More

    ಮಕ್ಕಳಿಗೆ ಉನ್ನತ ಶಕ್ಷಣ ಕೋಡಿಸಿ

    ತಾವರಗೇರಾ: ಪೌರ ಕಾರ್ಮಿಕರು ಸರ್ಕಾರದ ಸೌಲಭ್ಯವನ್ನು ಪಡೆದುಕೊಂಡು ಮಕ್ಕಳಿಗೆ ಉನ್ನತ ಶಿಕ್ಷಣ ನೀಡಬೇಕು ಎಂದು ಪಪಂ ಸದಸ್ಯ ನಾರಾಯಣಗೌಡ ಮೆದಿಕೇರಿ ಹೇಳಿದರು.

    ಇದನ್ನೂ ಓದಿ: ತಂದೆಯಾದ 3 ತಿಂಗಳಿಗೆ ಗರ್ಲ್​​ಫ್ರೆಂಡ್​ನಿಂದ ದೂರವಾದ 83 ವರ್ಷದ ನಟ; ಮಗುವನ್ನು ಇಬ್ಬರ ಸುಪರ್ದಿಗೆ ನೀಡುವಂತೆ ಕೋರ್ಟ್​ ಮೊರೆ

    ಪಟ್ಟಣದ ಶ್ರೀಲಕ್ಷ್ಮೀ ವೆಂಕಟೇಶ್ವರ ಕಲ್ಯಾಣ ಮಂಟಪದಲ್ಲಿ ಪಟ್ಟಣ ಪಂಚಾಯತಿಯ ಸಿಬ್ಬಂದಿಯವರಿಂದ ಬುಧುವಾರ ಹಮ್ಮಿಕೊಂಡಿದ್ದ ಪೌರ ಕಾರ್ಮಿಕರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

    ಒಂದು ಹೊತ್ತು ಊಟ ಬಿಟ್ಟರೂ ಪರವಾಗಿಲ್ಲ ಮಕ್ಕಳಿಗೆ ಮತ್ತು ಮೊಮ್ಮಕ್ಕಳಿಗೆ ಉನ್ನತ ಶಿಕ್ಷಣ ನೀಡಿ, ಬರುವ ಸಂಬಳವನ್ನು ಉಳಿತಾಯ ಮಾಡಿ, ಮನೆ ಮತ್ತು ಕುಟುಂಬವನ್ನು ನಿರ್ವಹಣೆ ಮಾಡಿ.

    ಮಕ್ಕಳು ಉನ್ನತ ಅಧಿಕಾರಿಯಾಗಿ ಬರಬೇಕು. ನಿಮ್ಮ ಜೀವನ ಮಟ್ಟವನ್ನು ಸುಧಾಹರಣೆ ಮಾಡಿಕೊಳ್ಳಿ, ಆರೋಗ್ಯವನ್ನು ಕಾಪಾಡಿಕೊಳ್ಳಿ ಎಂದರು.
    ಪ.ಪಂ ಸದಸ್ಯೆ ಬೇಬಿ ರೇಖಾ ಉಪ್ಪಳ ಮಾತನಾಡಿ, ದೇಶ ಕಾಯುವ ಯೋಧರಂತೆ ಪೌರ ಕಾರ್ಮಿಕರು ಪಟ್ಟಣವನ್ನು ಸ್ವಚ್ಛವಾಗಿಡುವ ಮೂಲಕ ನಗರವನ್ನು ಸುಂದರ ತಾಣವನ್ನಾಗಿ ಮಾಡುತ್ತಾರೆ ಪೌರ ಕಾರ್ಮಿಕರ ಸೇವೆ ಶ್ಲಾಘನೀಯ ಎಂದರು.

    ಪಪಂ ಮುಖ್ಯಾಧಿಕಾರಿ ನಬಿಸಾಬ ಖುದನವರ್, ಪಪಂ ಸಿಬ್ಬಂದಿ ದೇವಪ್ಪ ಮುದೇನೂರು, ಸಿಬ್ಬಂದಿ ಪ್ರಹ್ಲಾದ್ ಜೋಶಿ, ಸದಸ್ಯರಾದ , ವೀರನಗೌಡ ಪಾಟೀಲ್, ಹಸೀನಾ ಬೇಗಂ , ಶುಕ್ರು ಅಹ್ಮದ್ ಬನ್ನು , ಶ್ಯಾಮೂರ್ತಿ ಕಟ್ಟಿಮನಿ, ಅಬ್ದುಲ್ ಖಾದರ್ ,ಹುಲ್ಲಪ್ಪ ಗಾಂಜಿ,

    ರಾಘವೇಂದ್ರ ಮಸ್ಕಿ, ಮರೇಶ, ಖಾಜಾ ಹುಸೇನ, ಶರಣಬಸವ ಸೈಂದರ್, ಪೌರ ಕಾರ್ಮಿಕರಾದ ಹನಮಂತ, ವಿರೇಶ, ಮಲ್ಲೇಶ , ಹನಮಂತ ಚಲುವಾದಿ, ಮರಿಯಪ್ಪ, ಗೋವಿಂದಪ್ಪ,ರಮೇಶ, ಮಾರುತಿ,ಪರುಶುರಾಮ, ಪ್ರಭು, ಮರಿಸ್ವಾಮಿ, ಅಮರೇಶ, ರಮೇಶ,

    ವೆಂಕಟೇಶ, ಶ್ಯಾಮಣ್ಣ, ಕಂಟೆಮ್ಮ, ಹನಮಂತ ಕುರಿ, ಬಸವರಾಜ, ದೊಡ್ಡಪ್ಪ, ಶ್ಯಾಮ್, ಮಮತಾಜಾ ಬೇಗಂ, ಲಕ್ಷ್ಮಮ್ಮ, ರಮಜಾನ್ ಬೇಗಂ, ರಾಜಮ್ಮ , ರಾಜೇಶ್ವರಿ, ರೇಣುಕಮ್ಮ ಇದ್ದರು.

    ವಿವಿಧ ಕ್ರೀಡೆಗಳಲ್ಲಿ ಪ್ರಥಮ, ದ್ವೀತಿಯ ಸ್ಥಾನ ಪಡೆದವರಿಗೆ ಸನ್ಮಾನಿಸಲಾಯಿತು. ನಂತರ ಪಪಂಯಿಂದ ಎಲ್ಲ ಪೌರ ಕಾರ್ಮಿಕರಿಗೆ ಸನ್ಮಾನಿಸಿ ಗೌರವಿಸಲಾಯಿತು.




    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts