More

    ಗೋಂದಿ ನಾಲೆಯಿಂದ ಕೆರೆಗೆ ಹರಿವು

    ಹೊಳೆಹೊನ್ನೂರು: ರೈತರು ನೀರಿಗಾಗಿ ಹರಸಾಹಸ ಮಾಡುತ್ತಿದ್ದರೂ ಸರ್ಕಾರ ಹಾಗೂ ಅಧಿಕಾರಿಗಳ ನಿರ್ಲಕ್ಷೃ ತೋರುತ್ತಿದ್ದಾರೆ ಎಂದು ರಾಜ್ಯ ರೈತ ಸಂಘದ ಜಿಲ್ಲಾ ಕಾರ್ಯಾಧ್ಯಕ್ಷ ಯಶವಂತ ರಾವ್ ಘೋರ್ಪಡೆ ದೂರಿದರು.
    ಪಟ್ಟಣದಲ್ಲಿ ಗೋಂದಿ ನಾಲಾ ನೀರನ್ನು ಅಚ್ಚುಕಟ್ಟು ಪ್ರದೇಶದವರೆಗೂ ತಲಪಿಸುವಂತೆ ಒತ್ತಾಯಿಸಿ ರೈತಸಂಘದ ವತಿಯಿಂದ ಬುಧವಾರ ಹಮ್ಮಿಕೊಂಡಿದ್ದ ಪ್ರತಿಭಟನಾ ರ‌್ಯಾಲಿಯನ್ನು ಉದ್ದೇಶಿಸಿ ಮಾತನಾಡಿದರು.
    ಕಳೆ ಬಾರಿ ವಾಡಿಕೆಗಿಂತಲೂ ಮಳೆ ಕಡಿಯಾಗಿದೆ. ಗೋಂದಿ ನಾಲಾ ನೀರು ಕೊನೇ ಭಾಗದವರೆಗೂ ತಲುಪದೆ ಪೋಲಾಗುತ್ತಿದೆ. ಸರಿಯಾಗಿ ನಿರ್ವಹಣೆ ಮಾಡದೇ ಅಧಿಕಾರಿಗಳು ಬೇಜವಾಬ್ದಾರಿಯಿಂದ ವರ್ತಿಸುತ್ತಿದ್ದಾರೆ. ಭದ್ರಾ ಡ್ಯಾಂನ ನೀರಾವರಿ ಇಲಾಖೆ ಕಚೇರಿ ಎದುರು ಕಳೆದ ವಾರ ಧರಣಿ ನಡೆಸಿದರೂ ಯಾವೊಬ್ಬ ಅಧಿಕಾರಿಯೂ ಸ್ಪಂದಿಸದಿದ್ದ ಕಾರಣಕ್ಕೆ ಪ್ರತಿಭಟನೆ ಮುಂದುವರಿಸುತ್ತಿದ್ದೇವೆ ಎಂದರು.
    ಗೋಂದಿ ನಾಲಾ ನೀರು ಕೆಲವರ ಹಿತಾಸಕ್ತಿಯಿಂದಾಗಿ ಕೆರೆಗಳ ಪಾಲಾಗುತ್ತಿದೆ. ನಂತರ ಭದ್ರಾ ನದಿಗೆ ಸೇರುತ್ತಿದೆ. ನಾಲೆ ಆಧುನೀಕರಣ ಆಗಿದ್ದರೂ ನದಿಗೆ ನೀರು ಬಿಡುತ್ತಿರುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು. ನೀರು ಪೋಲಾಗದಂತೆ ಕಾರ್ಯನಿರ್ವಹಿಸಿಬೇಕಾದ ಅಧಿಕಾರಿಗಳು ನಿರ್ಲಕ್ಷೃ ತೋರುತಿದ್ದಾರೆ ಎಂದು ಆರೋಪಿಸಿದರು.
    ಈಗಾಗಲೇ ಭದ್ರಾ ಡ್ಯಾಂನಿಂದ ತಿಂಗಳಿಗೊಮ್ಮೆ ನೀರು ಹರಿಸುತ್ತಿದ್ದು, ಇದರಿಂದ ಅಡಕೆ ತೋಟಗಳನ್ನು ಉಳಿಸಿಕೊಳ್ಳುವುದು ಕಷ್ಟಸಾಧ್ಯವಾಗುತ್ತಿದೆ. ಮುಂದಿನ ದಿನಗಳಲ್ಲಿ ಬಿಸಿಲು ಹೆಚ್ಚಾಗುವುದರಿಂದ ಗೋಂದಿ ನಾಲೆ ನೀರನ್ನು ಕಟ್ಟಕಡೆಯವರೆಗೆ ಹರಿಸಿದರೆ ವರ್ಷ ಪೂರ್ತಿ ನಿರ್ವಹಣೆ ಮಾಡಬಹುದು ಎಂದರು.

    ರಾಜ್ಯ ವಲಯ ಕಾರ್ಯದರ್ಶಿ ಡಿ.ವಿ.ವೀರೇಶ್, ಹಿರಣಯ್ಯ, ಡಿ.ಯಲ್ಲಪ್ಪ, ಮಂಜುನಾಥ, ಶಿವಾಜಿ ರಾವ್, ರಾಮಕೃಷ್ಣ ಮೇಸ್ತ, ಬಸವರಾಜ್, ಪರಶುರಾಮ್, ನಟರಾಜ್, ಈಶ್ವರ, ಕೃಷ್ಣಮೂರ್ತಿ, ನವೀನ, ಕೃಷ್ಣಪ್ಪ, ಹಮಾನ್ ಸಾಬ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts