More

    ಸಾಮೂಹಿಕ ವಿವಾಹ ನೆಮ್ಮದಿ ಜೀವನಕ್ಕೆ ನಾಂದಿ

    ಕಮತಗಿ: ಸಾಮೂಹಿಕ ವಿವಾಹಗಳು ದುಂದುವೆಚ್ಚಕ್ಕೆ ಕಡಿವಾಣ ಹಾಕುವುದಲ್ಲದೆ, ನೆಮ್ಮದಿ ಜೀವನಕ್ಕೆ ನಾಂದಿಯಾಗುತ್ತವೆ ಎಂದು ಕಮತಗಿ-ಕೋಟೆಕಲ್ಲ ಹೊಳೆ ಹುಚ್ಚೇಶ್ವರ ಸಂಸ್ಥಾನಮಠದ ಹುಚ್ಚೇಶ್ವರ ಸ್ವಾಮೀಜಿ ಹೇಳಿದರು.

    ಸುರಳಿಕಲ್ಲ ಗ್ರಾಮದಲ್ಲಿ ಸೋಮವಾರ ನೂತನ ಲಕ್ಷ್ಮೀದೇವಿ ದೇವಸ್ಥಾನ, ಗೋಪುರ ಉದ್ಘಾಟನೆ, ಪ್ರಾಣ ಪ್ರತಿಷ್ಠಾಪನೆ, ಸಾಮೂಹಿಕ ವಿವಾಹ ಮಹೋತ್ಸವ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

    ದಾಂಪತ್ಯ ಜೀವನವನ್ನು ಮಾದರಿಯಾಗಿ ನಡೆಸುವ ಮೂಲಕ ಸಮಾಜಕ್ಕೆ ಮಾದರಿಯಾಗಬೇಕು. ಪರಸ್ಪರ ಒಬ್ಬರನ್ನೊಬ್ಬರು ಅರ್ಥ ಮಾಡಿಕೊಂಡು ಜೀವನ ಸಾಗಿಸಬೇಕು ಎಂದರು.

    ಬಿಲ್‌ಕೆರೂರ ಸಿದ್ಧಲಿಂಗ ಶಿವಾಚಾರ್ಯರು, ಗುಳೇದಗುಡ್ಡ ಅಭಿನವ ಕಾಡಸಿದ್ಧೇಶ್ವರ ಸ್ವಾಮೀಜಿ, ಕಮತಗಿ ಶಿವಕುಮಾರ ಶಿವಾಚಾರ್ಯರು, ಚಿಟಗಿನಕೊಪ್ಪದ ಚನ್ನಬಸವ ಸ್ವಾಮೀಜಿ, ತುರವಿಹಾಳದ ಮಾದಯ್ಯಸ್ವಾಮಿ ಗುರುವಿನವರ, ಸೀತಿಮನಿ ರಾಮಸ್ವಾಮಿ ಧರ್ಮರಮಠ, ಸುರಳಿಕಲ್ಲ ವಶಿಷ್ಟಾ ಸ್ವಾಮೀಜಿ, ಗಂಭೀರಾನಂದ ಸ್ವಾಮೀಜಿ, ಬಿಸನಾಳದ ಬಸಯ್ಯ ಗ್ಯಾನಪ್ಪಜ್ಜನವರು, ಕಮತಗಿ ಬಸವಣ್ಣೆಮ್ಮ ತಾಯಿ ಬಸರಕೋಡ ಸಮ್ಮುಖ ವಹಿಸಿದ್ದರು.
    ಬಳಿಕ ನಡೆದ ಸಾಮೂಹಿಕ ವಿವಾಹ ಸಮಾರಂಭದಲ್ಲಿ ಐದು ಜೋಡಿಗಳು ನವದಾಂಪತ್ಯಕ್ಕೆ ಕಾಲಿಟ್ಟರು.

    ಬಿಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಮುರುಗೇಶ ಕಡ್ಲಿಮಟ್ಟಿ, ಜಿಪಂ ಮಾಜಿ ಅಧ್ಯಕ್ಷ ಬಸವಂತಪ್ಪ ಮೇಟಿ, ಗಂಗೂಬಾಯಿ ಮೇಟಿ, ರಾಜು ಹಂಗರಗಿ, ಕೆಎಂಎ್ ಮಾಜಿ ಅಧ್ಯಕ್ಷ ಸಂಗಣ್ಣ ಹಂಡಿ, ಗ್ರಾಪಂ ಅಧ್ಯಕ್ಷೆ ಗೌರವ್ವ ಬಡಕನ್ನವರ, ಸದಸ್ಯರಾದ ಧರ್ಮಗೌಡ ಗೌಡರ, ಸವಿತಾ ಗೌಡರ, ತಾಪಂ ಮಾಜಿ ಸದಸ್ಯ ಹೊಳೆಪ್ಪ ಗೌಡರ, ಹುಚ್ಚಯ್ಯ ಹಿರೇಮಠ, ಹಿರಿಯರಾದ ಕೃಷ್ಣಗೌಡ ಪಾಟೀಲ, ಬಾಲಪ್ಪ ಉಣ್ಣಿಭಾವಿ, ಹನಮಗೌಡ ಗೌಡರ, ರಾಮನಗೌಡ ಗೌಡರ, ಬಸವರಾಜ ಕೆಲೂರ, ರಾಮಣ್ಣ ಆಸಂಗಿ, ಹುಚ್ಚನಗೌಡ ಪಾಟೀಲ, ಹನುಮಂತ ಮಂಕಣಿ, ಶೇಖಪ್ಪ ಹಂಡಿ, ಜಗದೀಶ ಗೌಡರ, ಸಾಬಣ್ಣ ತಳ್ಳಿಗೇರಿ ಇತರರಿದ್ದರು.

    ಸರ್ಕಾರಿ ಶಾಲೆ ಮಕ್ಕಳಿಂದ ಪ್ರಾರ್ಥನೆ ನಡೆಯಿತು. ಶಿಕ್ಷಕರಾದ ಕೆ.ಎಂ. ಮಾಗುಂಡಪ್ಪನವರ, ಎಂ.ಎಸ್. ಹನಮಸಾಗರ ನಿರೂಪಿಸಿದರು.
    ಇದಕ್ಕೂ ಮುನ್ನ ಶ್ರೀ ಲಕ್ಷ್ಮೀದೇವಿ ಮೂರ್ತಿ ಮೆರವಣಿಗೆ ವಿವಿಧ ವಾದ್ಯಮೇಳಗಳೊಂದಿಗೆ ನಡೆಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts