More

    ಹೊಳಲು ಭಕ್ತಿ-ಭಾವದ ತವರೂರು

    ಹೂವಿನಹಡಗಲಿ: ಹೊಳಲು ಗ್ರಾಮ, ಭಕ್ತಿ-ಭಾವದ ತವರೂರು ಎಂದು ಜಂಗಮ ಕ್ಷೇತ್ರ ಲಿಂಗನಾಯಕನಹಳ್ಳಿಯ ಶ್ರೀ ಚನ್ನವೀರ ಸ್ವಾಮೀಜಿ ಹೇಳಿದರು.

    ತಾಲೂಕಿನ ಹೊಳಲು ಗ್ರಾಮದ ಶ್ರೀ ಮಲ್ಲಿಕಾರ್ಜುನ ವಿರಕ್ತ ಮಠದಲ್ಲಿ ಮಂಗಳವಾರ ನೂತನ ಉತ್ತರಾಧಿಕಾರಿ ನೇಮಕ ಹಾಗೂ ಶ್ರೀಮಠದ ಲೋಕಾರ್ಪಣೆ ಅಂಗವಾಗಿ ಆಯೋಜಿಸಿದ್ದ 14ನೇ ದಿನದ ಶ್ರೀಹಾನಗಲ್ಲ ಕುಮಾರ ಶ್ರೀಗಳ ಪುರಾಣ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು.

    ಹೊಳಲು ಸರ್ವ ಜನಾಂಗದ ಶಾಂತಿಯ ತೋಟದಂತಿದೆ. ಜಾತಿ, ಧರ್ಮ ಬೇಧವಿಲ್ಲದೆ ಬಾಳುತ್ತಿರುವ ಗ್ರಾಮ, ನಾಡಿಗೆ ಮಾದರಿಯಾಗಿದೆ ಎಂದರು.
    ಇದೇ ಸಂದರ್ಭದಲ್ಲಿ ಶ್ರೀಮಠಕ್ಕೆ ಮುಸ್ಲಿಮರು 25 ಸಾವಿರ ರೂ. ದೇಣಿಗೆ ನೀಡುವ ಮೂಲಕ ಭಾವೈಕ್ಯ ಮೆರೆದರು. ನಂತರ ರೋಜಾ ಉಪವಾಸದಲ್ಲಿದ್ದ ಮುಸ್ಲಿಮರಿಗೆ ಮಠದಲ್ಲೇ ಹಣ್ಣುಗಳನ್ನು ನೀಡಿ ವ್ರತಾಚರಣೆ ಬಿಡಿಸಲಾಯಿತು. ಕಾರ್ಯಕ್ರಮದಲ್ಲಿ 550ಕ್ಕೂ ಹೆಚ್ಚು ಮಹಿಳೆಯರಿಗೆ ಉಡಿತುಂಬಲಾಯಿತು. ಪ್ರಸಾದಕ್ಕಾಗಿ ಗ್ರಾಮದ ಮಹಿಳೆಯರು 2 ಸಾವಿರ ಹೋಳಿಗೆ ಹಾಗೂ ಸಾವಿರಾರು ಕರಿಗಡಬು ತಯಾರಿಸಿಕೊಂಡು ಬಂದಿದ್ದರು.

    ಅತ್ತಿಮತ್ತೂರು ವಿರಕ್ತ ಮಠದ ನಿಜಗುಣ ಶ್ರೀಗಳು, ಹಿರೇಸಿಂದೋಗಿ ಕಪ್ಪತ್ತ ಮಠದ ಚಿದಾನಂದ ಸ್ವಾಮೀಜಿ ಆಶೀರ್ವಚನ ನೀಡಿದರು. ಶ್ರೀಮಠದ ನೂತನ ಉತ್ತರಾಧಿಕಾರಿ ಶ್ರೀ ಚನ್ನಬಸವ ಸ್ವಾಮೀಜಿ, ಅಂಜುಮನ್ ಕಮಿಟಿ ಅಧ್ಯಕ್ಷ ಕೆ.ಅಬ್ದುಲ್ ಅಜೀಜ್, ಕಾರ್ಯದರ್ಶಿ ಎನ್.ಸುಬಾನ್ ಸಾಬ್, ಖಜಾಂಚಿ ಯುಸೂಫ್, ಮದರಸ ಕಮಿಟಿ ಅಧ್ಯಕ್ಷ ಎಂ.ರಾಜಾಸಾಬ್, ಕಾರ್ಯದರ್ಶಿ ಪಿ.ಮೌಲಾಸಾಬ್, ಹಿರಿಯರಾದ ಮುಜಾವರ್ ಇಮಾಮ್ ಸಾಬ್ ಹಾಗೂ ಗ್ರಾಮಸ್ಥರು ಹಾಜರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts