More

    ಕನಕರ ಆದರ್ಶ ಪಾಲನೆ ಮಾಡಿ

    ಕಮತಗಿ: ಪಟ್ಟಣದ ಶ್ರೀ ಹುಚ್ಚೇಶ್ವರ ವಿದ್ಯಾವರ್ಧಕ ಸಂಘದ ಶ್ರೀ ಹುಚ್ಚೇಶ್ವರ ಸಂಯುಕ್ತ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಶ್ರೀ ಭಕ್ತ ಕನಕದಾಸರ ಜಯಂತಿ ಆಚರಿಸಲಾಯಿತು.

    ಪ್ರಾಚಾರ್ಯ ಎಸ್.ವಿ. ಬಾಗೇವಾಡಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಕೀರ್ತನೆಗಳನ್ನು ರಚಿಸುವ ಮೂಲಕ ಸಮಾಜಕ್ಕೆ ಬೆಳಕು ನೀಡಿದ ಭಕ್ತ ಕನಕದಾಸರು ನಾಡು ಕಂಡ ಅಪರೂಪದ ಸಂತ. ಕೀರ್ತನೆಗಳ ಮೂಲಕ ಸಮಾಜವನ್ನು ಸರಿದಾರಿಗೆ ಹೋಗುವಂತೆ ಮಾರ್ಗದರ್ಶನ ಮಾಡಿದ್ದಾರೆ. ಅವರು ಹಾಕಿಕೊಟ್ಟ ಆದರ್ಶಗಳನ್ನು ನಾವೆಲ್ಲ ಪಾಲನೆ ಮಾಡಬೇಕಾಗಿದೆ ಎಂದರು.

    ಹಿರಿಯ ಉಪನ್ಯಾಸಕ ಆರ್.ಎಂ. ಗೌಡರ ಮಾತನಾಡಿ, ವಿವಿಧ ಪಂಥಗಳಲ್ಲಿ ಭಕ್ತಿ ಪಂಥ ಒಂದಾಗಿದ್ದು, ಭಕ್ತಿ ಪಂಥದಲ್ಲಿ ಅಗ್ರಗಣ್ಯರಾದ ಕನಕದಾಸರು ಕುಲ ಕುಲವೆಂದು ಬಡಿದಾಡದೆ ಎಲ್ಲರೂ ಒಂದೇ ಎನ್ನುವ ಮನೋಭಾವದಿಂದ ಬದುಕಬೇಕು ಎನ್ನುವ ಸಂದೇಶ ಸಾರಿದ್ದಾರೆ. ಅವರ ಆಶಯದಂತೆ ನಾವೆಲ್ಲ ಇಂದು ಒಂದೇ ಎನ್ನುವ ಮನೋಭಾವ ಬೆಳೆಸಿಕೊಳ್ಳಬೇಕಿದೆ ಎಂದರು.

    ಕುಮಾರಿ ಪಲ್ಲವಿ ರಾಜಾಪುರ ಭಕ್ತ ಕನಕದಾಸರ ಕುರಿತು ಅನಿಸಿಕೆ ವ್ಯಕ್ತಪಡಿಸಿದರು. ಉಪನ್ಯಾಸಕರಾದ ಬಿ.ವಿ. ಬೀರಕಬ್ಬಿ, ಬಿ.ಎಚ್. ಕಂಬಾಳಿಮಠ, ಎಸ್.ಕೆ. ಮುತ್ತಲಗೇರಿ, ಎನ್.ಪಿ. ಹುಲುಮನಿಗೌಡರ, ಎಸ್.ಆರ್. ಪೂಜಾರ, ಎಂ.ಎಸ್. ಶೆಟ್ಟರ್, ಎಂ. ಎಂ. ಲಾಯದಗುಂದಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts