More

    ರಾಜಾಕಾಲುವೆಗೆ ಆಟೋ ಚಾಲಕ ಬಲಿ; ಮಂಗಳೂರು ನಗರದ ಕೆಲವೆಡೆ ಜಲಾವೃತ

    ಮಂಗಳೂರು: ನಗರದಲ್ಲಿ ಶುಕ್ರವಾರ ರಾತ್ರಿ ಧಾರಾಕಾರವಾಗಿ ನಿರಂತರ ಸುರಿದ ಮಳೆಗೆ ಮಧ್ಯರಾತ್ರಿ ವೇಳೆಗೆ ಕೊಟ್ಟಾರ ಚೌಕಿ ಆಸುಪಾಸು ಜಲಾವೃತಗೊಂಡಿದ್ದು, ಓರ್ವ ಆಟೋ ಚಾಲಕ ಕೊಟ್ಟಾರ ಬಳಿ ರಾಜಾಕಾಲುವೆಗೆ ಬಿದ್ದು ಮೃತಪಟ್ಟಿದ್ದಾರೆ. ಆಟೋ ಚಾಲಕ ದೀಪಕ್‌ (40) ಮೃತಪಟ್ಟವರು.

    ಆಟೋ ಚಾಲಕ ಆಟೋ ಸಹಿತ ನೀರಿಗೆ ಬಿದ್ದಿರುವುದು ಘಟನೆ ನಡೆದ ಸ್ವಲ್ಪ ಹೊತ್ತಿನ ಬಳಿಕ ಬೆಳಕಿಗೆ ಬಂದಿದ್ದು, ಕೂಡಲೇ ಅಗ್ನಿಶಾಮಕ ದಳದ ನೆರವಿನೊಂದಿಗೆ ಕಾಯಾಚರಣೆ ನಡೆಸಲಾಯಿತಾದರೂ ದೀಪಕ್‌ ಅಷ್ಟು ಹೊತ್ತಿಗೆ ಮೃತಪಟ್ಟಿದ್ದರು ಎಂದು ಸ್ಥಳೀಯರು ತಿಳಿಸಿದ್ದಾರೆ. ರಾಜಾಕಾಲುವೆ ನಡುವೆ ಪ್ಲಾಸ್ಟಿಕ್ ವಸ್ತುಗಳು ಸಹಿತ ಕಸಕಡ್ಡಿಗಳು ಬಂದು ಗುಪ್ಪೆ ಬಿದ್ದಿರುವುದು ಗೋಚರಿಸುತ್ತಿದೆ.

    ರಾಜಾಕಾಲುವೆಗೆ ಆಟೋ ಚಾಲಕ ಬಲಿ; ಮಂಗಳೂರು ನಗರದ ಕೆಲವೆಡೆ ಜಲಾವೃತ
    ರಾಜಾಕಾಲುವೆಗೆ ಆಟೋ ಚಾಲಕ ಬಲಿ; ಮಂಗಳೂರು ನಗರದ ಕೆಲವೆಡೆ ಜಲಾವೃತ
    ರಾಜಾಕಾಲುವೆಗೆ ಆಟೋ ಚಾಲಕ ಬಲಿ; ಮಂಗಳೂರು ನಗರದ ಕೆಲವೆಡೆ ಜಲಾವೃತ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts