More

    ಮೂಲವ್ಯಾಧಿಗೆ ಆಹಾರವೇ ಮೊದಲ ಚಿಕಿತ್ಸೆ!

    daಮೂಲವ್ಯಾಧಿಯಲ್ಲಿ ನಾಲ್ಕು ವಿಧಗಳು ದೋಷಗಳಿಗೆ ನೇರವಾಗಿ ಸಂಬಂಧಿಸಿದ್ದು, ಐದನೆಯದು ರಕ್ತಧಾತುವಿನಲ್ಲಾಗುವ ಬದಲಾವಣೆಯೊಂದಿಗೆ ಕೂಡಿಕೊಂಡಿದೆ.

    ರಕ್ತಜ ಮೂಲವ್ಯಾಧಿ: ದೂಷಿತಗೊಂಡ ರಕ್ತಧಾತುವಿನಿಂದಾಗಿ ಪಿತ್ತಜ ಮೂಲವ್ಯಾಧಿಯ ಲಕ್ಷಣಗಳುಳ್ಳ ಮೊಳಕೆಯು ಗುದಭಾಗದಲ್ಲಿ ಕಾಣಿಸಿಕೊಳ್ಳುತ್ತದೆ. ಇದರ ಜೊತೆಯಲ್ಲಿ ಆಲದ ಮರದ ಚಿಗುರನ್ನು, ಗುಲಗಂಜಿ, ಹವಳದಂತಿರುವ ಕಪ್ಪೆಯ ಚರ್ಮದ ಬಣ್ಣವನ್ನು ಹೋಲುವ ಅಂಕುರವು ಉದ್ಭವವಾಗುತ್ತದೆ. ಅತಿಯಾದ ಉಷ್ಣತೆ ಹಾಗೂ ಗಟ್ಟಿಯಾಗಿರುವ ಮಲವು ಈ ಮೊಳಕೆಯನ್ನು ಅದುಮಿ ಅತಿಯಾಗಿ ರಕ್ತಸ್ರಾವ ಉಂಟುಮಾಡುವುದು ಇದರ ಪ್ರಮುಖ ಲಕ್ಷಣ. ನೋವಿನಿಂದ ಕೂಡಿದ ರಕ್ತಸ್ರಾವದಿಂದಾಗಿ ರಕ್ತಹೀನತೆ ಉಂಟಾಗುತ್ತದೆ. ದೇಹವು ಪೇಲವವಾಗಿ ಬಲಕ್ಷಯ, ಉತ್ಸಾಹ ಇಲ್ಲದಿರುವುದು, ಓಜಸ್ ಕ್ಷಯವಾಗಿ ರೋಗನಿರೋಧಕ ಶಕ್ತಿಯು ಹಾನಿಗೊಳಗಾಗುತ್ತದೆ. ಇಂದ್ರಿಯಗಳು ಕಾರ್ಯಕ್ಷಮತೆಯನ್ನು ಕಳೆದುಕೊಳ್ಳುತ್ತವೆ. ‘ಮಾಧವ ನಿದಾನ’ ಗ್ರಂಥದಲ್ಲಿ ಈ ವಿವರಣೆಗಳು ಸಿಗುತ್ತವೆ. ಮಲವು ಕಪ್ಪಾಗಿ, ಒಣಗಿದಂತೆಯೂ ಇರುವುದಿದ್ದು ತಡೆಯಲ್ಪಟ್ಟ ಅನುಭವ ಆಗುವುದೂ ಇದೆ ಎಂಬುದಾಗಿ ಯೋಗರತ್ನಾಕರ ಗ್ರಂಥದಲ್ಲಿ ಹೇಳಲಾಗಿದೆ. ನೊರೆಯಿಂದ ಕೂಡಿದ ತೆಳುವಾದ ರಕ್ತಸ್ರಾವವಾಗಿ ಸೊಂಟ, ತೊಡೆ ಹಾಗೂ ಗುದ ಪ್ರದೇಶದಲ್ಲಿ ನೋವು ಉಂಟಾಗಿ ಸುಸ್ತಾಗುತ್ತದೆ. ದೂಷಿತ ರಕ್ತದ ಜೊತೆ ವಾತವೂ ಸೇರಿಕೊಂಡಾಗ ಹೀಗಾಗುತ್ತದೆ ಎಂಬುದಾಗಿ ಚರಕ ಸಂಹಿತೆಯಲ್ಲಿದೆ. ರಕ್ತಜ ಮೂಲವ್ಯಾಧಿಯೊಂದಿಗೆ ಕಫವೂ ಉಲ್ಬಣಗೊಂಡರೆ ಮಲವು ಸಡಿಲವಾಗಿ, ಬಿಳಿ-ಹಳದಿ ಜಿಡ್ಡಿನಿಂದ ಕೂಡಿದ್ದು ಭಾರವಾಗಿ ತಣ್ಣಗಿರುತ್ತದೆ. ದಾರದಂತೆ ಅಂಟುಗುಣದ ತಿಳಿಗೆಂಪು ರಕ್ತಸ್ರಾವ ಆಗುತ್ತಿರುತ್ತದೆ. ಅತಿಯಾದ ಜಿಡ್ಡು ಆಹಾರ ಹಾಗೂ ಜೀರ್ಣಕ್ಕೆ ಕಷ್ಟಕರವಾದ ಆಹಾರವನ್ನು ಸೇವಿಸುವುದರಿಂದ ಗುದಭಾಗವು ಲೋಳೆ ಹಾಗೂ ತೇವಯುಕ್ತ ಆಗಿರುತ್ತದೆ.

    ವಾತಜ, ಪಿತ್ತಜ ಮೂಲವ್ಯಾಧಿ ಮೊದಲಾದವುಗಳಲ್ಲಿ ಒಂದೇ ದೋಷದಿಂದಾಗಿ ಬರುವವುಗಳನ್ನು ಅಥವಾ ಕಾಯಿಲೆ ಆರಂಭವಾಗಿ ಹೆಚ್ಚು ಸಮಯ ಆಗಿಲ್ಲದೆ ಇದ್ದಲ್ಲಿ ಅಥವಾ ಗುದದ ಹೊರಭಾಗದಲ್ಲಿ ಮೊಳಕೆ ಉಂಟಾಗಿದ್ದರೆ ಅವುಗಳನ್ನೆಲ್ಲಾ ಆಯುರ್ವೆದದ ಔಷಧೋಪಚಾರಗಳಿಂದ ಸುಲಭವಾಗಿ ಗುಣಪಡಿಸಬಹುದು. ಅನೇಕ ದೋಷಗಳು ಸೇರಿಕೊಂಡು ದೇಹದಲ್ಲಿ ಉಪದ್ರವಗಳನ್ನು ಮಾಡುತ್ತಿದ್ದು ಲಕ್ಷಣಗಳೆಲ್ಲಾ ಹೆಚ್ಚಾಗುತ್ತಾ ಹೋಗುತ್ತಿದ್ದಲ್ಲಿ ಗುಣಪಡಿಸುವುದು ಅಸಾಧ್ಯವಾಗುತ್ತದೆ. ಮೂಲವ್ಯಾಧಿಯ ಚಿಕಿತ್ಸೆಯಲ್ಲಿ ಆಹಾರ ಕ್ರಮವನ್ನು ಸರಿಪಡಿಸುವುದೇ ಹೆಚ್ಚು ಮಹತ್ವಪೂರ್ಣವೆನಿಸುತ್ತದೆ. ಜೀರ್ಣಪ್ರಕ್ರಿಯೆ ಸರಿಯಿದ್ದರೆ ಈ ಕಾಯಿಲೆ ಸಾಮಾನ್ಯವಾಗಿ ಹುಟ್ಟಿಕೊಳುವುದಿಲ್ಲ. ಹಾಗಾಗಿ ಆಹಾರವನ್ನು ಸರಿಮಾಡಿಕೊಂಡು ಪಚನಶಕ್ತಿಯನ್ನು ಉತ್ತಮವಾಗಿಟ್ಟುಕೊಳ್ಳುವುದು ಅನಿವಾರ್ಯ. ಭೋಜನದಲ್ಲಿ ತರಕಾರಿಯನ್ನು ಹೆಚ್ಚಾಗಿ ಬಳಸುವುದು ಹಿತಕರವಾಗಿದೆ. ಅದರಲ್ಲೂ ಹಸಿ ತರಕಾರಿಗಿಂತ ಬೇಯಿಸಿದ ತರಕಾರಿಯ ಬಳಕೆ ತುಂಬಾ ಪ್ರಯೋಜನಕಾರಿ. ಅನೇಕ ಜನರು ಉತ್ತರ ಭಾರತದ ಆಹಾರವಾಗಿರುವ ಗೋಧಿ, ಚಪಾತಿ, ರೋಟಿ ಮುಂತಾದವುಗಳನ್ನು ಉಪಯೋಗಿಸುವುದಿದೆ. ದಕ್ಷಿಣ ಭಾರತೀಯರಿಗೆ ಕುಟುಂಬದಲ್ಲಿ ಹಲವಾರು ತಲೆಮಾರುಗಳಿಂದ ಬಂದಂತಹ ಸಾಂಪ್ರದಾಯಿಕ ಆಹಾರವೇ ಸೂಕ್ತ. ಉತ್ತರ ಭಾರತೀಯರಿಗೆ ಅವರ ಆಹಾರವಾದ ಗೋಧಿ ಅಷ್ಟೇನೂ ತೊಂದರೆ ಉಂಟುಮಾಡುವುದಿಲ್ಲ. ದಕ್ಷಿಣ ಭಾರತೀಯರಿಗೆ ಅನ್ನವೇ ಪ್ರಶಸ್ತ. ದೇಹಕ್ಕೆ ತಂಪುಂಟು ಮಾಡುವ ರಾಗಿ, ಜೋಳಗಳೂ ಹಿತವಾಗಿರುತ್ತವೆ. ನವಣೆ ಮುಂತಾದ ಸಿರಿಧಾನ್ಯಗಳು ದೇಹದಲ್ಲಿ ಒಣತ್ವ ಹಾಗೂ ಉಷ್ಣತ್ವವನ್ನು ಉಂಟುಮಾಡುವುದರಿಂದ ಅದನ್ನು ತಲೆಮಾರುಗಳಿಂದ ಬಳಸದಿರುವ ಕುಟುಂಬಿಕರಿಗೆ ಒಳ್ಳೆಯದಲ್ಲ.

    ಮೂಲವ್ಯಾಧಿ ಪೀಡಿತರು ಮಾಡುವ ದೊಡ್ಡ ತಪ್ಪೆಂದರೆ ಮಲವಿಸರ್ಜನೆಗೆ ಹೋಗಲು ಹೆದರಿ ಆಹಾರದ ಪ್ರಮಾಣವನ್ನೇ ಕಡಿಮೆ ಮಾಡಿಬಿಡುವುದು! ಆಹಾರದ ಪ್ರಮಾಣ ಚೆನ್ನಾಗಿದ್ದರೆ ಗುದದ್ವಾರದಲ್ಲಿ ಮಲ ಹಾಗೂ ಮಾಂಸಪೇಶಿಗಳ ನಡುವಿನ ತಿಕ್ಕಾಟ ಕಡಿಮೆಯಾಗಿ ರೋಗವು ಬೇಗನೆ ಗುಣವಾಗಲು ಸಹಕರಿಸುತ್ತದೆ. ಆದುದರಿಂದ ಒಳ್ಳೆಯ ಪ್ರಮಾಣದಲ್ಲಿ ಆಹಾರ ಸೇವಿಸುವುದು ಬಹುಮುಖ್ಯವಾಗುತ್ತದೆ. ಅತಿ ಹೆಚ್ಚಿನ ಪ್ರಮಾಣದಲ್ಲಿ ನೀರಿನ ಸೇವನೆಯೂ ಒಳ್ಳೆಯದಲ್ಲ! ಹೆಚ್ಚು ನೀರು ಕುಡಿದರೆ ಉಳಿದ ಘನ ಪದಾರ್ಥಗಳ ಸೇವನೆ ಕಡಿಮೆಯಾಗುವುದರಿಂದ ಅದೂ ಋಣಾತ್ಮಕ ಪರಿಣಾಮ ಬೀರುತ್ತದೆ. ಮಧ್ಯಮ ಪ್ರಮಾಣದಲ್ಲಿ ಸುಮಾರು ಎರಡು ಲೀಟರ್​ನಷ್ಟು ನೀರನ್ನು ದಿನದಲ್ಲಿ ಕುಡಿಯುವುದು ಲಾಭದಾಯಕ. ಪ್ರತಿನಿತ್ಯ ಒಂದೆರಡು ಲೋಟ ಹಾಲಿನ ಸೇವನೆಯೂ ಮಲವಿಸರ್ಜನೆಯನ್ನು ಸಲೀಸಾಗಿಸುತ್ತದೆ. ಬಾಳೆಹಣ್ಣು, ಮೂಸಂಬಿ, ಕರಬೂಜ ಮೊದಲಾದ ಹಣ್ಣುಗಳ ಸೇವನೆಯೂ ಸಹಕಾರಿ. ಸೇಬುಹಣ್ಣು ಮಲಬದ್ಧತೆ ಉಂಟುಮಾಡುವುದರಿಂದ ವರ್ಜಿಸುವುದು ಒಳಿತು. ಅನಾನಸು, ಪಪ್ಪಾಯ, ಮಾವಿನಹಣ್ಣು, ಹುಳಿಯಾದ ಕಿತ್ತಳೆಗಳೂ ಹಲವರಿಗೆ ಒಗ್ಗುವುದಿಲ್ಲ. ಎಣ್ಣೆಯಲ್ಲಿ ಮುಳುಗಿಸಿ ಕರಿದ ತಿಂಡಿ ಪದಾರ್ಥಗಳೂ ಮೂಲವ್ಯಾಧಿಯನ್ನು ಉಲ್ಬಣಗೊಳಿಸುತ್ತವೆ. ಮಾಂಸಾಹಾರವನ್ನು ಪೂರ್ತಿಯಾಗಿ ಬಿಡುವುದು ಅತ್ಯಂತ ಹಿತಕಾರಿಯಾಗಿದ್ದು, ಒಂದೆರಡು ಬಾರಿ ಸೇವಿಸಿದರೂ ಮೂಲವ್ಯಾಧಿ ತೀವ್ರವಾಗಿ ಹೆಚ್ಚಾಗುತ್ತದೆ. ದಕ್ಷಿಣ ಭಾರತೀಯರು ರೋಟಿ ಮೊದಲಾದ ಉತ್ತರ ಭಾರತೀಯ ಆಹಾರಗಳನ್ನು ಸೇವಿಸಿದರೂ ಇದೇ ರೀತಿಯ ಪರಿಣಾಮವಾಗುತ್ತದೆ.

    ಎರಡನೇ ಇನ್ನಿಂಗ್ಸ್​ ಆರಂಭಿಸಲಿರುವ ಮೂಗುತಿ ಸುಂದರಿ ಸಾನಿಯಾ ಮಿರ್ಜಾ? ಹೈದರಾಬಾದ್​ನಲ್ಲಿ ಬಿಸಿ ಬಿಸಿ ಚರ್ಚೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts