More

    ಪತ್ರಕರ್ತರಿಗೂ ವಿಮೆ ಸೌಲಭ್ಯ ನೀಡಿ

    ಬೆಳಗಾವಿ: ಸಾರ್ವಜನಿಕರಲ್ಲಿ ಜನ ಜಾಗೃತಿಗಾಗಿ ಮತ್ತು ಸರ್ಕಾರದ ವಿವಿಧ ಸೇವೆಗಳೊಂದಿಗೆ ನಿರಂತರ ಸೇವೆ ಸಲ್ಲಿಸುತ್ತಿರುವ ಪತ್ರಕರ್ತರಿಗೆ ವಿಮೆ ಹಾಗೂ ಮೃತಪಟ್ಟ ಪತ್ರಕರ್ತರ ಕುಟುಂಬಕ್ಕೆ 30 ಲಕ್ಷ ರೂ. ಪರಿಹಾರ ನೀಡುವಂತೆ ಆಗ್ರಹಿಸಿ ಬೆಳಗಾವಿ ಪತ್ರಕರ್ತರ ಸಂಘದ ನೇತೃತ್ವದಲ್ಲಿ ಪತ್ರಕರ್ತರು ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿಗೆ ಶುಕ್ರವಾರ ಮನವಿ ಸಲ್ಲಿಸಿದರು.

    ಕೋವಿಡ್-19 ಸಂದರ್ಭದಲ್ಲಿ ಜನ ಜಾಗೃತಿ ಹಾಗೂ ಸಾರ್ವಜನಿಕ ಆರೋಗ್ಯ ಕಾಪಾಡಿಕೊಳ್ಳುವಂತೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳೊಂದಿಗೆ ದೃಶ್ಯ ಹಾಗೂ ಮುದ್ರಣ ಮಾಧ್ಯಮ ಪ್ರತಿನಿಧಿಗಳು ತಮ್ಮ ಜೀವದ ಹಂಗು ತೊರೆದು ಶ್ರಮಿಸಿದ್ದಾರೆ. ಈ ಕಾರ್ಯದಲ್ಲಿ ತೊಡಗಿಕೊಂಡ ಕೆಲವು ಪತ್ರಕರ್ತರಿಗೆ ಕೊರೊನಾ ವೈರಸ್ ತಗುಲಿ ಮೃತಪಟ್ಟಿದ್ದಾರೆ. ಆದರೆ, ಮೃತರ ಕುಟುಂಬಕ್ಕೆ ಯಾವುದೇ ರೀತಿಯ ಸೌಲಭ್ಯಗಳು ಸಿಕ್ಕಿಲ್ಲ ಎಂದು ದೂರಿದರು. ಈಗಾಗಲೇ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕೋವ್ಯಾಕ್ಸಿನ್ ಲಸಿಕೆ ಶೀಘ್ರದಲ್ಲಿ ಬಿಡುಗಡೆಯಾಗಲಿದ್ದು, ಮೊದಲ ಹಂತದಲ್ಲಿ ಕರೊನಾ ಸೇನಾನಿಗಳಿಗೆ ಲಸಿಕೆ ನೀಡುವುದಾಗಿ ಹೇಳುತ್ತಿವೆ. ಅದರಲ್ಲಿ ಪತ್ರಕರ್ತರು ಹಾಗೂ ಅವರ ಕುಟುಂಬದ ಸದಸ್ಯರಿಗೂ ಪ್ರಥಮ ಆದ್ಯತೆ ಮೇರೆಗೆ ಕೋವ್ಯಾಕ್ಸಿನ್ ಲಸಿಕೆ ವಿತರಿಸಬೇಕು ಎಂದು ವಿನಂತಿಸಿದರು.

    ಬೆಳಗಾವಿ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀಶೈಲ ಮಠದ, ಪದಾಧಿಕಾರಿಗಳಾದ ಸುರೇಶ ನೇರ್ಲಿ, ಜಗದೀಶ ವಿರಕ್ತಮಠ, ಅರುಣ ಯಳ್ಳೂರಕರ, ಲಗಮಣ್ಣ ಸಣ್ಣಲಚ್ಚಪ್ಪಗೊಳ, ಸಹದೇವ ಮಾನೆ, ಮಹಾಂತೇಶ ಕುರಬೇಟ, ಅನಿಲ ಕಾಜಗಾರ, ಏಕನಾಥ ಅಗಸಿಮನಿ, ಅಡಿವೆಪ್ಪ ಪಾಟೀಲ, ಸುಬಾನಿ ಮುಲ್ಲಾ, ಸುನೀಲ ಗಾವಡೆ, ಗಂಗಾಧರ ಪಾಟೀಲ, ಅನಿಲ ಕಾಜಗಾರ, ಸೋಮು ಮಾಳಕನವರ ಮತ್ತಿತರರು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts