More

    ಇನ್ನು ಮೇಲೆ ಸಂಜೆ ಏಳರ ನಂತರ ಆನ್‌ಲೈನ್ ಫುಡ್ ಆರ್ಡರ್ ಮಾಡಬೇಡಿ!

    ಬೆಂಗಳೂರು: ಲಾಕ್‌ಡೌನ್ ಬಳಿಕ ದರೋಡೆಕೋರರ ಹಾವಳಿ ಹೆಚ್ಚಾಗಿದ್ದು, ಫುಡ್ ಡೆಲಿವರಿ ಬಾಯ್‌ಗಳು ಸಂಜೆ ನಂತರ ಕೆಲಸ ಮಾಡಲು ಭಯಪಡುತ್ತಿದ್ದಾರೆ. ಡೆಲಿವರಿ ಬಾಯ್‌ಗಳನ್ನೇ ಟಾರ್ಗೆಟ್ ಮಾಡಿಕೊಂಡಿರುವ ದುಷ್ಕರ್ಮಿಗಳು ನಿರ್ಜನ ಪ್ರದೇಶಗಳಲ್ಲಿ ಅಡ್ಡಗಟ್ಟಿ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಹಣ, ಮೊಬೈಲ್ ಹಾಗೂ ಇನ್ನಿತರ ಬೆಲೆಬಾಳುವ ವಸ್ತುಗಳನ್ನು ದೋಚುತ್ತಿದ್ದಾರೆ.

    ‘‘ಹೀಗಾಗಿ ನಾವು ಸಂಜೆ 7 ಗಂಟೆಯ ನಂತರ ಆರ್ಡರ್ ಬಂದರೆ ಡೆಲಿವರಿ ಮಾಡಲು ತೆರಳುವುದು ಬೇಡ’’ ಎಂದು ಸಿಬ್ಬಂದಿ ಚರ್ಚಿಸಿರುವ ವಿಡಿಯೋ ಜಾಲತಾಣದಲ್ಲಿ ವೈರಲ್ ಆಗಿದೆ. ‘‘ರಾತ್ರಿ ಹೊತ್ತು ಡೆಲಿವರಿ ಮಾಡಲು ಹೋಗುವವರನ್ನು ದುಷ್ಕರ್ಮಿಗಳು ಸುಲಿಗೆ ಮಾಡುತ್ತಿದ್ದಾರೆ. ನಾವೇಕೆ 50 ರೂ. ಆಸೆಗಾಗಿ ಹಣ, ಮೊಬೈಲ್ ಕಳೆದುಕೊಳ್ಳಬೇಕು? ಒಂದು ವೇಳೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದರೆ ನಮ್ಮನ್ನು ನಂಬಿದ ಕುಟುಂಬದ ಗತಿ ಏನು? ಸಂಜೆಯ ನಂತರ ಯಾರೊಬ್ಬರೂ ಲಾಗಿನ್ ಆಗುವುದು ಬೇಡ. ನಾನು ಕನ್ನಡಿಗ, ತಮಿಳುನಾಡಿನವನು, ಆಂಧ್ರದವನು ಎಂಬ ಭೇದಭಾವ ಬೇಡ. ಹೊಟ್ಟೆ ಪಾಡಿಗೆ ಕೆಲಸಕ್ಕೆ ಬಂದಿದ್ದೇವೆ, ಒಗ್ಗಟ್ಟಿನಿಂದ ಇರೋಣ’’ ಎಂದು ಅವರು ಮಾತನಾಡಿಕೊಂಡಿರುವುದು ವಿಡಿಯೋದಲ್ಲಿದೆ. ಇದನ್ನೂ ಓದಿರಿ ಸಿಎಂ ಯಡಿಯೂರಪ್ಪಗೆ ಕರೊನಾ ನೆಗೆಟಿವ್​

    ಇತ್ತೀಚೆಗೆ ಡೆಲಿವರಿ ಬಾಯ್ ಮೇಲೆ ಇಂತಹ ದಾಳಿ ನಡೆದಿದ್ದೇ ಇದಕ್ಕೆ ಕಾರಣ. ಕೋಡಿಚಿಕ್ಕನಹಳ್ಳಿ ನಿವಾಸಿ ಡೆಲಿವರಿ ಬಾಯ್ ಆದಿತ್ಯ ಎಂಬಾತನಿಗೆ ದುಷ್ಕರ್ಮಿಗಳು ಚೂರಿಯಿಂದ ಇರಿದು ಹಲ್ಲೆ ನಡೆಸಿದ್ದಾರೆ. ಜುಲೈ 13ರಂದು ರಾತ್ರಿ 11.30ರಲ್ಲಿ ಫುಡ್ ಡೆಲಿವರಿ ಮಾಡಿ ಬೈಕ್‌ನಲ್ಲಿ ತೆರಳುತ್ತಿದ್ದ ಆದಿತ್ಯನನ್ನು ಹೊಂಗಸಂದ್ರದ ಬಳಿ ಅಡ್ಡಗಟ್ಟಿದ ಇಬ್ಬರು ದುಷ್ಕರ್ಮಿಗಳು ಚೂರಿಯಿಂದ ಹೊಟ್ಟೆಗೆ ಇರಿದು ಪರಾರಿಯಾಗಿದ್ದಾರೆ. ಈ ಕುರಿತು ಬೊಮ್ಮನಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ.

    ಬಿಬಿಎಂಪಿ ಆಯುಕ್ತ ಅನಿಲ್ ಕುಮಾರ್ ಎತ್ತಂಗಡಿ, ಮಂಜುನಾಥ್ ಪ್ರಸಾದ್ ನೇಮಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts