More

    ಹಜರತ್ ಮೆಹಬೂಬ್ ಸುಬಾನಿ ಉರುಸ್ ಆಚರಣೆ

    ಹೂವಿನಹಡಗಲಿ: ತಾಲೂಕಿನ ಹೊಳಲು ಗ್ರಾಮದಲ್ಲಿ ಹಿಂದು ಮತ್ತು ಮುಸ್ಲಿಮರ ಭಾವೈಕ್ಯ ಸಾರುವ ಗುರು ಹಜರತ್ ಮೆಹಬೂಬ್ ಸುಬಾನಿಗಳವರ ಉರುಸು ಕಾರ್ಯಕ್ರಮ ಶುಕ್ರವಾರ ವೈಭವದಿಂದ ಜರುಗಿತು. ಸೌಹಾರ್ದತೆಗೆ ಸಾಕ್ಷಿಯಾಗಿ ಗಮನ ಸೆಳೆದಿರುವ ಉರುಸು ಆಚರಣೆಗೆ ಮುಸ್ಲಿಂ ಸಮುದಾಯದವರು ಗ್ರಾಮದ ವಿರಕ್ತ ಮಠದ ಶ್ರೀ ಚನ್ನಬಸವ ಶ್ರೀಗಳನ್ನು ಶ್ರದ್ಧಾ ಭಕ್ತಿಯಿಂದ ದರ್ಗಾಕ್ಕೆ ಬರಮಾಡಿಕೊಂಡು ಆಶೀರ್ವಾದ ಪಡೆದರು.

    ಮುಸ್ಲಿಂ ಸಮುದಾಯದ ಮುಖಂಡ ಮುಜಾವರ್ ಇಮಾಮ್ ಸಾಬ್ ಮಾತನಾಡಿ, ಗ್ರಾಮದ ನೂತನ ಮಠಕ್ಕೆ ಚನ್ನಬಸವ ಶ್ರೀಗಳ ಆಗಮನ ಹೊಸ ಚೈತನ್ಯ ತಂದಿದೆ. ವರ್ಷಗಳಿಂದ ಮರೀಚಿಕೆಯಂತಾಗಿದ್ದ ಹಿಂದು-ಮುಸ್ಲಿಮರ ಭಾವೈಕ್ಯತೆಗೆ ಮತ್ತೆ ಹೊಸ ಚಿಗುರು ಬಂದಂತಾಗಿದೆ. ಹಿಂದು ಮತ್ತು ಮುಸ್ಲಿಮರಿಗೆ ಶ್ರೀಗಳು ಕೊಂಡಿಯಾಗಿ, ಸಮಾಜದ ಎಲ್ಲ ಮತಬಾಂದವರಿಗೆ ಮಾರ್ಗದರ್ಶಕರಾಗಿದ್ದಾರೆ ಎಂದರು.

    ಉರುಸು ಅಂಗವಾಗಿ ಹರಕೆಹೊತ್ತ ಭಕ್ತರು ದೀಡ ನಮಸ್ಕಾರ ಹಾಕಿದರು. ಸಂತಾನ ಫಲ ಬೇಡಿದ ಭಕ್ತರು, ತಮಗೆ ಸಂತಾನವಾದ ಮಗುವಿನ ತೂಕದ ಸಕ್ಕರೆಯನ್ನು ಸ್ವಾಮಿಗೆ ಅರ್ಪಿಸಿ ಕೃಪೆ ಪಡೆದರು. ರೈತರು, ಎತ್ತುಗಳಿಗೆ ಅಲಂಕಾರ ಮಾಡಿ ಚಕ್ಕಡಿ ಹೂಡಿಕೊಂಡು ಬಂದು ದರ್ಗಾಕ್ಕೆ ಬರುವ ಭಕ್ತರಿಗೆ ಬೆಲ್ಲದ ಪಾನಕ ಹಂಚಿ ಭಕ್ತಿ ಮೆರೆದರು. ಉರುಸು ಆಚರಣೆಯಲ್ಲಿ ಹೊಳಲು ಹಾಗೂ ಸುತ್ತ ಮುತ್ತಲ ಗ್ರಾಮದ ಸಾವಿರಾರು ಭಕ್ತರು ಆಗಮಿಸಿದ್ದರು.
    (ಫೋಟೊ-ಏಪ್ರಿಲ್-ಎಚ್,ಡಿ,ಎಲ್-01)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts