ್, ವೈದ್ಯಾಧಿಕಾರಿ ಪೂರ್ಣಿಮಾ ಅಂಕಲಗಿ, ಸಹಾಯಕಿ ರೇಣುಕಾ, ಕೃಷಿ ಅಧಿಕಾರಿ ವಾಲಿ, ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರನ್ನು ಸತ್ಕರಿಸಲಾಯಿತು. ಹನುಮಂತ ತೆಲಸಂಗ, ಬಸವರಾಜ ಬುಟಾಳೆ, ಸಿ.ಎಸ್. ನೇಮಗೌಡ, ಸಿ.ಎಚ್. ಪಾಟೀಲ, ತಾಪಂ ಸದಸ್ಯ ಯಲ್ಲಪ್ಪ ಮಿರ್ಜಿ, ಬಸವರಾಜ ಬಿರಾದಾರ, ಎ.ಎಸ್. ಪಾಟೀಲ, ಶ್ಯಾಮು ತೆಲಸಂಗ, ಶಂಕರಗೌಡ ಪೊಲೀಸ್‌ಪಾಟೀಲ, ಶಿವಾನಂದ ಶಿಂದೂರ, ಎಇಇ ಎಂ.ಜಿ.ಹಿರೇಮಠ, ಜೆಇ ಜಿ.ಎಂ.ಗೂಳಪ್ಪನವರ ಇದ್ದರು.ಕೆ.ಎಸ್. ಬಿರಾದಾರ ನಿರೂಪಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts