More

    ಹೆಜ್ಜೆಗುರುತು: ಸ್ವಾತಂತ್ರ್ಯದ ಅಮೃತ ಮಹೋತ್ಸವ

    ಭಾರತಕ್ಕೆ ಸ್ವಾತಂತ್ರ್ಯ ದೊರೆತು 75 ವರ್ಷಗಳು ಪೂರ್ಣಗೊಂಡಿರುವ ಹಿನ್ನೆಲೆಯಲ್ಲಿ, ಸ್ವತಂತ್ರ ಭಾರತದ 75 ಪ್ರಮುಖ ಸಾಧನೆಗಳು ಹಾಗೂ ಘಟನೆಗಳನ್ನು ಈ ಸರಣಿಯಲ್ಲಿ ನೀಡಲಾಗಿದೆ.
    • 2001ರಲ್ಲಿ ಗೋಲ್ಡನ್ ಕ್ವಾಡ್ರಿಲ್ಯಾಟರಲ್ (ಸುವರ್ಣ ಚತುಷ್ಪಥ) ಯೋಜನೆಗೆ ಅಂದಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರಿಂದ ಚಾಲನೆ. ದೇಶದ ಪ್ರಮುಖ ನಗರಗಳಾದ ದೆಹಲಿ, ಮುಂಬೈ, ಚೆನ್ನೈ ಮತ್ತು ಕೋಲ್ಕತಾಗಳನ್ನು ಎಕ್ಸ್​ಪ್ರೆಸ್ ಹೆದ್ದಾರಿಗಳ ಮೂಲಕ ಜೋಡಿಸುವ ಅತಿದೊಡ್ಡ ರಸ್ತೆ ನಿರ್ಮಾಣ ಯೋಜನೆ.
    • 2007ರಲ್ಲಿ ಭಾರತದ ಪ್ರಥಮ ಮಹಿಳಾ ರಾಷ್ಟ್ರಪತಿಯಾಗಿ ಪ್ರತಿಭಾ ಪಾಟೀಲ ಆಯ್ಕೆ. 2007ರಿಂದ 2012ರವರೆಗೆ ಕಾರ್ಯನಿರ್ವಹಣೆ.
    • 2007ರ ಸೆಪ್ಟೆಂಬರ್ 24ರಂದು ಭಾರತದ ತಂಡ ಪ್ರಥಮ ಟಿ 20 ವಿಶ್ವಕಪ್ ಕ್ರಿಕೆಟ್​ನಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿತು. ಫೈನಲ್ ಪಂದ್ಯದಲ್ಲಿ ಪಾಕಿಸ್ತಾನವನ್ನು ಸೋಲಿಸಿತು.
    • 2008 ಅಕ್ಟೋಬರ್ 22ರಂದು ಚಂದ್ರಯಾನ ಯೋಜನೆಯಲ್ಲಿ ಇಸ್ರೋದಿಂದ ಚಂದ್ರಯಾನ 1 ಬಾಹ್ಯಾಕಾಶ ನೌಕೆ ಉಡಾವಣೆ. ವೊದಲ ಪ್ರಯತ್ನದಲ್ಲೇ ಚಂದ್ರನ ಕಕ್ಷೆಗೆ ಲೂನಾರ್ ವಾಹನವನ್ನು ಇಳಿಸಿದ ಕೀರ್ತಿ ಇಸ್ರೋಗೆ ಸಂದಿತು. ಚಂದ್ರನ ಅಂಗಳದಲ್ಲಿ ನೀರಿನ ಅಂಶವಿದೆಯೇ ಎಂಬುದರ ಅಧ್ಯಯನ ಈ ಯೋಜನೆಯ ಉದ್ದೇಶವಾಗಿತ್ತು.
    • 2011ರ ಏಪ್ರಿಲ್ 2ರಂದು ಶ್ರೀಲಂಕಾ ವಿರುದ್ಧ ಜಯಿಸಿ ಭಾರತವು ಎರಡನೇ ಬಾರಿಗೆ ಏಕದಿನ ಕ್ರಿಕೆಟ್ ಪಂದ್ಯದಲ್ಲಿ ವಿಶ್ವ ಚಾಂಪಿಯನ್ ಆಯಿತು.
    • 2014ರ ಜೂನ್ 8ರಂದು ಭಾರತದ ಮೊದಲ 1000 ಮೆಗಾವಾಟ್ ವಿದ್ಯುತ್ ಉತ್ಪಾದನಾ ಸಾಮರ್ಥ್ಯದ ಕೂಡಂಕೂಳಂ ಅಣುಶಕ್ತಿ ಕೇಂದ್ರ ಕಾರ್ಯಾರಂಭ ಮಾಡಿತು.
    • 2014ರ ಆಗಸ್ಟ್ 15ರಂದು, ಪ್ರತಿ ಮನೆಯಲ್ಲೂ ಕನಿಷ್ಠ ಒಂದು ಬ್ಯಾಂಕ್ ಖಾತೆ ಇರಬೇಕೆಂಬ ಉದ್ದೇಶದಿಂದ ‘ಪ್ರಧಾನಮಂತ್ರಿ ಜನ-ಧನ ಯೋಜನೆ’ಗೆ ಚಾಲನೆ ದೊರೆಯಿತು.
    • 2014ರ ಸೆಪ್ಟೆಂಬರ್​ನಲ್ಲಿ ಕಡಿಮೆ ವೆಚ್ಚದಲ್ಲಿ ಚೊಚ್ಚಲ ಪ್ರಯತ್ನದಲ್ಲಿ ಮಂಗಳನ ಕಕ್ಷೆಗೆ ಗಗನ ನೌಕೆಯೊಂದನ್ನು ಇಸ್ರೋ ಸೇರಿಸಿತು-ಮಾರ್ಸ್ ಆರ್ಬಿಟರ್ ಮಿಷನ್ (ಮಾಮ್. ಮೊದಲ ಪ್ರಯತ್ನದಲ್ಲೇ ಮಂಗಳನ ಅಂಗಳವನ್ನು ತಲುಪಿದ ಏಷ್ಯಾದ ಮೊದಲ ದೇಶ ಎಂಬ ಕೀರ್ತಿಗೆ ಭಾರತ ಭಾಜನವಾಯಿತು.
    • 2015ರ ಜನವರಿ 1ರಂದು ನೀತಿ ಆಯೋಗ ರಚನೆ. ಆರ್ಥಿಕ ಅಭಿವೃದ್ಧಿ ಪೋಷಣೆ ಹಾಗೂ ದೇಶದ ಆರ್ಥಿಕ ನೀತಿ ರಚನೆಯಲ್ಲಿ ರಾಜ್ಯಗಳ ಪಾಲ್ಗೊಳ್ಳುವಿಕೆ ಉದ್ದೇಶ.
    • 2016ರ ನವೆಂಬರ್ 8ರಂದು ಮಧ್ಯರಾತ್ರಿ 12 ಗಂಟೆಯಿಂದ ಜಾರಿಗೆ ಬರುವಂತೆ 1,000 ರೂ. ಮತ್ತು 500 ರೂ. ಮುಖಬೆಲೆಯ ನೋಟುಗಳು ಅಮಾನ್ಯಗೊಂಡವು. ಕಾಳಧನ, ಭಯೋತ್ಪಾದನೆ ತಡೆಗೆ ಕೇಂದ್ರ ಈ ಕ್ರಮ ತೆಗೆದುಕೊಂಡಿತು.
    • 2017ರ ಜುಲೈ 1ರಂದು ಜಿಎಸ್​ಟಿ (ಸರಕು ಮತ್ತು ಸೇವಾ ತೆರಿಗೆ) ಜಾರಿ. ಒಂದು ದೇಶ ಒಂದು ತೆರಿಗೆ ಮೂಲಕ ತೆರಿಗೆ ವ್ಯವಸ್ಥೆಯಲ್ಲಿ ಆಮೂಲಾಗ್ರ ಬದಲಾವಣೆ ಜಾರಿ.
    • 2017ರ ಫೆಬ್ರವರಿಯಲ್ಲಿ ಒಂದೇ ರಾಕೆಟ್​ನಲ್ಲಿ 104 ಉಪಗ್ರಹಗಳನ್ನು ಪಿಎಸ್​ಎಲ್​ವಿ ಸಿ37 ಮೂಲಕ ಹೊತ್ತೊಯ್ದು ಯಶಸ್ವಿಯಾಗಿ ಎಲ್ಲವನ್ನೂ ಕಕ್ಷೆಗೆ ಸೇರಿಸಿದ ಅಪರೂಪದ ದಾಖಲೆಯನ್ನು ಇಸ್ರೋ ಬರೆಯಿತು.
    • 2019ರ ಫೆಬ್ರುವರಿಯಲ್ಲಿ ಭಾರತದ ಪ್ರಥಮ ಸ್ವದೇಶಿ ನಿರ್ವಿುತ ಹಗುರ ಯುದ್ಧವಿಮಾನ ತೇಜಸ್ ಅನ್ನು ಭಾರತೀಯ ವಾಯುಪಡೆಗೆ ಸೇರ್ಪಡೆ ಮಾಡಿಕೊಳ್ಳಲು ಅಂತಿಮ ಒಪ್ಪಿಗೆ.
    • 2019ರ ಜುಲೈ 22ರಂದು ಚಂದ್ರಯಾನ 2 ಉಡಾವಣೆಯಾಯಿತು. ಚಂದ್ರನ ಮೇಲೆ ಅಂತರಿಕ್ಷ ನೌಕೆಯನ್ನು ಇಳಿಸಲು ಜಿಎಲ್​ಎಸ್​ಎಲ್ ಎಂಕೆ 3 ರಾಕೆಟ್ ಮೂಲಕ ಈ ಉಡಾವಣೆ ನಡೆಯಿತು.
    • 2019ರ ಆಗಸ್ಟ್ 6ರಂದು, ಸಂವಿಧಾನ 370ನೇ ವಿಧಿಯಡಿ ಜಮ್ಮು-ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನ ರದ್ದುಪಡಿಸಲಾಯಿತು. ಅಲ್ಲದೆ, ಜಮ್ಮು-ಕಾಶ್ಮೀರ ಹಾಗೂ ಲಡಾಖ್ ಎಂಬ ಎರಡು ಕೇಂದ್ರಾಡಳಿತ ಪ್ರದೇಶಗಳನ್ನಾಗಿ ರಾಜ್ಯವನ್ನು ವಿಭಜಿಸಲಾಯಿತು.
    • 2020ರಲ್ಲಿ ಭಾರತ ವಿಶ್ವದ ಐದನೇ ದೊಡ್ಡ ಆರ್ಥಿಕತೆಯಾಗಿ ಹೊರಹೊಮ್ಮಿತು (ಕರೊನಾ ಬರುವ ಮುಂಚೆ). ಫೆಬ್ರವರಿಯಲ್ಲಿ ಬಂದ ‘ವರ್ಲ್ಡ್ ಪಾಪ್ಯುಲೇಶನ್ ರಿವ್ಯೂ’ ವರದಿ ಪ್ರಕಾರ, ಬ್ರಿಟನ್ ಮತ್ತು ಫ್ರಾನ್ಸ್ ಅನ್ನು ಹಿಂದಿಕ್ಕಿ ಭಾರತದ ಜಿಡಿಪಿ 2.94 ಟ್ರಿಲಿಯನ್ ಡಾಲರ್​ಗೆ ತಲುಪಿತು.
    • 2020ರ ಮಾರ್ಚ್ 24ರಿಂದ 21 ದಿನಗಳ ಕಾಲ ಕೋವಿಡ್ ಸಾಂಕ್ರಾಮಿಕ ರೋಗ ವ್ಯಾಪಿಸಿದ ಹಿನ್ನೆಲೆಯಲ್ಲಿ ಲಾಕ್​ಡೌನ್ ಘೋಷಣೆ. ಕೇಂದ್ರ ಸರ್ಕಾರ ವಿವಿಧ ಹಂತಗಳಲ್ಲಿ ಒಟ್ಟು 20 ಲಕ್ಷ ಕೋಟಿ ರೂಪಾಯಿಗಳ ಪ್ಯಾಕೇಜ್ ಘೋಷಿಸಿತು.
    • 2022ರ ಜುಲೈ 18ರಂದು ರಾಷ್ಟ್ರಪತಿ ಚುನಾವಣೆಗೆ ಮತದಾನ. ಯಶವಂತ ಸಿನ್ಹಾ ವಿರುದ್ಧ ಜಯ ಗಳಿಸಿದ ದ್ರೌಪದಿ ಮುಮು ಜುಲೈ 25ರಂದು ಅಧಿಕಾರ ಸ್ವೀಕರಿಸಿದರು. ಈ ಉನ್ನತ ಸ್ಥಾನವೇರಿದ ಮೊದಲ ಬುಡಕಟ್ಟು ಮಹಿಳೆ ಎಂಬ ಹೆಗ್ಗಳಿಕೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts