More

    ಸಿಲಿಕಾನ್​ ವ್ಯಾಲಿಗೆ ಸಿಲಿಕಾನ್​ ಸಿಟಿಯಿಂದ ವಿಮಾನ ಸೇವೆ

    ಬೆಂಗಳೂರು: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನನಿಲ್ದಾಣದಿಂದ ಅಮೆರಿಕಾದ ಸ್ಯಾನ್​ ್ರಾನ್ಸಿಸ್ಕೋಗೆ ಏರ್​ ಇಂಡಿಯಾ 2021ರ ಜ. 11ರಿಂದ ನೇರ ವಿಮಾನ ಸೇವೆ ಆರಂಭಿಸುತ್ತಿದೆ.
    ಕೆಐಎಯಿಂದ ಅಂತಾರಾಷ್ಟ್ರೀಯ ವಿಮಾನ ಸೇವೆಯನ್ನು ವಿಸ್ತರಿಸಲಾಗುತ್ತಿದೆ. ಅದರಂತೆ ಜರ್ಮನಿ, ಅರಬ್​ ದೇಶಗಳು ಹೀಗೆ ಹಲವು ನಗರಗಳಿಗೆ ವಿಮಾನ ಸೇವೆ ನೀಡಲಾಗಿದೆ. ಇದೀಗ ಕೆಐಎನಿಂದ ಅಮೆರಿಕಾದ ಸ್ಯಾನ್​್ರಾಸಿಸ್ಕೋಗೆ ಏರ್​ ಇಂಡಿಯಾ ಸಂಸ್ಥೆ ವಿಮಾನಯಾನ ಸೇವೆ ಆರಂಭಿಸುತ್ತಿದೆ. ಇದು ಏರ್​ ಇಂಡಿಯಾದ ಅತಿ ಉದ್ದದ ವಿಮಾನ ಸೇವೆಯಾಗಿರಲಿದ್ದು, 2021ರ ಜ. 11ರಿಂದ 14 ಸಾವಿರ ಕಿ.ಮೀ. ವಾಯು ಸೇವೆ ನೀಡಲಾಗುತ್ತದೆ. ಕೆಐಎನಲ್ಲಿ ಹೊರಡುವ ವಿಮಾನ, ದೆಹಲಿಯ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನನಿಲ್ದಾಣದಲ್ಲಿ ಇಳಿದು, ನಂತರ ನೇರವಾಗಿ ಸ್ಯಾನ್​್ರಾನ್ಸಿಸ್ಕೋದ ಅಂತಾರಾಷ್ಟ್ರೀಯ ವಿಮಾನನಿಲ್ದಾಣಕ್ಕೆ ತೆರಳಲಿದೆ.
    ನೂತನ ಮಾರ್ಗದಲ್ಲಿ 238 ಆಸನ ಸಾಮರ್ಥ್ಯದ ಬೋಯಿಂಗ್​ 777&200 ವಿಮಾನದ ಮೂಲಕ ಸೇವೆ ನೀಡಲಾಗುತ್ತದೆ. ಈ ಸೇವೆಯಿಂದಾಗಿ ವಿಶ್ವದ ಸಿಲಿಕಾನ್​ ವ್ಯಾಲಿ ಮತ್ತು ಭಾರತದ ಸಿಲಿಕಾನ್​ ವ್ಯಾಲಿ ನಡುವೆ ವಿಮಾನ ಹಾರಾಟ ಆರಂಭವಾದಂತಾಗಲಿದೆ. ಒಟ್ಟು 16 ಗಂಟೆಯ ಹಾರಾಟವಿರಲಿದ್ದು, ವಾರದಲ್ಲಿ ಎರಡು ದಿನ ಸೇವೆ ನೀಡಲಾಗುತ್ತದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts