More

    ರಸಗೊಬ್ಬರಕ್ಕೆ ಸಹಾಯಧನ ನೀಡುವುದಕ್ಕಾಗಿ 65,000 ಕೋಟಿ ರೂಪಾಯಿ ಘೋಷಿಸಿದ ಕೇಂದ್ರ ಸರ್ಕಾರ

    ನವದೆಹಲಿ: ಕರೊನಾ ಲಾಕ್​ಡೌನ್ ಕಾರಣಕ್ಕೆ ಸಂಕಷ್ಟಕ್ಕೀಡಾಗಿರುವ ದೇಶದ ಅರ್ಥ ವ್ಯವಸ್ಥೆಗೆ ಉತ್ತೇಜನ ತುಂಬುವ ಮೂರನೇ ಹಂತದ ಪ್ಯಾಕೇಜ್ ಘೋಷಿಸಿರುವ ಕೇಂದ್ರ ಸರ್ಕಾರ, ಗುರುವಾರ ರಸಗೊಬ್ಬರ ಖರೀದಿಗೆ ಕೃಷಿಕರಿಗೆ ಸಹಾಯಧನ ನೀಡುವುದಕ್ಕಾಗಿ 65,000 ಕೋಟಿ ರೂಪಾಯಿ ಪ್ಯಾಕೇಜ್ ಘೋಷಿಸಿದೆ.

    ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಗುರುವಾರ ಈ ವಿಷಯವನ್ನು ಸುದ್ದಿಗೋಷ್ಠಿಯಲ್ಲಿ ಪ್ರಕಟಿಸಿದ್ದಾರೆ. ರಸಗೊಬ್ಬರದ ಲಭ್ಯತೆಯನ್ನು ಖಾತರಿಗೊಳಿಸತ್ತ ಸಮಯಕ್ಕೆ ಸರಿಯಾಗಿ ಮುಂದಿನ ಕೃಷಿ ಸೀಸನ್​​ನಲ್ಲಿ ಅದನ್ನು ಖರೀದಿಸುವುದಕ್ಕೆ ನೆರವಾಗುವ ದೃಷ್ಟಿಯಿಂದ 65,000 ಕೋಟಿ ರೂಪಾಯಿ ಪ್ಯಾಕೇಜ್ ಘೋಷಿಸಲಾಗಿದೆ. ಇದಕ್ಕೆ ಹೊರತಾಗಿ ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ರೋಜ್​ಗಾರ್ ಯೋಜನೆ ಪ್ರಕಾರ 10,000 ಕೋಟಿ ರೂಪಾಯಿಯನ್ನು ಈ ಹಣಕಾಸು ವರ್ಷದ ಅವಧಿಯಲ್ಲೇ ಪೂರೈಸಲಾಗುತ್ತದೆ ಎಂದು ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ.

    ಇದನ್ನೂ ಓದಿ: ಆನ್​ಲೈನ್​ನಲ್ಲಿ ಬಟ್ಟೆ ತರಿಸುವವರೇ ಎಚ್ಚರ! ನೀವು ಹೀಗೂ ಮೋಸ ಹೋಗಬಹುದು

    ಸರ್ಕಾರದ ಈ ಕ್ರಮವು ಗ್ರಾಮೀಣ ಆರ್ಥಿಕತೆಗೆ ಬಲ ತುಂಬಲಿದೆ. ಸಾಲದ ರೂಪದಲ್ಲಿ 3,000 ಕೋಟಿ ರೂಪಾಯಿಯನ್ನು ಪ್ರಾಜೆಕ್ಟ್ ಎಕ್ಸ್​ಪೋರ್ಟ್ಸ್​ ಉತ್ತೇಜನಕ್ಕಾಗಿ ಎಕ್ಸಿಮ್ ಬ್ಯಾಂಕ್​ಗೆ ನೀಡಲಾಗುತ್ತದೆ. ಸರ್ಕಾರದ ಪರವಾಗಿ ಈ ಬ್ಯಾಂಕ್​ ಇಂಡಿಯನ್ ಡೆವಲಪ್​ಮೆಂಟ್​ ಆ್ಯಂಡ್ ಎಕನಾಮಿಕ್ ಅಸಿಸ್ಟೆನ್ಸ್ ಸ್ಕೀಮ್ (ಐಡಿಇಎಎಸ್) ಪ್ರಕಾರ ಹಣಕಾಸಿನ ನೆರವು ಒದಗಿಸಲಿದೆ ಎಂದು ಅವರು ಹೇಳಿದರು. (ಏಜೆನ್ಸೀಸ್)

    ಹಣಕಾಸಿನ ಅಕ್ರಮ- ದೀಪಕ್​ ಕೊಚ್ಚಾರ್​ ಜಾಮೀನು ಅರ್ಜಿ ತಿರಸ್ಕೃತ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts