More

    ಸೇವಾಲಾಲ ಮಾಲಾಧಾರಿಗಳಿಂದ ಭೋಗಪೂಜೆ

    ಕಮತಗಿ: ಸಮೀಪದ ನೀಲಾನಗರ ಗ್ರಾಮದ ದುರ್ಗಾದೇವಿ ಶಕ್ತಿಪೀಠದಲ್ಲಿ ಬಂಜಾರ ಸಮಾಜದ ಮಾಲಾಧಾರಿಗಳಿಂದ ಕುಮಾರ ಮಹಾರಾಜರ ನೇತೃತ್ವದಲ್ಲಿ ಭೋಗ(ಹೋಮ) ಪೂಜೆ, ವಿವಿಧ ಧಾರ್ಮಿಕ ಕಾರ್ಯಗಳು ನಡೆದವು.

    ಸಂತ ಸೇವಾಲಾಲರ 285ನೇ ಜಯಂತಿ ಅಂಗವಾಗಿ 70ಕ್ಕೂ ಹೆಚ್ಚು ಜನರು ಸೇವಾಲಾಲ ಮಾಲೆ ಧರಿಸಿದ ಹಿನ್ನೆಲೆಯಲ್ಲಿ ನೀಲಾನಗರದ ದುರ್ಗಾದೇವಿ ಶಕ್ತಿಪೀಠದಲ್ಲಿ ಭೋಗ ಪೂಜೆಯ ಜತೆಗೆ ಹೋಮ-ಹವನ ಸೇರಿ ವಿವಿಧ ಪೂಜೆ ಕೈಂಕರ್ಯಗಳು ಹಾಗೂ ಸಂತ ಸೇವಾಲಾಲ ಭಜನೆ ನಡೆಯಿತು.

    ಕುಮಾರ ಮಹಾರಾಜರು ಮಾತನಾಡಿ, ಯುವಕರು ದುಶ್ಚಟಗಳಿಂದ ದೂರವಿದ್ದು ಉತ್ತಮ ಬದುಕು ಕಟ್ಟಿಕೊಳ್ಳಲೆಂಬ ಉದ್ದೇಶದಿಂದ ಪ್ರತಿ ವರ್ಷ ಸೇವಾಲಾಲರ ಮಾಲೆಯನ್ನು 21 ದಿನಗಳವರೆಗೆ ಧರಿಸಿ ಭಕ್ತಿ, ನಿಷ್ಠೆಯಿಂದ ವ್ರತ ಮಾಡುವ ಪರಂಪರೆ ಇದೆ. ನೀಲಾನಗರ ಸೇರಿ ಜಿಲ್ಲೆಯ ವಿವಿಧ ತಾಂಡಾಗಳಲ್ಲಿ 500ಕ್ಕೂ ಹೆಚ್ಚು ಜನರು ಮಾಲಾಧಾರಣೆ ಮಾಡಿದ್ದಾರೆ. ಈ ಎಲ್ಲ ಮಾಲಾಧಾರಿಗಳು ಸೇವಾಲಾಲರ ಜನ್ಮಸ್ಥಳವಾದ ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿನ ಸೂರಗೊಂಡನಕೊಪ್ಪದಲ್ಲಿ ಫೆ.15 ರಿಂದ ನಡೆಯುವ ಸೇವಾಲಾಲರ ಜಯಂತಿ ಕಾರ್ಯಕ್ರಮದಲ್ಲಿ ಮಾಲಾವ್ರತ ಮುಕ್ತಾಯಗೊಳಿಸಲಿದ್ದಾರೆ ಎಂದರು.

    ಇದಕ್ಕೂ ಮುನ್ನ ಮಾಲಾಧಾರಿಗಳಿಂದ ವಿವಿಧ ವಾದ್ಯ-ವೈಭವಗಳಿಂದ ಸೇವಾಲಾಲರ ಭಾವಚಿತ್ರ ಮೆರವಣಿಗೆ ನಡೆಯಿತು.

    ಅರ್ಚಕ ನಾಗೇಶ ಪೂಜಾರಿ, ಜಿಪಂ ಮಾಜಿ ಸದಸ್ಯ ರಂಗನಗೌಡ ಗೌಡರ, ಮೇಘಪ್ಪ ಪಮ್ಮಾರ, ಕೆ.ಡಿ. ಗೌಡರ, ವಿಜಯಕುಮಾರ ಶೆಟ್ಟಿ, ಶಂಕರ ಕಟ್ಟಿಮನಿ, ಗೋಕುಲ ದೊಡಮನಿ, ದೇಸಾಯಿ ಲಮಾಣಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts