More

    ಮಹಿಳಾ ಬಾಕ್ಸರ್‌ನ ಹಣ ಕದ್ದು ನಾಪತ್ತೆಯಾದ ಪಾಕ್ ಆಟಗಾರ

    ನವದೆಹಲಿ: ಇಟಲಿಯ ಬೂಸ್ಟೋ ಅರ್ಸಿಜಿಯೊದಲ್ಲಿ ನಡೆಯುತ್ತಿರುವ ಮೊದಲ ವಿಶ್ವ ಒಲಿಂಪಿಕ್ಸ್ ಅರ್ಹತಾ ಬಾಕ್ಸಿಂಗ್ ಕೂಟದಲ್ಲಿ ಪಾಕಿಸ್ತಾನದ ಬಾಕ್ಸರ್ ತನ್ನದೇ ದೇಶದ ಮಹಿಳಾ ಬಾಕ್ಸರ್‌ನ ಬ್ಯಾಗ್‌ನಿಂದ ಹಣ ಕದ್ದು ಪರಾರಿಯಾಗಿದ್ದಾನೆ. ಪಾಕಿಸ್ತಾನ ಅಮೆಚೂರ್ ಬಾಕ್ಸಿಂಗ್ ಫೆಡರೇಷನ್ ಪೊಲೀಸರಿಗೆ ಮಾಹಿತಿ ನೀಡಿದ್ದು, ಆರೋಪಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

    ಅರ್ಹತಾ ಟೂರ್ನಿಯಲ್ಲಿ ಪಾಕ್‌ನಿಂದ ತೆರಳಿದ್ದ ಐವರು ಆಟಗಾರರ ತಂಡದಲ್ಲಿದ್ದ ಜೊಹೈಬ್ ರಶೀದ್, ಮಹಿಳಾ ಬಾಕ್ಸರ್ ಲಾರಾ ಇಕ್ರಮ್ ತರಬೇತಿಗಾಗಿ ಹೋಟೆಲ್‌ನಿಂದ ಕೊಠಡಿಯಿಂದ ಹೊರಗೆ ಹೋದಾಗ, ಕೋಣೆಯಲ್ಲಿದ್ದ ಮಹಿಳಾ ಬಾಕ್ಸರ್‌ನ ಪರ್ಸ್‌ನಲ್ಲಿದ್ದ ವಿದೇಶಿ ನೋಟುಗಳನ್ನು ಕದ್ದು ಪರಾರಿಯಾಗಿದ್ದಾರೆ. ಜೊಹೈಬ್ ಕಳೆದ ವರ್ಷದ ಏಷ್ಯನ್ ಬಾಕ್ಸಿಂಗ್ ಚಾಂಪಿಯನ್‌ಷಿಪ್‌ನಲ್ಲಿ ಕಂಚಿನ ಪದಕ ಗೆದ್ದಿದ್ದರು. ಜೊಹೈಬ್ ನಡೆದುಕೊಂಡ ರೀತಿ ಫೆಡರೇಷನ್‌ಮತ್ತು ದೇಶಕ್ಕೆ ಅತ್ಯಂತ ಮುಜುಗರ ತಂದಿದೆ ಎಂದು ರಾಷ್ಟ್ರೀಯ ಫೆಡರೇಷನ್ ಕಾರ್ಯದರ್ಶಿ ಕರ್ನಲ್ ನಾಸಿರ್ ಅಹ್ಮದ್ ಹೇಳಿದ್ದಾರೆ. ಘಟನೆಯ ಕುರಿತು ಇಟಲಿಯಲ್ಲಿರುವ ಪಾಕಿಸ್ತಾನ ರಾಯಭಾರ ಕಚೇರಿಯ ಗಮನಕ್ಕೆ ತಂದಿದ್ದು, ಪೊಲೀಸ್ ವರದಿ ಸಹ ಸಲ್ಲಿಸಲಾಗಿದೆ.

    ತಲೆಗೆ ಪೆಟ್ಟು ಬಿದ್ದು ಜೂಡೋ ಪಟು ಮೃತ: ನವದೆಹಲಿ: ಪಾಕಿಸ್ತಾನದ ಖೈಬರ್ ಪಖ್ತುಂಖ್ವಾ ಪ್ರಾಂತ್ಯದಲ್ಲಿ ಆಯೋಜಿಸಿದ್ದ ಜೂಡೋ ಸ್ಫರ್ದೆಯಲ್ಲಿ ತಲೆಗೆ ಪೆಟ್ಟಾಗಿ ಯುವ ಜೂಡೋ ಪಟು ಮೃತಪಟ್ಟಿದ್ದಾರೆ. ಮರ್ದಾನ್‌ನಲ್ಲಿ ನಡೆದ ಯೂತ್ ಟ್ಯಾಲೆಂಟ್ ಹಂಟ್‌ನ 44 ಕೆಜಿ ವಿಭಾಗದಲ್ಲಿ ಸ್ಪರ್ಧಿಸಿದ್ದ 20 ವರ್ಷದ ಫಿಜಾ ಶೇರ್ ಅಲಿ ಮೃತೆ. ಪಂದ್ಯದ ಸಮಯದಲ್ಲಿ ತೆಲೆಗೆ ಪೆಟ್ಟು ಬಿದ್ದಾಗ ತಕ್ಷಣವೇ ನೆಲಕ್ಕೆ ಉರುಳಿ ಬಿದ್ದ ಫಿಜಾ ಚೇತರಿಸಿಕೊಳ್ಳಲಿಲ್ಲ. ಸ್ಥಳದಲ್ಲಿ ವೈದ್ಯಕೀಯ ಚಿಕಿತ್ಸೆ ನೀಡಿ, ಆಸ್ಪತ್ರೆಗೆ ಕರೆದೊಯ್ಯದ್ದರು ಆಕೆ ಬದುಕುಳಿಯಲಿಲ್ಲ ಎಂದು ಪಾಕಿಸ್ತಾನ ಜೂಡೋ ಫೆಡರೇಷನ್‌ನ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಕೆಲವು ದಿನಗಳ ಹಿಂದೆ, ಇಸ್ಲಾಮಾಬಾದ್‌ನಲ್ಲಿ ನಡೆದ ಐಟಿಎಫ್ ಜೂನಿಯರ್ ಟೂರ್ನಿಯಲ್ಲಿ
    16 ವರ್ಷದ ಮಹಿಳಾ ಟೆನಿಸ್ ಆಟಗಾರ್ತಿ ಸಾವನ್ನಪ್ಪಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts