More

    ಶ್ರೀ ಕೊಟ್ಟೂರು ಗುರುಬಸವೇಶ್ವರ ರಥೋತ್ಸವ ಅದ್ದೂರಿ

    ಹೂವಿನಹಗಲಿ: ತಾಲೂಕಿನ ಉತ್ತಂಗಿ ಗ್ರಾಮದ ಶ್ರೀ ಶಂಕರಸ್ವಾಮಿ ಮಠದ ಜಾತ್ರೋತ್ಸವದ ಅಂಗವಾಗಿ ಕೊಟ್ಟೂರು ಗುರುಬಸವೇಶ್ವರ ರಥೋತ್ಸವವು ಮಂಗಳವಾರ ಸಾವಿರಕ್ಕೂ ಅಧಿಕ ಭಕ್ತರ ಸಮ್ಮುಖದಲ್ಲಿ ಸಂಭ್ರಮ, ಸಡಗರದಿಂದ ನಡೆಯಿತು.

    ಗುರುಬಸವೇಶ್ವರ ಸ್ವಾಮಿಯ ಉತ್ಸವ ಮೂರ್ತಿಯನ್ನು ಶಂಕರಸ್ವಾಮಿ ಮಠದಿಂದ ಸಮಾಳ, ನಂದಿಕೋಲು ಸೇರಿ ವಿವಿಧ ಮಂಗಳವಾದ್ಯಗಳೊಂದಿಗೆ ಪಲ್ಲಕಿಯಲ್ಲಿ ಕರೆತಂದು ರಥದ ಸುತ್ತಲೂ ಪ್ರದಕ್ಷಿಣೆ ಹಾಕಿಸಿ, ರಥದಲ್ಲಿ ಪ್ರತಿಷ್ಠಾಪಿಸಲಾಯಿತು. ನಂತರ ಗ್ರಾಮದ ಕೊಟ್ಟೂರೇಶ್ವರ ಸ್ವಾಮಿಯ ದೇವಸ್ಥಾನದವರೆಗೂ ರಥೋತ್ಸವ ನಡೆದು, ಪುನಃ ಮೂಲ ಸ್ಥಾನಕ್ಕೆ ಬಂದು ತಲುಪಿತು.

    ಹರಕೆ ಹೊತ್ತ ಭಕ್ತರು ಬೆಳಿಗ್ಗೆಯಿಂದ ದೇವರಿಗೆ ವಿಶೇಷ ಪೂಜೆ ಸಲ್ಲಿದರು. ಶಂಕರಸ್ವಾಮಿ ಮಠದ ಸೋಮಶಂಕರ ಸ್ವಾಮೀಜಿ, ನಂದಿಪುರ ಮಹೇಶ್ವರ ಸ್ವಾಮೀಜಿ, ಜಂಗಮಕ್ಷೇತ್ರ ಲಿಂಗನಾಯಕನಹಳ್ಳಿಯ ಚನ್ನವೀರಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ರಥೋತ್ಸವಕ್ಕೆ ಹೊಳಗುಂದಿ, ಇಟ್ಟಿಗಿ, ಕೊಟ್ಟೂರು, ಸೋಗಿ, ಮೋರಗೇರಿ ಮತ್ತಿತರ ಗ್ರಾಮಗಳ ಸಾವಿರಾರು ಭಕ್ತರು ಆಗಮಿಸಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts