More

    ಗರಗದಲ್ಲಿ ಸಂಭ್ರಮದ ರಥೋತ್ಸವ

    ಉಪ್ಪಿನಬೆಟಗೇರಿ: ಸಮೀಪದ ಗರಗ ಗ್ರಾಮದ ಶ್ರೀ ಮಡಿವಾಳೇಶ್ವರ ಶಿವಯೋಗಿಗಳ ಪುಣ್ಯಾರಾಧನೆ ನಿಮಿತ್ತ ಮಂಗಳವಾರ ಸಂಜೆ 4 ಗಂಟೆಗೆ ಸಂಭ್ರಮದ ರಥೋತ್ಸವ ಜರುಗಿತು.

    ಸಹಸ್ರಾರು ಭಕ್ತರು ತೇರಿಗೆ ಉತ್ತತ್ತಿ, ಬಾಳೆ ಹಾಗೂ ಲಿಂಬೆ ಹಣ್ಣುಗಳನ್ನು ಎಸೆದು ಕೃತಾರ್ಥರಾದರು. ಹರಗುರು ಚರಮೂರ್ತಿಗಳ ಉಪಸ್ಥಿತಿಯಲ್ಲಿ ಮಡಿವಾಳೇಶ್ವರ ಕಲ್ಮಠದ ಉತ್ತರಾಧಿಕಾರಿ ಶ್ರೀ ಪ್ರಶಾಂತ ದೇವರು ಪಲ್ಲಕ್ಕಿ ಹಾಗೂ ರಥೋತ್ಸವಕ್ಕೆ ಚಾಲನೆ ನೀಡಿದರು. ಶ್ರೀಮಠದಿಂದ ಪಾದಗಟ್ಟಿವರೆಗೆ ಸಂಚರಿಸಿದ ತೇರು ಅಲ್ಲಿಂದ ಮತ್ತೆ ಮೂಲ ಗದ್ದುಗೆವರೆಗೆ ಮರಳಿತು. ಗರಗ ಸೇರಿ ಸುತ್ತಲಿನ ಗ್ರಾಮಗಳ ವಿವಿಧ ಭಜನಾ ಮಂಡಳಿಗಳಿಂದ ಶಿವ ಭಜನೆ, ಕೋಲಾಟ, ಜಗ್ಗಲಗಿ ಮೇಳ ಸೇರಿ ಸಕಲ ಮಂಗಳವಾದ್ಯ ಮೇಳಗಳು ರಥೋತ್ಸವದ ಕಳೆ ಹೆಚ್ಚಿಸಿದವು.

    ಹೊಸೂರ ಶ್ರೀ ಮಡಿವಾಳೇಶ್ವರ ಮಠದ ಗಂಗಾಧರ ಸ್ವಾಮೀಜಿ, ಮುನವಳ್ಳಿ ಸೋಮಶೇಖರ ಮಠದ ಮುರುಘರಾಜೇಂದ್ರ ಸ್ವಾಮೀಜಿ, ಬೈಲಹೊಂಗಲ ತಾಲೂಕಿನ ಹೊಸೂರ ಮೂರುಸಾವಿರ ಮಠದ ನೀಲಕಂಠ ಸ್ವಾಮೀಜಿ, ಹುಬ್ಬಳ್ಳಿ, ಬೈಲಹೊಂಗಲ ರುದ್ರಾಕ್ಷಿಮಠದ ಬಸವಲಿಂಗ ಸ್ವಾಮೀಜಿ, ನಿಚ್ಚಣಕಿ ಮಡಿವಾಳೇಶ್ವರ ಮಠದ ಪಂಚಾಕ್ಷರಿ ಸ್ವಾಮೀಜಿ, ಯಕ್ಕುಂಡಿಯ ಪಂಚಾಕ್ಷರಿ ಸ್ವಾಮೀಜಿ, ಹೊಳೆ ಇಟಗಿ ವಿರಕ್ತಮಠದ ಮಡಿವಾಳ ಸ್ವಾಮೀಜಿ, ಮಮದಾಪುರ ಮೌನ ಮಲ್ಲಿಕಾರ್ಜುನ ಸ್ವಾಮೀಜಿ, ಶಿಂಗನಳ್ಳಿ ರಾಚೋಟೇಶ್ವರ ಶಿವಾಚಾರ್ಯರು, ನೇಗಿನಹಾಳ ಗುರು ಮಡಿವಾಳೇಶ್ವರ ಮಠದ ಬಸವಪ್ರಕಾಶ ಸ್ವಾಮೀಜಿ, ನರೇಂದ್ರ ಮಳೆಪ್ಪಜ್ಜನ ಮಠದ ಸಂಗಮೇಶ ಸ್ವಾಮೀಜಿ, ಗರಗದ ಕುಮಾರೇಶ್ವರ ಮಠದ ಕುಮಾರ ದೇವರು, ದೇವಸ್ಥಾನ ಟ್ರಸ್ಟ್ ಕಮಿಟಿ ಕಾರ್ಯಾಧ್ಯಕ್ಷ ಅಶೋಕ ದೇಸಾಯಿ, ಮಾಜಿ ಶಾಸಕ ಅಮೃತ ದೇಸಾಯಿ ಸೇರಿ ವಿವಿಧ ಮಠಗಳ ಶ್ರೀಗಳು ರಥೋತ್ಸವದಲ್ಲಿ ಪಾಲ್ಗೊಂಡಿದ್ದರು.

    ಜಾತ್ರೆಯಲ್ಲಿ ಜಾನುವಾರುಗಳ ಪರಿಕರಗಳು, ಸೌಂದರ್ಯವರ್ಧಕ ಅಲಂಕಾರ ವಸ್ತುಗಳು, ವಸ್ತ್ರ ಮಳಿಗೆ, ಆಟಿಕೆಗಳ ಅಂಗಡಿ, ತಿಂಡಿ ತಿನಿಸುಗಳ ಅಂಗಡಿಗಳು ಮೇಳೈಸಿದವು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts