More

    ಬಾಕ್ಸಿಂಗ್​ಗೆ ನಿವೃತ್ತಿ ಘೋಷಿಸಿದ ಸ್ಟಾರ್​ ಬಾಕ್ಸರ್​ ಮೇರಿ ಕೋಮ್!​

    ನವದೆಹಲಿ: ಐದು ಬಾರಿ ವಿಶ್ವ ಚಾಂಪಿಯನ್​ ಮತ್ತು 2012ರ ಒಲಿಂಪಿಕ್ಸ್​ ಪದಕ ವಿಜೇತೆ ಮಾಂಗ್ಟೆ ಚುಂಗ್ನೀಜಾಂಗ್ ಮೇರಿ ಕೋಮ್ ಬುಧವಾರ (ಜ.24) ಬಾಕ್ಸಿಂಗ್​ಗೆ ನಿವೃತ್ತಿ ಘೋಷಣೆ ಮಾಡಿದ್ದಾರೆ.

    ಇಂಟರ್ನ್ಯಾಷನಲ್ ಬಾಕ್ಸಿಂಗ್ ಅಸೋಸಿಯೇಷನ್ (IBA) ನಿಯಮಗಳ ಪ್ರಕಾರ ಪುರುಷ ಮತ್ತು ಮಹಿಳಾ ಬಾಕ್ಸರ್‌ಗಳು 40 ವರ್ಷದವರೆಗೆ ಮಾತ್ರ ಗಣ್ಯ ಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಲು ಅವಕಾಶ ನೀಡುತ್ತವೆ. ಸರ್ಧೆಯಲ್ಲಿ ಹೋರಾಡುವ ಹಸಿವು ಇನ್ನೂ ಇದೆ ಆದರೆ, ವಯೋಮಿತಿ ಕಾರಣ ವೃತ್ತಿ ಜೀವನಕ್ಕೆ ತೆರೆ ಎಳೆಯಬೇಕಿದೆ. ನಾನು ಒಲ್ಲದ ಮನಸ್ಸಿನಿಂದ ನನ್ನ ಬಾಕ್ಸಿಂಗ್​ ಗ್ಲೌಸ್​ ಅನ್ನು ಬಿಚ್ಚಿಡುತ್ತಿದ್ದೇನೆ ಎಂದು 41 ವರ್ಷದ ಮೇರಿ ಕೋಮ್​ ಹೇಳಿದರು.

    ಅಂದಹಾಗೆ ಬಾಕ್ಸಿಂಗ್ ಇತಿಹಾಸದಲ್ಲಿ ಆರು ವಿಶ್ವ ಪ್ರಶಸ್ತಿಗಳನ್ನು ಗೆದ್ದ ಮೊದಲ ಮಹಿಳಾ ಬಾಕ್ಸರ್ ಅಂದರೆ ಅದು ಮೇರಿ ಕೋಮ್​. ಐದು ಬಾರಿ ಏಷ್ಯನ್ ಚಾಂಪಿಯನ್ ಆಗಿರುವ ಅವರು 2014ರ ಏಷ್ಯನ್ ಗೇಮ್ಸ್‌ನಲ್ಲಿ ಚಿನ್ನದ ಪದಕವನ್ನು ಪಡೆದ ಭಾರತದ ಮೊದಲ ಮಹಿಳಾ ಬಾಕ್ಸರ್ ಎನಿಸಿಕೊಂಡಿದ್ದಾರೆ.

    2012ರಲ್ಲಿ ಲಂಡನ್​ನಲ್ಲಿ ನಡೆದ ಒಲಂಪಿಕ್ ಕ್ರೀಡಾಕೂಟದಲ್ಲಿ ಕಂಚಿನ ಪದಕವನ್ನು ಜಯಿಸಿದರು. 18ನೇ ವಯಸ್ಸಿನಲ್ಲಿ ಪೆನ್ಸಿಲ್ವೇನಿಯಾದ ಸ್ಕ್ರಂಟನ್‌ನಲ್ಲಿ ನಡೆದ ಉದ್ಘಾಟನಾ ವಿಶ್ವ ಕೂಟದಲ್ಲಿ ಮೇರಿ ಕೋಮ್​ ಅವರು ಮೊದಲ ಬಾರಿಗೆ ತಮ್ಮನ್ನು ಜಗತ್ತಿಗೆ ಪರಿಚಯಿಸಿಕೊಂಡರು. ಅಂದಿನಿಂದ ಸುದೀರ್ಘ 22 ವರ್ಷಗಳ ಕಾಲ ಬಾಕ್ಸಿಂಗ್​ ಲೋಕದಲ್ಲಿ ಸ್ಟಾರ್​ ಆಗಿ ಮೆರೆದಿದ್ದಾರೆ. (ಏಜೆನ್ಸೀಸ್​)

    ಸಾನಿಯಾ ಪಡೆದ ಜೀವನಾಂಶವೆಷ್ಟು? ಭಾರತೀಯ ಮಹಿಳೆಯ ತಾಕತ್ತು ಅಂದ್ರೆ ಇದು! ಮಲಿಕ್​ಗೆ ಮುಖಭಂಗ

    ಸಾನಿಯಾ ಮಿರ್ಜಾಗೆ 2ನೇ ಮದುವೆ! ಮುಂದೆ ಶೋಯಿಬ್​ ಮಲಿಕ್​ಗೆ ಕಾದಿದೆ ಭಾರಿ ಗಂಡಾಂತರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts