More

  ಜಗತ್ತಿನ ಅತಿ ಎತ್ತರದ ಕಟ್ಟಡ ಬುರ್ಜ್​ ಖಲೀಫಾದಲ್ಲಿ ಶ್ರೀರಾಮನ ಫೋಟೋ ಪ್ರದರ್ಶನ! ಇಲ್ಲಿದೆ ಅಸಲಿ ಸಂಗತಿ…

  ನವದೆಹಲಿ: ಇಡೀ ದೇಶದ ಜನತೆ ಜನವರಿ 22ರ ಸೋಮವಾರದಂದು ಭಕ್ತಿಭಾವದಲ್ಲಿ ಮಿಂದೆದ್ದರು. ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ನಿರ್ಮಾಣವಾಗಿರುವ ಭವ್ಯವಾದ ಹೊಸ ರಾಮ ಮಂದಿರ ಉದ್ಘಾಟನೆ ಹಾಗೂ ಬಾಲರಾಮನ ಪ್ರಾಣ ಪ್ರತಿಷ್ಠಾ ಸಮಾರಂಭ ಬಹಳ ಅದ್ಧೂರಿಯಾಗಿ ನೆರವೇರಿತು. ಇಡೀ ಸಮಾರಂಭವು ಪ್ರಧಾನಿ ಮೋದಿ ನೇತೃತ್ವದಲ್ಲಿ ನಡೆಯಿತು.

  ಈ ಐತಿಹಾಸಿಕ ಕಾರ್ಯಕ್ರಮದ ಬಳಿಕ ಸುದ್ದಿಯೊಂದು ಹರಿದಾಡುತ್ತಿದೆ. ಅದೇನೆಂದರೆ ವಿಶ್ವದ ಅತ್ಯಂತ ಎತ್ತರದ ಕಟ್ಟಡ ದುಬೈನ ಬುರ್ಜ್​ ಖಲೀಫಾದಲ್ಲಿ ರಾಮನ ಚಿತ್ರವನ್ನು ಪ್ರದರ್ಶಿಲಾಗಿದೆ ಎಂಬ ಸುದ್ದಿ ಹರಿದಾಡುತ್ತಿದೆ. ಅಂದಹಾಗೆ ಬುರ್ಜ್​ ಖಲೀಫಾದಲ್ಲಿ ಸಿನಿಮಾ ಟ್ರೈಲರ್​ ಸೇರಿದಂತೆ ಪ್ರಮುಖ ಕ್ಷಣಗಳನ್ನು ಪ್ರದರ್ಶಿಸಲಾಗುತ್ತದೆ. ಭಾರತದ ಸ್ವಾತಂತ್ರ್ಯ ದಿನಕ್ಕೂ ದುಬೈ ಸರ್ಕಾರ ಶುಭಾಶಯಗಳನ್ನು ತಿಳಿಸುವುದು ಎಲ್ಲರಿಗೂ ತಿಳಿದಿದೆ. ನಟ ಕಿಚ್ಚ ಸುದೀಪ್​ ನಟನೆಯ ವಿಕ್ರಾಂತ್​ ರೋಣ ಟೀಸರ್​ ಅನ್ನು ಕೂಡ ಇದೇ ಬುರ್ಜ್​ ಖಲೀಫಾದಲ್ಲಿ ಪ್ರದರ್ಶನ ಮಾಡಲಾಗಿತ್ತು.

  ಮುಸ್ಲಿಂ ಪ್ರಧಾನ ದೇಶದಲ್ಲಿ ಶ್ರೀರಾಮನ ಚಿತ್ರವನ್ನು ಪ್ರದರ್ಶಿಸಲಾಗಿದೆ ಎಂಬ ಸುದ್ದಿ ಕಾಡ್ಗಿಚ್ಚಿನಂತೆ ಹರಿದಾಡಿದೆ. ಆದರೆ, ಇದು ಸುಳ್ಳು ಸುದ್ದಿ ಎಂಬುದು ಫ್ಯಾಕ್ಟ್​ಚೆಕ್​ನಿಂದ ಬೆಳಕಿಗೆ ಬಂದಿದೆ. ಬುರ್ಜ್​ ಖಲೀಫಾ ಮೇಲೆ ರಾಮನ ಪೋಟೋ ಬರುವಂತೆ ಡಿಜಿಟಲ್​ ಆಗಿ ಎಡಿಟ್​ ಮಾಡಿ ಜಾಲತಾಣದಲ್ಲಿ ಹರಿಬಿಡಲಾಗಿದೆ ಎಂಬ ಸಂಗತಿ ಬಯಲಾಗಿದೆ.

  ಬುರ್ಜ್ ಖಲೀಫಾದಲ್ಲಿ ಭಗವಾನ್ ರಾಮನ ಫೋಟೋ ಪ್ರದರ್ಶಿಸಿದ್ದಾರೆ ಎನ್ನುವುದಕ್ಕೆ ಯಾವುದೇ ಪುರಾವೆಗಳು ಕಂಡುಬಂದಿಲ್ಲ. ಸಾಮಾನ್ಯ ದಿನಗಳಲ್ಲಿ ಪ್ರದರ್ಶಿಸಲಾದ ಚಿತ್ರಗಳನ್ನು ತಪ್ಪದೇ ಹಂಚಿಕೊಳ್ಳುವ ಬುರ್ಜ್ ಖಲೀಫಾದ ಅಧಿಕೃತ ಪುಟವು ಶ್ರೀರಾಮನಿಗೆ ಸಂಬಂಧಿಸಿದ ಯಾವುದೇ ಪೋಸ್ಟ್‌ಗಳನ್ನು ಹಂಚಿಕೊಂಡಿಲ್ಲ. ಗೂಗಲ್​ ರಿವರ್ಸ್ ಇಮೇಜ್ ಸರ್ಚಿಂಗ್​ನಲ್ಲೂ ಈ ಚಿತ್ರದ ಬಗ್ಗೆ ಯಾವುದೇ ಮಾಹಿತಿ ಸಿಗಲಿಲ್ಲ. ಹೀಗಾಗಿ ಇದೊಂದು ನಕಲಿ ಫೋಟೋ ಎಂದು ಬಯಲಾಗಿದೆ. (ಏಜೆನ್ಸೀಸ್​)

  ಬಾಕ್ಸಿಂಗ್​ಗೆ ನಿವೃತ್ತಿ ಘೋಷಿಸಿದ ಸ್ಟಾರ್​ ಬಾಕ್ಸರ್​ ಮೇರಿ ಕೋಮ್!​

  ಇಂಡಿಯಾ ಮೈತ್ರಿಗೆ ಡಬಲ್ ಶಾಕ್; ಕೈಕೊಟ್ಟ ಮಮತಾ ಬ್ಯಾನರ್ಜಿ, ಸೀಟು ಹಂಚಿಕೆ ನಿರಾಕರಿಸಿದ ಎಎಪಿ

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts