More

    ಇವುಗಳನ್ನು ಸೇವಿಸಿದ್ರೆ ನಿಮ್ಮನ್ನು ಲವ್​ನಲ್ಲಿ ಬೀಳಿಸುವ, ಪ್ರೇರಣೆ, ಖುಷಿ ಕೊಡುವ ಡೋಪಮೈನ್ ಹಾರ್ಮೋನ್​ ಹೆಚ್ಚಾಗುತ್ತೆ​!

    ಡೋಪಮೈನ್ ಹಾರ್ಮೋನ್ ಮೂತ್ರಜನಕಾಂಗದ ಗ್ರಂಥಿಯಿಂದ ಉತ್ಪತ್ತಿಯಾಗುತ್ತದೆ. ಈ ಡೋಪಮೈನ್ ದೇಹದ ಚಲನೆಗಳು, ಸ್ಮರಣಶಕ್ತಿ, ಮತ್ತು ಮನಸ್ಥಿತಿಯನ್ನು ಸುಧಾರಿಸುವಲ್ಲಿ ಬಹಳ ಸಹಾಯಕವಾಗಿದೆ.

    ನಮ್ಮ ದೇಹದಲ್ಲಿ ಡೋಪಮೈನ್ ಬಿಡುಗಡೆಯು ನಮಗೆ ತುಂಬಾ ಸಂತೋಷ, ಪ್ರೇರಣೆ ಮತ್ತು ಉತ್ಸುಕತೆಯನ್ನು ನೀಡುತ್ತದೆ ಎಂದು ಸಂಶೋಧನೆ ತೋರಿಸಿದೆ. ಪ್ರೀತಿಯಲ್ಲಿ ಬೀಳಲು ಇದೇ ಡೋಪಮೈನ್ ಕಾರಣ ಎಂದು ತಜ್ಞರು ಹೇಳುತ್ತಾರೆ. ಈ ಡೋಪಮೈನ್​ ಕೊರತೆಯಾದಾಗ ನಮ್ಮಲ್ಲಿನ ಉತ್ಸಾಹವು ಕೂಡ ತಗ್ಗುತ್ತದೆ. ಕೆಲವೊಮ್ಮೆ ಖಿನ್ನತೆ ಮತ್ತು ಆತಂಕದಂತಹ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಆದರೆ, ಕೆಲವು ರೀತಿಯ ಆಹಾರ ಸೇವನೆಯಿಂದ ಈ ಡೋಪಮೈನ್ ಹಾರ್ಮೋನ್ ಹೆಚ್ಚಾಗಿ, ಮನಸ್ಥಿತಿ ಸುಧಾರಣೆಗೆ ನೆರವಾಗುತ್ತದೆ ಎನ್ನುತ್ತಾರೆ ಆರೋಗ್ಯ ತಜ್ಞರು. ಹಾಗಾದರೆ ಯಾವ ಆಹಾರಗಳು ಡೋಪಮೈನ್ ಹೆಚ್ಚಿಸಬಹುದು ಎಂಬುದನ್ನು ನಾವೀಗ ತಿಳಿಯೋಣ.

    ಕಾಫಿ: ತೀವ್ರ ತಲೆನೋವು ಬಂದಾಗ ಅನೇಕರು ಕಾಫಿ ಕುಡಿಯುತ್ತಾರೆ. ಇದನ್ನು ಸೇವಿಸುವ ಮೂಲಕ ಮನಸ್ಥಿತಿ ಸ್ವಲ್ಪಮಟ್ಟಿಗೆ ಸುಧಾರಿಸುತ್ತದೆ.

    ನಟ್ಸ್​: ಪ್ರತಿದಿನ ನಿಯಮಿತವಾಗಿ ನಟ್ಸ್ ಸೇವನೆ ಮಾಡುವುದರಿಂದ ದೇಹವನ್ನು ಆರೋಗ್ಯವಾಗಿ ಮತ್ತು ಸಂತೋಷವಾಗಿ ಇಡುತ್ತದೆ ಎನ್ನುತ್ತಾರೆ ಆರೋಗ್ಯ ತಜ್ಞರು. ಬೀಜಗಳು ಅಮೈನೋ ಆಮ್ಲಗಳಲ್ಲಿ ಸಮೃದ್ಧವಾಗಿವೆ. ಇದು ಡೋಪಮೈನ್ ಅನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಕಡಲೆಕಾಳು, ಕುಂಬಳಕಾಯಿ ಮತ್ತು ಎಳ್ಳು ತಿನ್ನುವುದರಿಂದ ನಿಮ್ಮನ್ನು ಸಂತೋಷವಾಗಿರಿಸುತ್ತದೆ.

    ಹಸಿ ತೆಂಗಿನಕಾಯಿ: ಹಸಿ ತೆಂಗಿನಕಾಯಿಯು ಟ್ರೈಗ್ಲಿಸರೈಡ್ ಮಟ್ಟವನ್ನು ಹೊಂದಿರುತ್ತದೆ. ಇವು ನಮ್ಮ ಮೆದುಳು ಮತ್ತು ದೇಹವನ್ನು ಸುಧಾರಿಸಲು ಸಹಾಯ ಮಾಡುತ್ತವೆ. ಒತ್ತಡವನ್ನು ನಿವಾರಿಸಲು ಸಹ ಉಪಯುಕ್ತವಾಗಿದೆ.

    ಅವಕಾಡೋ: ಆವಕಾಡೊ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇದರಲ್ಲಿರುವ ಕೋಲೀನ್ ಅಂಶ ಚಿತ್ತವನ್ನು ಹೆಚ್ಚಿಸುವ ಗುಣಗಳನ್ನು ಹೊಂದಿದೆ. ಇದು ಒತ್ತಡದ ಮಟ್ಟವನ್ನು ಸಹ ನಿಯಂತ್ರಿಸುತ್ತದೆ.

    ಬೆರ್ರೀಸ್​: ನೀವು ತೀವ್ರ ಒತ್ತಡದಲ್ಲಿರುವಾಗ ಬೆರ್ರಿ ಹಣ್ಣುಗಳನ್ನು ತಿನ್ನುವುದು ತುಂಬಾ ಒಳ್ಳೆಯದು ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ಬೆರ್ರಿಗಳು ಉತ್ಕರ್ಷಣ ನಿರೋಧಕಗಳು ಮತ್ತು ಫ್ಲೇವನಾಯ್ಡ್​ಗಳಲ್ಲಿ ಸಮೃದ್ಧವಾಗಿವೆ. ಇದು ಡೋಪಮೈನ್ ಹಾರ್ಮೋನ್ ಅನ್ನು ಹೆಚ್ಚಿಸುತ್ತದೆ.

    ಡಾರ್ಕ್​ ಚಾಕೋಲೆಟ್ಸ್​: ಒತ್ತಡದ ಸಮಯದಲ್ಲಿ ಡಾರ್ಕ್ ಚಾಕೊಲೇಟ್‌ಗಳು ತುಂಬಾ ಉಪಯುಕ್ತವಾಗಿವೆ. ಡಾರ್ಕ್ ಚಾಕೊಲೇಟ್‌ನಲ್ಲಿರುವ ಫೆನೈಲೆಥೈಲಮೈನ್ ಡೋಪಮೈನ್ ಬಿಡುಗಡೆ ಮಾಡಲು ಸಹಾಯ ಮಾಡುತ್ತದೆ.

    ಬಾಳೆಹಣ್ಣು: ಬಾಳೆಹಣ್ಣುಗಳನ್ನು ತಿನ್ನುವುದರಿಂದ ನ್ಯೂರೋಟ್ರಾನ್ಸ್​ಮೀಟರ್​ಗಳು ಡೋಪಮೈನ್ ಮತ್ತು ಸಿರೊಟೋನಿನ್ ಅನ್ನು ಬಿಡುಗಡೆ ಮಾಡಲು ಸಹಾಯ ಮಾಡುತ್ತದೆ. ಮೆದುಳು ಮತ್ತು ದೇಹವನ್ನು ಸಕ್ರಿಯವಾಗಿಡಲು ಇದನ್ನು ಬಳಸಲಾಗುತ್ತದೆ.

    ಡೈರಿ ಉತ್ಪನ್ನಗಳು: ಚೀಸ್, ಹಾಲು ಮತ್ತು ಮೊಸರು ತಿನ್ನುವುದು ಒತ್ತಡದ ಸಮಸ್ಯೆಗಳನ್ನು ಕಡಿಮೆ ಮಾಡುತ್ತದೆ. ಇವುಗಳನ್ನು ಸೇವಿಸುವುದರಿಂದ ಸಂತೋಷದ ಹಾರ್ಮೋನ್ ಬಿಡುಗಡೆಯಾಗುತ್ತದೆ.

    ಜಗತ್ತಿನ ಅತಿ ಎತ್ತರದ ಕಟ್ಟಡ ಬುರ್ಜ್​ ಖಲೀಫಾದಲ್ಲಿ ಶ್ರೀರಾಮನ ಫೋಟೋ ಪ್ರದರ್ಶನ! ಇಲ್ಲಿದೆ ಅಸಲಿ ಸಂಗತಿ…

    ರಾಮ ಮಂದಿರದಲ್ಲಿ ನಿತ್ಯ 6 ಹೋಮಗಳು: ಪೇಜಾವರ ಶ್ರೀ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts